ಖಾಸಗಿ ಬಂಡವಾಳ ಹೂಡಿಕೆಯಿಂದ ದೇಶಕ್ಕೆ ಮಾರಕ

ಹಾಸನದ ಸಿಐಟಿಯು ಕಚೇರಿ ಶ್ರಮದಲ್ಲಿ ವಿಮಾ ನಿಗಮ ನೌಕರರ ಸಂಘ ಮೈಸೂರು ವಿಭಾಗದಿಂದ ಆಯೋಜಿಸಿದ ವಿಚಾರ ಸಂಕಿರಣದಲ್ಲಿ ಎಸ್.ಕೆ.ರಾಮು ಮಾತನಾಡಿದರು. ಧರ್ಮೇಶ್, ವಿಶ್ವನಾಥ್ ಇತರರಿದ್ದರು.
ಹಾಸನದ ಸಿಐಟಿಯು ಕಚೇರಿ ಶ್ರಮದಲ್ಲಿ ವಿಮಾ ನಿಗಮ ನೌಕರರ ಸಂಘ ಮೈಸೂರು ವಿಭಾಗದಿಂದ ಆಯೋಜಿಸಿದ ವಿಚಾರ ಸಂಕಿರಣದಲ್ಲಿ ಎಸ್.ಕೆ.ರಾಮು ಮಾತನಾಡಿದರು. ಧರ್ಮೇಶ್, ವಿಶ್ವನಾಥ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಖಾಸಗಿ ಬಂಡವಾಳ ಹೂಡಿಕೆಯಿಂದ ದೇಶಕ್ಕೆ ಮಾರಕ
  • ವಿಮಾ ನೌಕರರ ಸಂಘದ ಮೈಸೂರು ವಿಭಾಗದ ಅಧ್ಯಕ್ಷ ಎಸ್.ಕೆ. ರಾಮು ಆತಂಕ
ಹಾಸನ: ದೇಶದ ಸ್ವಾಯತ್ತ ಸಂಸ್ಥೆ ಲಕ್ಷಾಂತರ ಕೋಟಿ ರೂ. ಬಂಡವಾಳ ಹೊಂದಿರುವ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದಲ್ಲಿ ಖಾಸಗಿ ಬಂಡವಾಳದ ಹೂಡಿಕೆಗೆ ಅವಕಾಶ ನೀಡಿರುವುದು ದೇಶಕ್ಕೆ ಮಾರಕ ಎಂದು ವಿಮಾ ನೌಕರರ ಸಂಘದ ಮೈಸೂರು ವಿಭಾಗದ ಅಧ್ಯಕ್ಷ ಎಸ್.ಕೆ. ರಾಮು ಆತಂಕ ವ್ಯಕ್ತಪಡಿಸಿದರು.
ಹಾಸನದ ಸಿಐಟಿಯು ಕಚೇರಿ ಶ್ರಮದಲ್ಲಿ ವಿಮಾ ನಿಗಮ ನೌಕರರ ಸಂಘ ಮೈಸೂರು ವಿಭಾಗದಿಂದ ಆಯೋಜನೆ ಮಾಡಲಾಗಿದ್ದ ಭಾರತದ ಆರ್ಥಿಕತೆಯಲ್ಲಿ ಸಾರ್ವಜನಿಕ ವಲಯ ವಿಮಾ ರಂಗದ ಮಹತ್ವ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು. ದೇಶದ ಎಲ್ಲ ಜನರಿಗೂ ವಿಮಾ ಸುರಕ್ಷತೆ ಕೊಡಬೇಕು ಎನ್ನುವ ಉದ್ದೇಶದ ಸೇವಾ ಸಂಸ್ಥೆ ಎಲ್‌ಐಸಿಯನ್ನು ಈಗ ಲಾಭದ ಉದ್ದೇಶದ ಸಂಸ್ಥೆಯಾಗಿ ಮಾಡಲಾಗುತ್ತಿದೆ. ಎಲ್‌ಐಸಿಯ ಬಂಡವಾಳ ಜನರ ಬಂಡವಾಳ, ಇದು ಹೂಡಿಕೆದಾರರ ಪಾಲಾಗುವಂತೆ ಮಾಡುವ ಯೋಜನೆ ಆಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜನರಿಗೆ ಈ ಬಗ್ಗೆ ಅರಿವು ಬರಬೇಕು, ದೇಶದ ಆರ್ಥಿಕತೆ ಸದೃಢವಾಗಿ ಇರಬೇಕಾದರೆ ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತಷ್ಟು ಸದೃಢ ಆಗಬೇಕು. ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಹೂಡಿಕೆ ಹಿಂತೆಗೆತ ನಿಲ್ಲಬೇಕು. ಇಂತಹ ದೇಶದ ಸಾರ್ವಜನಿಕ ವಲಯದ ಸಂಸ್ಥೆ ಉಳಿಸುವ ನಿಟ್ಟಿನಲ್ಲಿ ನಡೆಯುವ ಹೋರಾಟದಲ್ಲಿ ಜನರು ಭಾಗಿಯಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಧರ್ಮೇಶ್, ವಿಮಾ ನೌಕರರ ಸಂಘದ ಮೈಸೂರು ವಿಭಾಗದ ಜಂಟಿ ಕಾರ್ಯದರ್ಶಿ ವಿಶ್ವನಾಥ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net