ಹುಲಿಕೆರೆ ಗ್ರಾಮದಲ್ಲಿ ಅದ್ದೂರಿ ರಂಗಹಬ್ಬ

ನುಗ್ಗೇಹಳ್ಳಿ ಹೋಬಳಿಯ  ಹುಲಿಕೆರೆ  ಗ್ರಾಮದಲ್ಲಿ ಶ್ರೀ ಕಾಲಭೈರವೇಶ್ವರಸ್ವಾಮಿ ಶ್ರೀಆಲದ ಮರದಮ್ಮ ದೇವಿ ರಂಗ ಹಬ್ಬದ ಪ್ರಯುಕ್ತ ಗ್ರಾಮಸ್ಥರು ಸೋಮವಾರ ರಂಗ ಕುಣಿತಕ್ಕೆ ಹೆಜ್ಜೆ ಹಾಕಿದರು.
ನುಗ್ಗೇಹಳ್ಳಿ ಹೋಬಳಿಯ ಹುಲಿಕೆರೆ ಗ್ರಾಮದಲ್ಲಿ ಶ್ರೀ ಕಾಲಭೈರವೇಶ್ವರಸ್ವಾಮಿ ಶ್ರೀಆಲದ ಮರದಮ್ಮ ದೇವಿ ರಂಗ ಹಬ್ಬದ ಪ್ರಯುಕ್ತ ಗ್ರಾಮಸ್ಥರು ಸೋಮವಾರ ರಂಗ ಕುಣಿತಕ್ಕೆ ಹೆಜ್ಜೆ ಹಾಕಿದರು.
Published on
ನುಗ್ಗೇಹಳ್ಳಿ: ಹೋಬಳಿಯ ಹುಲಿಕೆರೆ ಗ್ರಾಮದಲ್ಲಿ ಶ್ರೀಕಾಲಭೈರವೇಶ್ವರಸ್ವಾಮಿ, ಶ್ರೀಆಲದ ಮರದಮ್ಮ ದೇವಿಯ ರಂಗದ ಹಬ್ಬ ಸೋಮವಾರ ವಿಜೃಂಭಣೆಯಿಂದ ಜರುಗಿತು.
ರಂಗ ಹಬ್ಬದ ಅಂಗವಾಗಿ ಮಾ.8ರಿಂದ ಮಾ.22ರವರೆಗೆ 15 ದಿನಗಳು ಪ್ರತಿನಿತ್ಯ ರಂಗ ಕುಣಿತ ನೆರವೇರಿತು.
ಮಾ.23ರಂದು ಬೆಳಗ್ಗೆ ಶ್ರೀಕಾಲಭೈರವೇಶ್ವರ ಮತ್ತು ಶ್ರೀಆಲದ ಮರದಮ್ಮ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ ಹೂವಿನ ಅಲಂಕಾರ ಸೇರಿದಂತೆ ವಿವಿಧ ಪೂಜೆಗಳು ನೆರವೇರಿದವು.
ಶ್ರೀಭೈರವೇಶ್ವರಸ್ವಾಮಿ ದೇಗುಲದಲ್ಲಿ ಪ್ರತಿನಿತ್ಯ ಪೂಜಿಸುತ್ತಿದ್ದ ಕಂಬಗಳನ್ನು ರಂಗದ ಹಬ್ಬದ ಕೊನೆಯ ದಿನದಂದು ಗ್ರಾಮ ದೇವತೆ ಉತ್ಸವದೊಂದಿಗೆ ರಂಗ ಕುಣಿತ ನಡೆಸಿ ರಂಗ ಕುಣಿತಕ್ಕೆಂದು ತರಲಾಗಿದ್ದ ಕಂಬಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಗ್ರಾಮದ ಕಲ್ಯಾಣಿಗೆ ಶಾಸ್ತ್ರೋಕ್ತವಾಗಿ ಪೂಜಾ ಸಲ್ಲಿಸಿ ನೀರಿಗೆ ಬಿಡಲಾಯಿತು.
ರಂಗದ ಹಬ್ಬದ ಅಂಗವಾಗಿ ಗ್ರಾಮದ ರಾಜಬೀದಿಗಳಲ್ಲಿ ದೇವರುಗಳ ಉತ್ಸವದೊಂದಿಗೆ ಶ್ರೀಕಾಲಭೈರವೇಶ್ವರಸ್ವಾಮಿ ದೇವಾಲಯದಲ್ಲಿ ಭಾನುವಾರ ಬೆಳಗ್ಗೆ ಹಾಗೂ ಸಂಜೆ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ಭಾನುವಾರ ರಾತ್ರಿ ದೊಡ್ಡಬಳ್ಳಾಪುರದ ದಿನ್ನೆ ಆಂಜನೇಯಸ್ವಾಮಿ ಪ್ರತ್ಯಂಗಿರಾ ಮಹಾಕಾಳಿ ಬಸವ ಸಂಗಮ ಕ್ಷೇತ್ರ ತಿರುಮಗೊಂಡನಹಳ್ಳಿ ಬಸವಣ್ಣನವರ ವಿಶೇಷ ಉತ್ಸವ ಗ್ರಾಮದಲ್ಲಿ ನೆರವೇರಿತು. ಚಿಂತನ ಯಕ್ಷಗಾನ ಬಳಗ ಸಾಗರ ತಂಡದವರಿಂದ ‘ಚಂದ್ರಹಾಸ ಚರಿತ್ರೆ’ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು.
ಶ್ರೀಆಲದ ಮರದಮ್ಮ ಸಂಘ, ಶ್ರೀಕೆಂಪೇಗೌಡ ಗೆಳೆಯರ ಬಳಗ, ಶ್ರೀಕಾಲಭೈರವೇಶ್ವರಸ್ವಾಮಿ ಸಂಘದ ವತಿಯಿಂದ ರಂಗದ ಹಬ್ಬದ ಪ್ರಯುಕ್ತ ಪ್ರತಿದಿನ ಭಕ್ತರಿಗೆ ಅನ್ನ ಸಂತರ್ಪಣೆ ಹಾಗೂ ವಿವಿಧ ಉತ್ಸವಗಳನ್ನು ಸಂಘಗಳ ವತಿಯಿಂದ ಆಯೋಜಿಸಲಾಗಿತ್ತು.
ಪೂಜಾ ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಸದಸ್ಯೆ ಆಶಾದೇವಿ ಪ್ರಕಾಶ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸಂಪತ್‌ಕುಮಾರ್, ಗ್ರಾಪಂ ಮಾಜಿ ಸದಸ್ಯರಾದ ತೋಪೇಗೌಡ, ಚಂದ್ರೇಗೌಡ, ದೇವರಾಜ್, ನಾಗಮಣಿ ಪ್ರಕಾಶ್, ವೆಂಕಟೇಶ್, ಕೃಷ್ಣೆಗೌಡ, ರಂಗೇಗೌಡ, ಶ್ರೀನಿವಾಸ್, ಮುಖಂಡರಾದ ವಾರ್ಡನ್ ಮಹೇಶ್, ವೆಂಕಟೇಶ್, ರಂಗಸ್ವಾಮಿ, ಪ್ರಕಾಶ್, ನಾಗೇಶ್, ಶಿವಸ್ವಾಮಿ, ಶಂಕರೇಗೌಡ, ಶಶಿಕಲಾ, ಗುಡಿಗೌಡ ಉಮೇಶ್, ಪಟೇಲ್ ಶಂಕರೇಗೌಡ, ಬಿಜೆಪಿ ಶಂಕರಣ್ಣ, ಗ್ರಾಮದ ಎಲ್ಲ ಸಂಘಗಳ ಸದಸ್ಯರು, ಹುಲಿಕೆರೆ ಸೇರಿದಂತೆ ಸುತ್ತಮುತ್ತಲ ಅನೇಕ ಗ್ರಾಮಗಳ ಗ್ರಾಮಸ್ಥರು ರಂಗ ಹಬ್ಬದಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net