ಕಾರ್ಯಕ್ರಮದ ಅಂಗವಾಗಿ ವಿವಿಧ ವ್ಯಾಪಾರ, ಕೈಗಾರಿಕೆ ಮತ್ತು ಸ್ವಉದ್ಯೋಗ ಮಳಿಗೆಗಳನ್ನು ಸೋಮಶೇಖರ ಸ್ವಾಮೀಜಿ ಉದ್ಘಾಟಿಸಿದರು. ಪತ್ರಕರ್ತ ಬಿ.ಆರ್. ಉದಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಪರಮೇಶ್, ವೀರಶೈವ ಲಿಂಗಾಯತ ಸಂಘದ ಜಿಲ್ಲಾಧ್ಯಕ್ಷ ಬಿ.ಪಿ. ಐಸಾಮಿಗೌಡ, ಎಂಟಿಇಎಸ್ ಅಧ್ಯಕ್ಷ ಬಿ.ಆರ್. ಗುರುದೇವ್ ಸೇರಿದಂತೆ ಸಂಗಂ, ಮುಕ್ತಾಂಬ, ಗ್ರಾನೈಟ್ ರಾಜಶೇಖರ್, ಕಟ್ಟಾಯ ಶಿವಕುಮಾರ್, ಮಮತಾ ಪಾಟೀಲ್, ಮನುಕುಮಾರ್, ವಿಕಾಸ್ ಅಶೋಕ್ ಕುಮಾರ್, ಗೀರಿಜಾಂಭಿಕೆ, ಧನಲಕ್ಷ್ಮೀ, ಶೋಭಾ ಚಂದ್ರಶೇಖರ್, ವೀಣಾ ದೇವರಾಜ್, ಭಾಮಿನಿ ಹೇಮಂತ್, ಶೈಲಾ ಮದನ್ ಇತರರಿದ್ದರು.