ರಸ್ತೆ ಬದಿ ತ್ಯಾಜ್ಯ ಸುರಿದಿದ್ದಕ್ಕೆ ದಂಡ

ಹಾಸನ ನಗರದ ಕೆ.ಆರ್.ಪುರಂ 7ನೇ ಕ್ರಾಸ್‌ನಲ್ಲಿರುವ ರೆಸ್ಟೋಲೆಕ್ಸ್ ಎಂ.ಡಿ. ಫರ್ನಿಚರ್ಸ್ ಅಂಗಡಿಯ ಎದುರು ಪಾಲಿಕೆಯಿಂದ ಕಸ ಸುರಿಯಲಾಯಿತು.
ಹಾಸನ ನಗರದ ಕೆ.ಆರ್.ಪುರಂ 7ನೇ ಕ್ರಾಸ್‌ನಲ್ಲಿರುವ ರೆಸ್ಟೋಲೆಕ್ಸ್ ಎಂ.ಡಿ. ಫರ್ನಿಚರ್ಸ್ ಅಂಗಡಿಯ ಎದುರು ಪಾಲಿಕೆಯಿಂದ ಕಸ ಸುರಿಯಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಬದಿ ತ್ಯಾಜ್ಯ ಸುರಿದಿದ್ದಕ್ಕೆ ದಂಡ
  • ಅಂಗಡಿ ಮುಂಭಾಗವೇ ಕಸ ಸುರಿದ ಪಾಲಿಕೆ
ಹಾಸನ: ನಗರದ ಕೆ.ಆರ್.ಪುರಂ 7ನೇ ಕ್ರಾಸ್‌ನಲ್ಲಿರುವ ರೆಸ್ಟೋಲೆಕ್ಸ್ ಎಂ.ಡಿ. ಫರ್ನಿಚರ್ಸ್ ಅಂಗಡಿಯವರು ಪ್ರತಿದಿನ ತ್ಯಾಜ್ಯ ವಸ್ತುಗಳನ್ನು ಕಸದ ಗಾಡಿಗೆ ಹಾಕದೆ ರಸ್ತೆ ಬದಿ ಹಾಗೂ ಇತರರ ಜಾಗದಲ್ಲಿ ಸುರಿದ ಹಿನ್ನೆಲೆಯಲ್ಲಿ ಹಾಸನ ಮಹಾನಗರ ಪಾಲಿಕೆ ಕಠಿಣ ಕ್ರಮ ಕೈಗೊಂಡಿದೆ.
ಮಹಾನಗರ ಪಾಲಿಕೆಯ ಹೆಲ್ತ್ ಇನ್‌ಸ್ಪೆಕ್ಟರ್‌ಗಳಾದ ಶಶಿಧರ್‌ರಾಜ್ ಮತ್ತು ಆಶಾ ಅವರ ನೇತೃತ್ವದಲ್ಲಿ ಭಾನುವಾರ ಬೆಳಗ್ಗೆ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ಮಾಲೀಕರ ಎದುರಲ್ಲೇ ಅವರ ಅಂಗಡಿ ಮುಂಭಾಗದಲ್ಲಿ ಕಸ ಸುರಿದು ದಂಡ ವಿಧಿಸಲಾಯಿತು.
ಇದು ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶವಾಗಿದ್ದು, ನಗರ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಅಂಗಡಿ ಮಾಲೀಕರಿಗೆ ಹಲವು ಬಾರಿ ಕಸ ವಿಲೇವಾರಿ ಕುರಿತು ತಿಳಿವಳಿಕೆ ನೀಡಲಾಗಿತ್ತು. ಆದರೆ, ಎಚ್ಚರಿಕೆಗಳನ್ನು ನಿರ್ಲಕ್ಷಿಸಿ ಪ್ರತಿದಿನವೂ ರಸ್ತೆ ಬದಿಯಲ್ಲಿ ಕಸ ಸುರಿಯುವುದು ಮುಂದುವರಿದ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯವಾಯಿತು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಪಷ್ಟಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net