ಡನಾಯಕನಹಳ್ಳಿ ಸಂಪರ್ಕ ರಸ್ತೆಗೆ ಡಾಂಬರೀಕರಣ

ಬೇಲೂರು ತಾಲೂಕಿನ ಡನಾಯಕನಹಳಿ ಹಾಗೂ ಮಂಚನಾಯಕನಹಳ್ಳಿ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಚ್.ಕೆ.ಸುರೆಶ್ ಭೂಮಿಪೂಜೆ ನೆರವೇರಿಸುತ್ತಿರುವುದು. ಎಂ.ಎ.ನಾಗರಾಜ್, ಸಹಾಯಕ ಇಂಜಿನಿಯರ್ ಸೋಮಶೇಖರ್, ಮಂಜುನಾಥ್, ಡನಾಯಕನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕುಮಾರ್, ಗ್ರಾಮಸ್ಥರಾದ ಶಿವಣ್ಣ, ಆನಂದ್, ಪರಮೇಶ್, ಫಾರುಖ್, ಪ್ರೇಮಮ್ಮ ಇತರರಿದ್ದರು.

Published on

ಬೇಲುರು:

ತಾಲೂಕಿನ ಡನಾಯಕನಹಳ್ಳಿ ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಸಂಪರ್ಕ ರಸ್ತೆಗೆ ಲೋಕೋಪಯೋಗಿ ಇಲಾಖೆಯಿಂದ ಸಿಮೆಂಟ್ ರಸ್ತೆ ಹಾಗೂ ಚಿಕ್ಕಮಗಳೂರು ರಸ್ತೆಯಿಂದ ಹಳೇಬೀಡು ಸಂಪರ್ಕ ಕಲ್ಪಿಸುವ ಮಂಚನಾಯಕನಹಳ್ಳಿ ರಸ್ತೆಗೆ ಶಾಸಕ ಎಚ್.ಕೆ.ಸುರೇಶ್ ಶನಿವಾರ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ಬೇಲೂರು ಪಟ್ಟಣ ಸಮೀಪದ ಡನಾಯಕನಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಹದಗೆಟ್ಟಿತ್ತು. ಪರಿಣಾಮ ಪ್ರವಾಸಿಗರು ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಿತ್ತು. ಗ್ರಾಮಸ್ಥರು, ರೈತರು ಮಕ್ಕಳು ಮಳೆಗಾಲದಲ್ಲಿ ಓಡಾಡಲು ಸಾಧ್ಯವಾಗುತ್ತಿರಲಿಲ್ಲ.
ಹಾಗಾಗಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಅದೇ ರೀತಿ ಮಂಚನಾಯಕನಹಳ್ಳಿ ರಸ್ತೆಯೂ ತೀವ್ರವಾಗಿ ಗುಂಡಿ ಬಿದ್ದು ಓಡಾಡಲು ಕಷ್ಟವಾಗುತಿತ್ತು. ಚಿಕ್ಕಮಗಳೂರು-ಹಳೇಬೀಡಿಗೆ ಪ್ರವಾಸಿಗರು ಇದೇ ರಸ್ತೆ ಬಳಸುವುದರಿಂದ ಗ್ರಾಮಸ್ಥರು ಮತ್ತು ಪ್ರವಾಸಿಗರ ಅನುಕೂಲಕ್ಕಾಗಿ ಚಿಕ್ಕಮಗಳೂರು ರಸ್ತೆಯಿಂದ ಹಳೇಬೀಡು ರಸ್ತೆವರೆಗೆ 1.60 ಕೋಟಿ ರೂ. ಅನುದಾನದಲ್ಲಿ ಡಾಂಬರ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ ಎಂದರು.
ಹಾಸನ ಜಿಲ್ಲಾ ಸಹಕಾರ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಎಂ.ಎ.ನಾಗರಾಜ್ ಮಾತನಾಡಿ, ಡನಾಯಕನಹಳ್ಳಿ ಗ್ರಾಮವು ಪಟ್ಟಣಕ್ಕೆ ಹತ್ತಿರವಿದ್ದರೂ ಹಿಂದುಳಿದ ಗ್ರಾಮವಾಗಿದೆ. ಇಲ್ಲಿ ಅಲ್ಪಸಂಖ್ಯಾತರು, ದಲಿತರು ಸೇರಿದಂತೆ ಇತರ ವರ್ಗದವರು ವಾಸವಿದ್ದಾರೆ. ಇಲ್ಲಿ ಈ ಗ್ರಾಮ ಮತ್ತು ಮಂಚನಾಯಕನಹಳ್ಳಿ ಸಂಪರ್ಕ ರಸ್ತೆಯಾಗಿದ್ದು, ರಸ್ತೆ ಅಭಿವೃದ್ಧಿಯಿಂದ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ ಎಂದರು.
ಸಹಾಯಕ ಇಂಜಿನಿಯರ್ ಸೋಮಶೇಖರ್, ಮಂಜುನಾಥ್, ಡನಾಯಕನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕುಮಾರ್, ಗ್ರಾಮಸ್ಥರಾದ ಶಿವಣ್ಣ, ಆನಂದ್, ಪರಮೇಶ್, ಫಾರುಖ್, ಪ್ರೇಮಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net