ಮಾನವ ಹಕ್ಕುಗಳನ್ನು ಯಾರೂ ಮೊಟಕುಗೊಳಿಸದಿರಿ

ಹಾಸನ ನಗರದ ಸಾಲಗಾಮೆ ರಸ್ತೆ ಬಳಿ ಇರುವ ಎಂ.ಕೃಷ್ಣ ಕಾನೂನು ಕಾಲೇಜು ಸಭಾಂಗಣದಲ್ಲಿ ನಾಗರಿಕ ಹಕ್ಕುಗಳ ಸಂರಕ್ಷಣಾ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎಂ.ಕೃಷ್ಣ ಕಾನೂನು ಕಾಲೇಜು, ಸರ್ಕಾರಿ ಕಾನೂನು ಕಾಲೇಜು ಇವರ ಆಶ್ರಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ದೇವರಾಜು, ಅಬ್ದೂಲ್ ಹಮೀದ್, ಜಿ.ಕೆ. ದಾಕ್ಷಾಯಿಣಿ, ಎಂ. ಕೃಷ್ಣ ಕಾನೂನು ಕಾಲೇಜು ಪ್ರಾಂಶುಪಾಲ ಡಾ. ವಿ.ಶ್ರೀನಿವಾಸ್ ಇತರರಿದ್ದರು.
ಹಾಸನ ನಗರದ ಸಾಲಗಾಮೆ ರಸ್ತೆ ಬಳಿ ಇರುವ ಎಂ.ಕೃಷ್ಣ ಕಾನೂನು ಕಾಲೇಜು ಸಭಾಂಗಣದಲ್ಲಿ ನಾಗರಿಕ ಹಕ್ಕುಗಳ ಸಂರಕ್ಷಣಾ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎಂ.ಕೃಷ್ಣ ಕಾನೂನು ಕಾಲೇಜು, ಸರ್ಕಾರಿ ಕಾನೂನು ಕಾಲೇಜು ಇವರ ಆಶ್ರಯದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ದೇವರಾಜು, ಅಬ್ದೂಲ್ ಹಮೀದ್, ಜಿ.ಕೆ. ದಾಕ್ಷಾಯಿಣಿ, ಎಂ. ಕೃಷ್ಣ ಕಾನೂನು ಕಾಲೇಜು ಪ್ರಾಂಶುಪಾಲ ಡಾ. ವಿ.ಶ್ರೀನಿವಾಸ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ದೇವರಾಜು ಸಲಹೆ
  • ಮಾನವ ಹಕ್ಕುಗಳನ್ನು ಯಾರೂ ಮೊಟಕುಗೊಳಿಸದಿರಿ
ಹಾಸನ: ಮಾನವನಿಗೆ ಅವನ ಹುಟ್ಟಿನಿಂದಲೇ ದೊರೆಯುವ ಹಕ್ಕುಗಳೆಂದರೆ ಬದುಕು, ಮಾತನಾಡುವುದು, ಧರ್ಮ, ಭಾಷೆ, ಉದ್ಯೋಗ ಇವುಗಳನ್ನು ಯಾರೂ ಮೊಟಕು ಮಾಡಬಾರದು. ಇವುಗಳನ್ನು ಕಾಪಾಡುವುದು ನಮ್ಮ ಸಂವಿಧಾನ ಮತ್ತು ಸಮಾಜ ಎರಡರ ಜವಾಬ್ದಾರಿ ಎಂದು ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ದೇವರಾಜು ಹೇಳಿದರು.
ನಗರದ ಸಾಲಗಾಮೆ ರಸ್ತೆ ಬಳಿ ಇರುವ ಎಂ.ಕೃಷ್ಣ ಕಾನೂನು ಕಾಲೇಜು ಸಭಾಂಗಣದಲ್ಲಿ ಬುಧವಾರ ನಾಗರಿಕ ಹಕ್ಕುಗಳ ಸಂರಕ್ಷಣಾ ಸಂಘ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎಂ.ಕೃಷ್ಣ ಕಾನೂನು ಕಾಲೇಜು, ಸರ್ಕಾರಿ ಕಾನೂನು ಕಾಲೇಜು ಇವರ ಸಹಯೋಗದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಭೂಮಿ ಮೇಲೆ ಜೀವಿಸುವ ಸ್ವಾತಂತ್ರೃ, ಉದ್ಯೋಗ ಸೇರಿದಂತೆ ಇತರ ಮಾನವನ ಹಕ್ಕುಗಳಿವೆ. ಯಾರ ಹಕ್ಕುಗಳನ್ನು ಯಾರೂ ಮೊಟಕುಗೊಳಿಸಬಾರದು. ಮಾನವನ ಹಕ್ಕುಗಳು ಉಲ್ಲಂಘನೆಯಾದ ಪರಿಣಾಮ ಕಾನೂನುಗಳ ರಚನೆಯಾಗಿ ಜಾರಿಯಾಗುತ್ತಿದೆ. 1948ರಲ್ಲಿ ವಿಶ್ವ ಸಂಸ್ಥೆಯವರು ಮಾನವನ ಹಕ್ಕುಗಳ ಉಲ್ಲಂಘನೆ ಕುರಿತು ಡಿಸೆಂಬರ್ 10ರ ದಿನಾಂಕವನ್ನು ವಿಶ್ವ ಮಾನವ ಹಕ್ಕುಗಳ ದಿನವನ್ನಾಗಿ ಘೋಷಣೆ ಮಾಡಿದೆ. ಇದರ ಮುಖ್ಯ ಉದ್ದೇಶ ಏನೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ಅವರದೆ ಆದ ಕಾನೂನು ವ್ಯಾಪ್ತಿಯಾದಂತಹ ಜೀವನವನ್ನು ನಡೆಸುವುದು, ಮಾತನಾಡುವುದು ತನಗೆ ಸೂಕ್ತವಾದಂತಹ ಧರ್ಮ ಆಚರಣೆ ಮಾಡುವಂತಹ ಮತ್ತು ಸೂಕ್ತವಾದಂತಹ ಭಾಷೆಯಲ್ಲಿ ಮಾತನಾಡಲು ಉದ್ಯೋಗ ಮಾಡುವುದು ಸೇರಿದಂತೆ ಪ್ರತಿಯೊಂದು ಹಕ್ಕುಗಳಿವೆ. ಯಾವುದೇ ವ್ಯಕ್ತಿಗೆ ಲಿಂಗದ ಆಧಾರದ ಮೇಲೆ ಇಲ್ಲವೇ ಧರ್ಮದ ಆಧಾರದ ಮೇಲೆ ಮತ್ತೆ ಇತರ ಯಾವುದೇ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂದರು.
ಇತಿಹಾಸ ನೋಡಿದರೆ ತಾರತಮ್ಯ ಎಂಬುದು ಮೊದಲಿನಿಂದಲೂ ನಡೆಯುತ್ತಿದೆ. ಸ್ವಾತಂತ್ರೃದ ನಂತರ ಕೂಡ ತಾರತಮ್ಯವನ್ನು ಕಾಣುತ್ತಿದ್ದೇವೆ. ಒಂದು ಪುರುಷ ಮತ್ತು ಮಹಿಳೆಯರ ನಡುವೆ ತಾರತಮ್ಯ, ಲಿಂಗ ಶೋಷಣೆ, ಧರ್ಮ-ಧರ್ಮಗಳ ನಡುವೆ ವೈಮನಸ್ಸು, ಇನ್ನೊಂದು ಧರ್ಮವನ್ನು ದ್ವೇಷ ಮಾಡುವುದು, ಯಾವುದು ಕಡಿಮೆ ಹೆಚ್ಚು ಎಂದು ಎಂದು ಯಾವ ಧರ್ಮವು ಹೇಳುವುದಿಲ್ಲ. ನಮ್ಮ ಅನುಕೂಲಕ್ಕೆ ತಕ್ಕಂತೆ ಧರ್ಮವನ್ನು ಪಾಲಿಸುತ್ತಿದ್ದೇವೆ ಎಂದು ಹೇಳಿದರು.
ಎಪಿಸಿಆರ್ ಜಿಲ್ಲಾ ಛಾಪರ್ಸ್‌ ಜಿಲ್ಲಾಧ್ಯಕ್ಷ ಅಬ್ದೂಲ್ ಹಮೀದ್ ಮಾತನಾಡಿ, ಸಮಾಜದಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಮಾನವ ಗುಣ ಬೆಳೆಸಿಕೊಳ್ಳಬೇಕು. ಬದುಕಿದ್ದರೆ ಕಾನೂನು ಕಟ್ಟಲೆ, ಬದುಕೆ ಇಲ್ಲದಿದ್ದರೆ ಈ ಬಗ್ಗೆ ತಿಳಿಯಬೇಕು. ಪ್ರತಿ ಹಂತದಲ್ಲಿ ಮಾನವ ಹಕ್ಕುಗಳು ಅನ್ವಯಿಸುತ್ತದೆ. ಮಾನವ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಮಾನವ ಹಕ್ಕುಗಳ ರಕ್ಷಣೆ ಮಾಡುವ ಒಳ್ಳೆ ಕೆಲಸವನ್ನು ಕಾನೂನು ವಿದ್ಯಾರ್ಥಿಗಳಾಗಿ ಬೇರೆಯವರಿಗೆ ತಿಳಿಸಿ ಅನುಸರಿಸಬೇಕು. ಮಾನವ ಹಕ್ಕುಗಳು ಎಂದರೇ ಜೀವನಕ್ಕೆ ಬೇಕಾಗಿರುವ ಹಕ್ಕುಗಳಾಗಿದೆ. ಮನೆಯಲ್ಲಿ, ಶಾಲೆಯಿಂದಲೇ ಈ ಮಾನವ ಹಕ್ಕುಗಳು ಪ್ರಾರಂಭವಾಗುತ್ತದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಗೌರವ ಸದಸ್ಯ ಕಾರ್ಯದರ್ಶಿ ಜಿ.ಕೆ.ದಾಕ್ಷಾಯಿಣಿ, ಎಂ.ಕೃಷ್ಣ ಕಾನೂನು ಕಾಲೇಜು ಪ್ರಾಂಶುಪಾಲ ಡಾ.ವಿ.ಶ್ರೀನಿವಾಸ್, ಸರ್ಕಾರಿ ಕಾನೂನು ಕಾಲೇಜು ಪ್ರಾಂಶುಪಾಲರಾದ ಶೀನಾ ಥಾಮಸ್, ವಕೀಲ ಅನ್ಸದ್ ಪಾಳ್ಯ, ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ ಪ್ರಗತಿಪರ ಚಿಂತಕ ಎಚ್.ಕೆ.ವಿವೇಕಾನಂದ, ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎಸ್. ಶರಣ್ಯ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net