ಕಾಮಗಾರಿಗೆ ಗುತ್ತಿಗೆ ನೀಡಿದ್ದರೂ ಪರಿಷ್ಕೃತ ವೆಚ್ಚದ ಅಂದಾಜಿಗೆ ಬೆಂಗಳೂರಿನ ಪ್ರಾದೇಶಿಕ ಅಧಿಕಾರಿಗಳ ಅನುಮೋದನೆ ದೊರೆಯದ ಕಾರಣ ಯೋಜನೆ ಆರಂಭವಾಗಿಲ್ಲ. ಆಡಳಿತಾತ್ಮಕ ವಿಳಂಬದಿಂದಾಗಿ ಭೂಸ್ವಾಧೀನ ಪರಿಹಾರ ಮೊತ್ತದ ವಿಮರ್ಶೆಯೂ ಬಾಕಿ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು. ರಸ್ತೆ ಹದಗೆಟ್ಟ ಸ್ಥಿತಿ ಮತ್ತು ಇದರಿಂದ ಸ್ಥಳೀಯ ಪ್ರಯಾಣಿಕರು, ಪ್ರವಾಸಿಗರು ಹಾಗೂ ರೈತರು ಎದುರಿಸುತ್ತಿರುವ ತೀವ್ರ ತೊಂದರೆಯನ್ನು ವಿವರಿಸಿದರು.