ಭಾರತವನ್ನು ಕತ್ತಲ ದೇಶ, ಹಾವಾಡಿಗರ ದೇಶ, ಅನಕ್ಷರಸ್ಥರ ನಾಡು ಎಂದು ಅಲ್ಲಗಳೆಯಲಾಗುತ್ತಿತ್ತು. ಈ ದೇಶ ಅಷ್ಟೊಂದು ಬಡತನದಲ್ಲಿದ್ದಿದ್ದರೆ 800 ವರ್ಷಗಳ ಕಾಲ ವಿದೇಶಿಗರು ಏಕೆ ಆಳ್ವಿಕೆ ಮಾಡಿದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಭಾರತ ಜಗತ್ತಿನ ಅತ್ಯಧಿಕ ಶ್ರೀಮಂತ ರಾಷ್ಟ್ರವಾಗಿತ್ತು. ಕರಕುಶಲ ವಸ್ತುಗಳ ತಯಾರಿಕೆ, ವಾಸ್ತುಶಿಲ್ಪ, ಶಿಕ್ಷಣ, ವಿಜ್ಞಾನ, ಕಲೆ, ಸಾಹಿತ್ಯದಲ್ಲಿ ಭಾರತ ವಿಶ್ವಕ್ಕೆ ಮಾದರಿಯಾಗಿತ್ತು. ಅದೇ ರೀತಿ ಭಿನ್ನ ವಿಭಿನ್ನ ಜಾತಿ, ಆಚಾರಗಗಳಿದ್ದವು. ಅದೆಲ್ಲವನ್ನೂ ಒಗ್ಗೂಡಿಸುವುದು ಸವಾಲಿನ ಕೆಲಸವಾಗಿತ್ತು. ಅಂತಹ ಸಂದರ್ಭದಲ್ಲಿ ಆರ್‌ಎಸ್‌ಎಸ್ ತನ್ನದೇಯಾದ ಯೋಜನೆ ಮೂಲಕ ಅಸ್ತಿತ್ವ ತಾಳಿತು. ಹಿಂದುತ್ವದ ಹೆಸರಿನಲ್ಲಿ ಎಲ್ಲರನ್ನೂ ಒಳಗೊಳ್ಳುವ ಪ್ರಯತ್ನ ಮಾಡುತ್ತಿದೆ. ವಿವಿಧತೆಯಲ್ಲೇ ದೇಶವನ್ನು ಒಂದು ಮಾಡಬೇಕೆಂಬ ಉದ್ದೇಶದಿಂದ ಕೆಲಸ ಮಾಡುತ್ತಿದೆ ಎಂದರು.