ತಾಲೂಕಿನ ಮಾವನೂರಿನ ಸರ್ಕಾರಿ ಜಾಗದಲ್ಲಿ ಏಕಾಏಕಿ ಖಬರಸ್ತಾನ್ ನಿರ್ಮಿಸಿದ್ದು, ಅದನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಶಿರಸ್ತೇದಾರ್‌ಗೆ ಸೋಮವಾರ ಮನವಿ ಸಲ್ಲಿಸಿದರು.
ಆಲೂರು: ತಾಲೂಕಿನ ಮಾವನೂರಿನ ಸರ್ಕಾರಿ ಜಾಗದಲ್ಲಿ ಏಕಾಏಕಿ ಖಬರಸ್ತಾನ್ ನಿರ್ಮಿಸಿದ್ದು, ಅದನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಹಿಂದೂಪರ ಸಂಘಟನೆ ಕಾರ್ಯಕರ್ತರು ಶಿರಸ್ತೇದಾರ್‌ಗೆ ಸೋಮವಾರ ಮನವಿ ಸಲ್ಲಿಸಿದರು.
ಗ್ರಾಮದ ಸರ್ವೇ ನಂ.99ರಲ್ಲಿ ಸ್ಮಶಾನ ತಲೆ ಎತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ ಸೇರಿರುವ ಜಾಗ ಅದಾಗಿದ್ದು ಕೆರೆ ಸಮೀಪದಲ್ಲೇ ಇರುವುದರಿಂದ ನಿತ್ಯ ನೂರಾರು ಜನರು ಬರುತ್ತಾರೆ. ಜಾನುವಾರುಗಳಿಗೆ ನೀರು ಕುಡಿಸಲು, ಬಟ್ಟೆ ತೊಳೆಯಲು ಗ್ರಾಮಸ್ಥರು ಬರುತ್ತಾರೆ. ಏಕಾಏಕಿ ಖಬರಸ್ತಾನ್ ನಿರ್ಮಿಸಿರುವುದರಿಂದ ತೊಂದರೆಯಾಗಿದೆ. ಮುಂದೆ ರಸ್ತೆ ಅಭಿವೃದ್ಧಿ ಸಮಯದಲ್ಲಿ ತೆರವು ಮಾಡದಿದ್ದರೆ ಗಲಭೆ ಸೃಷ್ಟಿಯಾಗುವ ಸಾಧ್ಯತೆಯಿದೆ. ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದವರು ಹಾಕಿರುವ ಕಬ್ಬಿಣದ ಸುರಕ್ಷತಾ ಸರಳುಗಳನ್ನು ಮುರಿದು ದಾರಿ ಮಾಡಿಕೊಂಡಿರುವುದು ಸರಿಯಲ್ಲ. ಕೆರೆ ಜಾಗ ಒತ್ತುವರಿ ಮಾಡಿಕೊಂಡಿದ್ದು ಸರ್ವೇ ಮಾಡಿ ಹಾಗೂ ದಾಖಲೆ ಪರಿಶೀಲಿಸಿ ಒತ್ತುವರಿ ತೆರವುಗೊಳಿಸಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಹಿಂದೂ ಸಂಘಟನೆ ಮುಖಂಡರಾದ ರಘು ಸಕಲೇಶಪುರ, ಧರ್ಮೇಶ್, ದುಷ್ಯಂತ್ ಗೌಡ, ಸಂತೋಷ್, ಮಹೇಶ್ ಹಾಜರಿದ್ದರು.