ಬಲವಂತ ಭೂಸ್ವಾಧೀನ ವಿರೋಧಿಸಿ ಪ್ರತಿಭಟನೆ

ಹಾಸನ ತಾಲೂಕು ಕಸಬಾ ಹೋಬಳಿಯ ಲಕ್ಷ್ಮೀಸಾಗರ ಗ್ರಾಮದ ಸರ್ವೇ ನಂಬರ್ 35 ರಲ್ಲಿ ರೈತರು ಕಾನೂನುಬದ್ಧವಾಗಿ ಸ್ವಾಧೀನದಲ್ಲಿಟ್ಟುಕೊಂಡಿರುವ ಕೃಷಿ ಭೂಮಿಯನ್ನು ಪರಿಹಾರ ನೀಡದೆ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಡಿಬಿ) ಮುಂದಾಗಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಹಾಸನ ಜಿಲ್ಲಾ ಸಮಿತಿ ಪ್ರತಿಭಟನೆ ನಡೆಸಿತು.
ಹಾಸನ ತಾಲೂಕು ಕಸಬಾ ಹೋಬಳಿಯ ಲಕ್ಷ್ಮೀಸಾಗರ ಗ್ರಾಮದ ಸರ್ವೇ ನಂಬರ್ 35 ರಲ್ಲಿ ರೈತರು ಕಾನೂನುಬದ್ಧವಾಗಿ ಸ್ವಾಧೀನದಲ್ಲಿಟ್ಟುಕೊಂಡಿರುವ ಕೃಷಿ ಭೂಮಿಯನ್ನು ಪರಿಹಾರ ನೀಡದೆ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಡಿಬಿ) ಮುಂದಾಗಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಹಾಸನ ಜಿಲ್ಲಾ ಸಮಿತಿ ಪ್ರತಿಭಟನೆ ನಡೆಸಿತು.
Published on

ಪ್ರಮುಖ ಮುಖ್ಯಾಂಶಗಳು

  • ಬಲವಂತ ಭೂಸ್ವಾಧೀನ ವಿರೋಧಿಸಿ ಪ್ರತಿಭಟನೆ
ಹಾಸನ: ಹಾಸನ ತಾಲೂಕು ಕಸಬಾ ಹೋಬಳಿಯ ಲಕ್ಷ್ಮೀಸಾಗರ ಗ್ರಾಮದ ಸರ್ವೇ ನಂ.35 ರಲ್ಲಿ ರೈತರು ಕಾನೂನುಬದ್ಧವಾಗಿ ಸ್ವಾಧೀನದಲ್ಲಿಟ್ಟುಕೊಂಡಿರುವ ಕೃಷಿ ಭೂಮಿಯನ್ನು ಪರಿಹಾರ ನೀಡದೆ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಂದಾಗಿದೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಪ್ರತಿಭಟನೆ ನಡೆಸಿತು. ಬಳಿಕ ಹಾಸನ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕೆಪಿಆರ್‌ಎಸ್ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್‌ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, 1985ರಲ್ಲಿ ಸರ್ಕಾರವು 26 ರೈತ ಕುಟುಂಬಗಳಿಗೆ ತಲಾ 0.26 ಎಕರೆ ಕೃಷಿ ಭೂಮಿಯನ್ನು ಮಂಜೂರು ಮಾಡಿ ಹಕ್ಕುಪತ್ರ ನೀಡಿತ್ತು. ಅಂದಿನಿಂದಲೂ ಈ ಕುಟುಂಬಗಳು ನಿರಂತರವಾಗಿ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬೆಳೆ ಬೆಳೆಸುತ್ತಿದ್ದು, ಪಹಣಿಗಳಲ್ಲಿಯೂ ಅವರ ಹೆಸರುಗಳು ದಾಖಲಾಗಿವೆ. 1997ರಲ್ಲಿ ಹಾಸನ ವಿಮಾನ ನಿಲ್ದಾಣಕ್ಕಾಗಿ ಕೆಐಎಡಿಬಿ ಭೂಸ್ವಾಧೀನ ನಡೆಸಿ, ರೈತರು ಸ್ವಾಧೀನದಲ್ಲಿದ್ದ ಭೂಮಿಯ ಒಂದು ಭಾಗವನ್ನು ಪಡೆದು ಪರಿಹಾರ ನೀಡಿತ್ತು. ಆದರೆ, ಉಳಿದ ಭೂಮಿಯನ್ನು ರೈತರು ಇಂದಿಗೂ ಕೃಷಿಗೆ ಬಳಸಿಕೊಂಡು ಬರುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಉಳಿಕೆ ಭೂಮಿಯನ್ನೂ ತಮ್ಮದಾಗಿಸಿಕೊಳ್ಳಲು ಕೆಐಎಡಿಬಿ ಬಲವಂತದ ಕ್ರಮಕ್ಕೆ ಮುಂದಾಗಿದ್ದು, ರೈತರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಂಡಿದೆ. ಈ ಮಧ್ಯೆ ಕೆಐಎಡಿಬಿಯೇ 2024ರ ಡಿಸೆಂಬರ್ 20ರಂದು ಕೇಂದ್ರ ಕಚೇರಿಗೆ ಪತ್ರ ಬರೆದು, ಶೇ.50ರಷ್ಟು ಹಣ ಪಾವತಿಸಿ ವರ್ಗಾಯಿಸಿಕೊಂಡಿದ್ದ 12 ಎಕರೆ 22 ಗುಂಟೆ ಭೂಮಿಯನ್ನು ಹಿಂಪಡೆದು, ಹೊಸದಾಗಿ ನಿಯಮಾನುಸಾರ ಭೂಸ್ವಾಧೀನ ಮಾಡಿ ಖಾತೆದಾರರಿಗೆ ಪರಿಹಾರ ಪಾವತಿಸಲು ನಿರ್ದೇಶನ ಕೋರಿ ಪತ್ರ ಬರೆದಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಈ ನಡುವೆ ಕೆಐಎಡಿಬಿಯ ವಿಳಂಬ ನೀತಿಯಿಂದ ಪ್ರೇರಿತರಾದ ಬುವನಹಳ್ಳಿ ಗ್ರಾಮದ ಗೌಡಯ್ಯ, ಶಿವರಾಮು ಸೇರಿದಂತೆ ಕೆಲವರು ಅಕ್ರಮವಾಗಿ ರೈತರು ಸಾಗುವಳಿ ಮಾಡುತ್ತಿದ್ದ ಕೃಷಿಭೂಮಿಯನ್ನು ಅಗೆದು ನಾಶಪಡಿಸುತ್ತಿದ್ದು, ಮಣ್ಣನ್ನು ಸರ್ವೇ ನಂಬರ್ 35ರಲ್ಲಿರುವ ಚಿಕ್ಕಟ್ಟೆ ಕೆರೆಯ ಜಾಗದಲ್ಲಿ ಹಾಕಿ ಮುಚ್ಚುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ರೈತ ಸಂಘ ಗಂಭೀರ ಆರೋಪ ಮಾಡಿದೆ. ಅಲ್ಲದೆ ಖಾಲಿ ಇರುವ ಸರ್ಕಾರಿ ಭೂಮಿಯನ್ನೂ ಅಕ್ರಮವಾಗಿ ಕಬಳಿಸಲು ಯತ್ನ ನಡೆಯುತ್ತಿದೆ ಎಂದು ದೂರಿದರು.
ಜಿಲ್ಲಾಧಿಕಾರಿ ಅವರು ತಕ್ಷಣ ಮಧ್ಯಪ್ರವೇಶಿಸಿ ಅಕ್ರಮ ಒತ್ತುವರಿಯನ್ನು ತಡೆಯಬೇಕು, ರೈತರು ಅನುಭವದಲ್ಲಿರುವ ಉಳಿಕೆ ಭೂಮಿಯನ್ನು ಕಾನೂನುಬದ್ಧವಾಗಿ ದುರಸ್ತು ಮಾಡಿಸಬೇಕು ಹಾಗೂ ಇಂದಿನ ಮಾರುಕಟ್ಟೆ ದರದಲ್ಲಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ವಿಮಾನ ನಿಲ್ದಾಣಕ್ಕಾಗಿ ಕೃಷಿಭೂಮಿ ಕಳೆದುಕೊಂಡ ರೈತರು ನಿರ್ಗತಿಕ ಸ್ಥಿತಿಗೆ ತಲುಪಿರುವುದರಿಂದ, ಪರ್ಯಾಯವಾಗಿ ಸರ್ವೇ ನಂ.35ರಲ್ಲಿರುವ ಉಳಿಕೆ ಸರ್ಕಾರಿ ಭೂಮಿಯನ್ನು ಭೂಮಿ ಕಳೆದುಕೊಂಡ ಬಡ ರೈತರಿಗೆ ಹಂಚಿಕೆ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕೆಪಿಆರ್‌ಎಸ್ ಗ್ರಾಮ ಘಟಕ ಅಧ್ಯಕ್ಷ ಎಂ.ಬಿ.ಮೂರ್ತಿ, ಗ್ರಾಮ ಘಟಕ ಕಾರ್ಯದರ್ಶಿ ಜಯಲಕ್ಷ್ಮೀ ಭಾರತೀ, ಸುಮಿತ್ರಾ, ರತ್ನಮ್ಮ, ಯಮುನಾಶ್ರೀ, ಲಕ್ಷ್ಮೀಸಾಗರ ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net