ಮಾನಸಿಕ ನೆಮ್ಮದಿಗೆ ಚಿತ್ರಕಲೆ ಸಹಕಾರಿ

ಒಡನಾಡಿ ಚಿತ್ರಕಲಾ ಬಳಗದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಇತ್ತೀಚೆಗೆ ಚಿತ್ರಕಲಾ ಪ್ರದರ್ಶನ, ಹಾಗೂ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಾ.ಹೆಬ್ಬಾಲೆ ನಾಗೇಶ್, ಗೊರೂರು ಅನಂತರಾಜು, ಗಣೇಶ್, ಗ್ಯಾರಂಟಿ ರಾಮಣ್ಣ, ಸುನಂದಾ ಕೃಷ್ಣಮೂರ್ತಿ ಇತರರಿದ್ದರು.
ಒಡನಾಡಿ ಚಿತ್ರಕಲಾ ಬಳಗದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಇತ್ತೀಚೆಗೆ ಚಿತ್ರಕಲಾ ಪ್ರದರ್ಶನ, ಹಾಗೂ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಡಾ.ಹೆಬ್ಬಾಲೆ ನಾಗೇಶ್, ಗೊರೂರು ಅನಂತರಾಜು, ಗಣೇಶ್, ಗ್ಯಾರಂಟಿ ರಾಮಣ್ಣ, ಸುನಂದಾ ಕೃಷ್ಣಮೂರ್ತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾನಸಿಕ ನೆಮ್ಮದಿಗೆ ಚಿತ್ರಕಲೆ ಸಹಕಾರಿ
  • ಡಾ.ಹೆಬ್ಬಾಲೆ ನಾಗೇಶ್ ಅಭಿಪ್ರಾಯ
  • ಕಲಾವಿದರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಹಾಸನ: ಮನುಷ್ಯನಲ್ಲಿರುವ ಅಂತರಾತ್ಮದ ನೆಲೆಯನ್ನು ಹೊರಹಾಕಿ ಮನಸ್ಸಿಗೆ ನೆಮ್ಮದಿ ಕಲ್ಪಿಸುವಲ್ಲಿ ಚಿತ್ರಕಲೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹಿರಿಯ ಸಾಹಿತಿ ಡಾ.ಹೆಬ್ಬಾಲೆ ನಾಗೇಶ್ ತಿಳಿಸಿದರು.
ಒಡನಾಡಿ ಚಿತ್ರಕಲಾ ಬಳಗದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಹಾನಂಬ ಕಲಾಕ್ಷೇತ್ರದ ಆವರಣದಲ್ಲಿ ಇತ್ತೀಚೆಗೆ ಚಿತ್ರಕಲಾ ಪ್ರದರ್ಶನ ಹಾಗೂ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಡೀ ಹಾಸದ ಘಟನೆಯನ್ನು ಒಂದು ಚಿತ್ರ ಬಣ್ಣಿಸಬಹುದಾದ ಶಕ್ತಿ ಹೊಂದಿದೆ ಎಂದು ವಿವರಿಸಿದರು. ಇತ್ತೀಚಿನ ದಿನಗಳಲ್ಲಿ ಚಿತ್ರಕಲೆ ನಶಿಸಿ ಹೋಗುತ್ತಿದೆ. ಅವುಗಳನ್ನು ಉಳಿಸಿ ಬೆಳೆಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಕಲೆ ನಿಂತ ನೀರಾಗಬಾರದು, ಹರಿಯುವ ನೀರಾಗಬೇಕು. ಮಕ್ಕಳಲ್ಲಿ ಕಲೆಗಳನ್ನು ಉತ್ತೇಜಿಸುವ ಕೆಲಸ ಮಾಡಬೇಕು. ಚಿತ್ರಕಲೆ ಇತ್ತೀಚೆಗೆ ಆರ್ಥಿಕವಾಗಿಯೂ ಸಹಕಾರಿಯಾಗಿದೆ. ಇದನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಈ ಹಿಂದೆ ನಡೆದಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಹಿರಿಯ ಲೇಖಕ ಗೊರೂರು ಅನಂತರಾಜು, ಅಂಕಪುರ ಪ.ಪೂ. ಕಾಲೇಜು ನಿವೃತ್ತ ಪ್ರಾಂಶುಪಾಲ ಗಣೇಶ್, ಹಿರಿಯ ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ, ಜನಪದ ಗಾಯಕಿ ಸುನಂದಾ ಕೃಷ್ಣಮೂರ್ತಿ, ಗೋಡೆಬರಹಗಾರ ಯಾಕೂಬ್, ಖ್ಯಾತ ಚಿತ್ರಕಲಾವಿದ ವಸಂತ್ ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net