ಜಿಲ್ಲೆಯ ಪ್ರತಿಯೊಂದು ಇಲಾಖೆ ವತಿಯಿಂದ ನಗರ, ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಸಿರು ಹಾಸನ ಅಭಿಯಾನದಡಿ ಕೆರೆ ಏರಿಗಳು, ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು, ಕ್ರೀಡಾಂಗಣದ ಆವರಣ, ಆಟದ ಮೈದಾನಗಳು, ಉದ್ಯಾನವನದ ಸುತ್ತ, ರಾಷ್ಟ್ರೀಯ-ರಾಜ್ಯ ಹೆದ್ದಾರಿ ಅಕ್ಕ-ಪಕ್ಕ, ರಸ್ತೆ ವಿಭಜಕ, ಆಸ್ಪತ್ರೆ ಆವರಣ, ಖಾಲಿ ಇರುವ ಸರ್ಕಾರಿ ಜಾಗದಲ್ಲಿ 5 ಲಕ್ಷ ಗಿಡಗಳನ್ನು ನೆಟ್ಟು ಬೆಳೆಸಬೇಕು ಎಂದರು.