ಈ ಬೆಡ್‌ಗಳಲ್ಲಿ ಒಆರ್‌ಎಸ್, ಐವಿ ಫ್ಲೂಯಿಡ್, ಆಕ್ಸಿಜನ್ ಮತ್ತು ಕೂಲಿಂಗ್ ವ್ಯವಸ್ಥೆ ಮಾಡಲಾಗಿದೆ. ಸನ್‌ಸ್ಟ್ರೋಕ್ ಆದಾಗ ದೇಹದ ತಾಪಮಾನ 104 ಡಿಗ್ರಿ ಫ್ಯಾರನ್‌ಹೀಟ್ ಮೀರುತ್ತದೆ. ತಲೆಸುತ್ತು, ವಾಂತಿ, ಪ್ರಜ್ಞೆ ತಪ್ಪುವುದು ಇದರ ಲಕ್ಷಣಗಳು. ತಕ್ಷಣ ನೆರಳಿಗೆ ಕರೆದುಕೊಂಡು ಹೋಗಿ, ದೇಹಕ್ಕೆ ತಣ್ಣೀರು ಒತ್ತಿ, ತಕ್ಷಣ ಆಸ್ಪತ್ರೆಗೆ ಕರೆತರಬೇಕು. ಸ್ವಯಂ ಚಿಕಿತ್ಸೆ ಮಾಡಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ.