ಸಾಮಾಜಿಕ ಬದ್ಧತೆ ಕಲಿಸಲಿದೆ ಎನ್‌ಎಸ್‌ಎಸ್ ಶಿಬಿರ

ಹಾಸನ ತಾಲೂಕಿನ ಅಂಕಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ಹಾಗೂ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು. ನಿಚಿತಾ ಕುಮಾರಿ, ಹೇಮಂತ್ ಗೌಡ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಜಕುಮಾರ್, ಪಿಡಿಒ ಸುರೇಶ್, ಶಿಕ್ಷಕ ನಾಗರಾಜು, ವಿಜಯ್ ಕುಮಾರ್, ಅಭೀಷೇಕ್ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಬದ್ಧತೆ ಕಲಿಸಲಿದೆ ಎನ್‌ಎಸ್‌ಎಸ್ ಶಿಬಿರ
  • ಶಾಸಕ ಸಿಮೆಂಟ್ ಮಂಜು ಅಭಿಪ್ರಾಯ
ಹಾಸನ: ತಾಲೂಕಿನ ಅಂಕಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು ಹಾಗೂ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಶಾಸಕ ಸಿಮೆಂಟ್ ಮಂಜು ಬುಧವಾರ ಉದ್ಘಾಟಿಸಿದರು.
ನಂತರ ಮಾತನಾಡಿ, ವೈದ್ಯರ ಸೇವೆ ಸಾಮಾನ್ಯ ಉದ್ಯೋಗವಲ್ಲ. ಅದು ಯಜ್ಞ, ಅದು ರಾಷ್ಟ್ರಸೇವೆ. ಸೈನಿಕರು ದೇಶದ ಗಡಿಗಳನ್ನು ಕಾಯುತ್ತಾರೆ. ವೈದ್ಯರು ಜನರ ಪ್ರಾಣಗಳನ್ನು ಕಾಪಾಡುತ್ತಾರೆ. ಇಬ್ಬರೂ ಸಮಾನವಾಗಿ ರಾಷ್ಟ್ರಕ್ಕೆ ಅವಶ್ಯಕ ಯೋಧರು. ಶಿಬಿರಾರ್ಥಿಗಳಿಗೆ ಗ್ರಾಮೀಣ ಬದುಕನ್ನು ಅರ್ಥಮಾಡಿಕೊಳ್ಳುವಂತೆ, ಅಂಕಪುರದಲ್ಲಿನ ಕೃಷಿ ಪದ್ಧತಿಗಳು ಮತ್ತು ಸ್ಥಳೀಯರ ಜೀವನಶೈಲಿಯನ್ನು ತಿಳಿದುಕೊಳ್ಳುವಂತೆ ಸಲಹೆ ನೀಡಿದರು.
ಎನ್‌ಎಸ್‌ಎಸ್ ಶಿಬಿರಗಳು ಮಾತ್ರ ಸೇವಾ ಚಟುವಟಿಕೆಗಳಲ್ಲ. ಆದರೆ, ವಿದ್ಯಾರ್ಥಿಗಳಲ್ಲಿ ಶಿಸ್ತು, ಜವಾಬ್ದಾರಿ, ಮಾನವೀಯತೆ ಮತ್ತು ಸಾಮಾಜಿಕ ಬದ್ಧತೆಯನ್ನು ಬೆಳೆಸುವ ವೇದಿಕೆಗಳಾಗಿವೆ ಎಂದರು.
ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ನಿಚಿತಾ ಕುಮಾರಿ, ಹೇಮಂತ್ ಗೌಡ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಜಕುಮಾರ್, ಪಿಡಿಒ ಸುರೇಶ್, ಶಿಕ್ಷಕ ನಾಗರಾಜು, ವಿಜಯ್ ಕುಮಾರ್, ಅಭೀಷೇಕ್, ಹರ್ಷ, ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್, ರವಿಕುಮಾರ್, ಧನರಾಜ್, ಕುಮಾರ್, ರವಿ, ಡಾ.ಎ.ಪಿ.ರಾಜೇಂದ್ರ, ಕೆ.ಸಿ.ರೋಹಿತ್ ಗೌಡ, ಪ್ರಿಯಾಂಕಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net