ಮಧ್ಯಾರಾಧನೆ ಪ್ರಯುಕ್ತ ಶ್ರೀ ವಾಸುದೇವಾಚಾರ್ ಮತ್ತು ಜಿ.ಎಸ್.ವಾದಿರಾಜ ಆಚಾರ್ಯರ ನೇತೃತ್ವದಲ್ಲಿ ಮುಂಜಾನೆ ಉಷಾಕಾಲ ಪೂಜೆ ಧಾರ್ಮಿಕ ಕಾರ್ಯಗಳು ಆರಂಭವಾದವು. ಹಾಲು, ಮೊಸರು, ತುಪ್ಪ, ಜೇನು ತುಪ್ಪ, ಹಣ್ಣು, ಗೋಡಂಬಿ, ಒಣದ್ರಾಕ್ಷಿ ಸೇರಿ ವಿವಿಧ ಪದಾರ್ಥಗಳಿಂದ ಪಂಚಾಮೃತ ಅಭಿಷೇಕ, ಬಳಿಕ ರಜತ ಕವಚದೊಂದಿಗೆ ಅಲಂಕಾರ. ರಾಯರ ಪಾದಪೂಜೆ ಹಾಗೂ ಬೃಂದಾವನಕ್ಕೆ ಹೂ ಅಲಂಕಾರ ನೆರವೇರಿತು. ಜತೆಯಲ್ಲಿ ಅಲಂಕಾರ ಪಂಕ್ತಿಯ ಬ್ರಾಹ್ಮಣ ಪೂಜೆ ಮತ್ತು ಮಹಾಮಂಗಳಾರತಿ ಇನ್ನಿತರ ಧಾರ್ಮಿಕ ಕಾರ್ಯಗಳು ವಿಧಿವತ್ತಾಗಿ ಸಂಪನ್ನಗೊಂಡವು.