ಜಿಲ್ಲಾಡಳಿತದಿಂದ ಪರಿನಿರ್ವಾಣ ದಿನ

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಪರಿ ನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಂಸದ ಶ್ರೇಯಸ್ ಪಟೇಲ್ ಪುಷ್ಪಾರ್ಚನೆ ಮಾಡಿದರು. ಡಿಸಿ ಲತಾಕುಮಾರಿ, ಸಿಇಒ ಪೂರ್ಣಿಮಾ, ಎಸ್ಪಿ ಮೊಹಮ್ಮದ್ ಸುಜೀತಾ, ದೂದ್ ಫೀರ್ ಇತರರಿದ್ದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಪರಿ ನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಂಸದ ಶ್ರೇಯಸ್ ಪಟೇಲ್ ಪುಷ್ಪಾರ್ಚನೆ ಮಾಡಿದರು. ಡಿಸಿ ಲತಾಕುಮಾರಿ, ಸಿಇಒ ಪೂರ್ಣಿಮಾ, ಎಸ್ಪಿ ಮೊಹಮ್ಮದ್ ಸುಜೀತಾ, ದೂದ್ ಫೀರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಡಳಿತದಿಂದ ಪರಿನಿರ್ವಾಣ ದಿನ
  • ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಂಸದ ಶ್ರೇಯಸ್ ಎಂ.ಪಟೇಲ್
ಹಾಸನ: ದೇಶದಲ್ಲಿ ಎಲ್ಲರೂ ಸ್ವತಂತ್ರವಾಗಿ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಡಾ. ಬಿ.ಆರ್ ಅಂಬೇಡ್ಕರ್. ಇಂದು ಎಲ್ಲರೂ ಅವರು ಹಾಕಿ ಕೊಟ್ಟಿರುವ ದಾರಿಯಲ್ಲಿ ಸಾಗೋಣ ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಹೇಳಿದರು.
ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಏನು ಹೇಳಿ ಬಣ್ಣಿಸಿದರೂ ಕಡಿಮೆಯೇ, ವರ್ಷದ 365 ದಿನವೂ ಅಂಬೇಡ್ಕರ್ ಬಗೆಗೆ ನಾವು ತಿಳಿದುಕೊಂಡರೂ ಸಾಲದು. ಹಾಗಾಗಿ ಸಂವಿಧಾನದ ಕುರಿತು ಎಲ್ಲರಿಗೂ ತಿಳಿ ಹೇಳಬೇಕು ಎಂದರಲ್ಲದೆ, ಇಂತಹ ಅಂಬೇಡ್ಕರ್ ಅವರು ಮತ್ತೆ ಮತ್ತೆ ಜನಿಸಿ ಬರಲಿ ಎಂದರು.
ಜಿಲ್ಲಾಧಿಕಾರಿ ಲತಾ ಕುಮಾರಿ ಮಾತನಾಡಿ, ಇಂದು 69ನೇ ಪರಿನಿರ್ವಾಣ ದಿನವನ್ನು ಆಚರಿಸುತ್ತಿದ್ದೇವೆ. ಇದು ನಮ್ಮೆಲ್ಲರ ಸುದೈವ, ಈ ದಿನ ಬಹಳ ದುಃಖಕರವಾಗಿದೆ. ಅಂಬೇಡ್ಕರ್ ಅವರು ಇನ್ನೂ ಸ್ವಲ್ಪ ದಿನಗಳು ನಮ್ಮೊಟ್ಟಿಗೆ ಇರಬೇಕಾಗಿತ್ತು. ನಮ್ಮ ದೇಶಕ್ಕೆ, ಜನತೆಗೆ ಅವರ ಅವಶ್ಯಕತೆ ಬಹಳ ಇತ್ತು. ಅವರು ಜಗತ್ತಿಗೆ, ದೇಶಕ್ಕೆ ನೀಡಿರುವ ಕೊಡುಗೆಗಳನ್ನು ನಾವು ಇಂದು ನೆನಪು ಮಾಡಿಕೊಳ್ಳುತ್ತಿದ್ದೇವೆ ಎಂದರು.
ಅಂಬೇಡ್ಕರ್ ಅವರು ಸಂವಿಧಾನದ ಜೀವಾಳ ಎಂದೇ ಹೇಳಬಹುದು. ಎಲ್ಲರೂ ಇಂದು ಸಮಾನತೆಯಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ ಎಂದರೆ ಅದು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿರುವ ಸಮಾನತೆಯಿಂದಾಗಿದೆ. ಇಂದು ಎಲ್ಲರೂ ಅವರಿಗೆ ಗೌರವವನ್ನು ನೀಡುವ ಮೂಲಕ ಪರಿನಿರ್ವಾಣ ದಿನವನ್ನು ಆಚರಿಸೋಣ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್ ಪೂರ್ಣಿಮಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ದೂದ್ ಫೀರ್, ಸಮುದಾಯದ ಮುಖಂಡರು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net