ನಾನು ಬೇರೆಯವರಂತೆ ಎಲ್ಲೂ ಹೋಗಲ್ಲ, ಹಾಸನದಲ್ಲೇ ಇರುತ್ತೇನೆ. ಚಿಕ್ಕ ವಯಸ್ಸಿನಿಂದಲೂ ರಾಜಕೀಯದಲ್ಲಿ ಇದ್ದೇನೆ. ಜನಸೇವೆಯೇ ನನ್ನ ಗುರಿ. ನಾನು ಮೈತ್ರಿ ಧರ್ಮ ಪಾಲನೆಗೆ ಬದ್ಧ ಎಂದ ಅವರು, ಜಿಪಿಎ ಬರೆದುಕೊಟ್ಟಿಲ್ಲ ಎಂಬ ಹೇಳಿಕೆಗೆ ಮುಂದೆ ನೋಡೋಣ ಬಿಡಿ ಎಂದರು. ನಾನು ಬಹಳ ತಾಳ್ಮೆಯಿಂದ ರಾಜಕೀಯ ಮಾಡುತ್ತಿದ್ದೇನೆ. ಭಾವೋದ್ವೇಗಕ್ಕೆ ಒಳಗಾಗುವವನಲ್ಲ. ನಮ್ಮ ತಂದೆ ಸೌಮ್ಯತೆ ಕಲಿಸಿಕೊಟ್ಟಿದ್ದಾರೆ. ದೊಡ್ಡವರಾದ ದೇವೇಗೌಡರು, ರೇವಣ್ಣ ಅವರು, ಕುಮಾರಣ್ಣ ಅವರ ಗರಡಿಯಲ್ಲಿ ಬೆಳೆದಿದ್ದೇನೆ ಎಂದರು.