ಚನ್ನಕೇಶವ ನಗರಕ್ಕೆ ಮೂಲಸೌಕರ್ಯ ಕಲ್ಪಿಸಿ

ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಅವರನ್ನು 8ನೇ ವಾರ್ಡ್‌ನ ಚನ್ನಕೇಶವ ನಗರ ನಿವಾಸಿಗಳು ಸನ್ಮಾನಿಸಿ ಮೂಲಸೌಲಭ್ಯಗಳನ್ನು ಕಲ್ಪಿಸಿ ಕೊಡುವಂತೆ ಮನವಿ ಸಲ್ಲಿಸಿದರು. ನಿಂಗರಾಜ್, ವೀರಭದ್ರಯ್ಯ, ಮಂಜುನಾಥ್, ಅಭಿ, ನೇತ್ರಾವತಿ, ಗೀತಾ, ಪ್ರೇಮಾ ಇದ್ದರು.
ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಅವರನ್ನು 8ನೇ ವಾರ್ಡ್‌ನ ಚನ್ನಕೇಶವ ನಗರ ನಿವಾಸಿಗಳು ಸನ್ಮಾನಿಸಿ ಮೂಲಸೌಲಭ್ಯಗಳನ್ನು ಕಲ್ಪಿಸಿ ಕೊಡುವಂತೆ ಮನವಿ ಸಲ್ಲಿಸಿದರು. ನಿಂಗರಾಜ್, ವೀರಭದ್ರಯ್ಯ, ಮಂಜುನಾಥ್, ಅಭಿ, ನೇತ್ರಾವತಿ, ಗೀತಾ, ಪ್ರೇಮಾ ಇದ್ದರು.
Published on
ಬೇಲೂರು: ಚನ್ನಕೇಶವ ನಗರದಲ್ಲಿ ಸಾರ್ವಜನಿಕರಿಗೆ ಅಗ್ಯ ಮೂಲ ಸೌಲಭ್ಯಗಳಿಲ್ಲ. ಜನರು ಓಡಾಡಲು ರಸ್ತೆ ಇಲ್ಲ. ಕಡಿಯುವ ನೀರಿನ ಸೌಲಭ್ಯ ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸಿ ಕೊಡಬೇಕೆಂದು ಪುರಸಭೆಗೆ ಸೇರಿದ 8ನೇ ವಾರ್ಡ್‌ನ ನಿವಾಸಿಗಳು ಗುರುವಾರ ಪುರಸಭೆ ನೂತನ ಅಧ್ಯಕ್ಷ ಅಕ್ರಂ ಷರೀಫ್ ಅವರಿಗೆ ಮನವಿ ಸಲ್ಲಿಸಿದರು.
ಮಾನವ ಹಕ್ಕು ಹೋರಾಟಗಾರರ ಒಕ್ಕೂಟ ಜಿಲ್ಲಾಧ್ಯಕ್ಷ ನಿಂಗರಾಜ್ ಮಾತನಾಡಿ, ಪುರಸಭೆಗೆ ಸೇರಿದ 8ನೇ ವಾರ್ಡ್‌ನಲ್ಲಿ ವಾಸಿಸುವವರು ಒಂದು ರೀತಿ ಕುಗ್ರಾಮದಲ್ಲಿದ್ದೇವೆ ಎನ್ನುವಂತಾಗಿದೆ. ಅಲ್ಲಿನ ಸಾರ್ವಜನಿಕರು ಓಡಾಡಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಸಾಕಷ್ಟು ವರ್ಷಗಳಿಂದ ರಸ್ತೆ ಸಮಸ್ಯೆ ಬಗೆಹರಿದಿಲ್ಲ. ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆ ಕಲ್ಪಿಸಿಕೊಡಬೇಕು. ಅಧ್ಯಕ್ಷರು ಒಮ್ಮೆ ನಮ್ಮ ವಾರ್ಡ್‌ಗೆ ಭೇಟಿ ನೀಡಿದರೆ ಅಲ್ಲಿನ ಸಮಸ್ಯೆಗಳು ಕಣ್ಣಿಗೆ ಗೋಚರಿಸುತ್ತವೆ. ಆದ್ದರಿಂದ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ. ಅಲ್ಲದೆ, ಸಮುದಾಯ ಭವನ ಶಿಥಿಲಾವಸ್ಥೆ ತಲುಪಿದ್ದು ದುರಸ್ತಿಗೆ ಮುಂದಾಗಬೇಕು. ಪಡಿತರ ವಿತರಣಾ ಕೊಠಡಿ ಚಾವಣಿಗಳು ಹಾಳಾಗಿದ್ದರಿಂದ ನೀರು ಒಳ ಬರುತ್ತಿದೆ. ಇದನ್ನು ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಮಾತನಾಡಿ, ಶೀಘ್ರ ವಾರ್ಡ್‌ಗೆ ಭೇಟಿ ನಿಡಿ ಅಲ್ಲಿನ ಕುಂದು ಕೊರತೆ ಪರಿಶೀಲಿಸುತ್ತೇನೆ. ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಚನ್ನಕೇಶವ ನಗರದ ನಿವಾಸಿಗಳಾದ ವೀರಭದ್ರಯ್ಯ, ಮಂಜುನಾಥ್, ಅಭಿ, ನೇತ್ರಾವತಿ, ಗೀತಾ, ಪ್ರೇಮಾ, ಪ್ರಭು, ಯಶೋದಮ್ಮ, ಇಂದ್ರಾಣಿ, ಭಾರತಿ, ನಾಗರತ್ನಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net