ಮಕ್ಕಳು ಸೋಮಾರಿಗಳಾಗುವುದನ್ನು ತಪ್ಪಿಸಿ

ಬೇಲೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಬೇಲೂರು ಕ್ರಿಕೆಟ್ ಕ್ಲಬ್(ಬಿಸಿಸಿ)ವತಿಯಿಂದ ಆಯೋಜಿಸಿರುವ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡು ತರಬೇತಿ ಪಡೆಯುತ್ತಿರುವ ಮಕ್ಕಳು.
ಬೇಲೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಬೇಲೂರು ಕ್ರಿಕೆಟ್ ಕ್ಲಬ್(ಬಿಸಿಸಿ)ವತಿಯಿಂದ ಆಯೋಜಿಸಿರುವ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡು ತರಬೇತಿ ಪಡೆಯುತ್ತಿರುವ ಮಕ್ಕಳು.
Published on

ಪ್ರಮುಖ ಮುಖ್ಯಾಂಶಗಳು

  • ಬೇಲೂರು ಕ್ರಿಕೆಟ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ್ ಸಲಹೆ
ಬೇಲೂರು: ಬೇಲೂರು ಕ್ರಿಕೆಟ್ ಕ್ಲಬ್(ಬಿಸಿಸಿ)ವತಿಯಿಂದ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಮಕ್ಕಳ ಬೇಸಿಗೆ ಶಿಬಿರದಲ್ಲಿ ಗುರುವಾರ 30ಕ್ಕೂ ಹೆಚ್ಚು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರಿಂದ ಮೈದಾನ ಕಳೆಗಟ್ಟಿತ್ತು.
ಬೇಲೂರು ಕ್ರಿಕೆಟ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸುವುದರ ಜತೆಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಗಟ್ಟಿಯಾಗಿಸುವುದು ಸಂಸ್ಥೆ ಉದ್ದೇಶವಾಗಿದೆ. ಇಂದಿನ ದಿನಗಳಲ್ಲಿ ಮಕ್ಕಳಿಗೆ ದೈಹಿಕ ಶ್ರಮದ ಅವಶ್ಯಕತೆ ತುಂಬ ಇದೆ. ರಜಾ ಅವಧಿಯಲ್ಲಿ ಮಕ್ಕಳು ಮನೆಯಲ್ಲೇ ಕುಳಿತು ಸೋಮಾರಿಗಳಾಗುವುದನ್ನು ತಪ್ಪಿಸಿ, ಮೈದಾನದಲ್ಲಿ ಬೆವರು ಸುರಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಪ್ರೇರೇಪಿಸಲಾಗುತ್ತಿದೆ. ಕ್ರಿಕೆಟ್ ತಂತ್ರಗಳ ಜತೆಗೆ ಓಟ, ವ್ಯಾಯಾಮಕ್ಕೆ ಆದ್ಯತೆ ನೀಡಲಾಗುತ್ತಿದೆ. ಪಾಲಕರು ತಮ್ಮ ಮಕ್ಕಳಿಗೆ ಹೆಚ್ಚಾಗಿ ಜಂಕ್ ಫುಡ್‌ಗಳನ್ನು ಕೊಡದೆ ಚಪಾತಿ, ಮುದ್ದೆ, ಧಾನ್ಯಗಳ ಆಹಾರ ನೀಡಬೇಕು ಎಂದು ಸಲಹೆ ನೀಡಿದರು.
ಸಂಸ್ಥೆ ಕಾರ್ಯದರ್ಶಿ ರುದ್ರೇಶ್, ಉಪಾಧ್ಯಕ್ಷ ಧರಣೇಶ್, ಕೋಚ್ ಹರೀಶ್ ಬಾಬು, ಶ್ರೀವತ್ಸ, ನಿಂಗರಾಜು, ಸುಬ್ರಹ್ಮಣ್ಯ, ವಿನಯ್, ಸೂಫಿಯನ್, ಸುದೀಪ್, ಶ್ರುತಿಲ್, ಹಿತೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net