ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ, ಇಕೋ ಕ್ಲಬ್, ಹಿಮ್ಸ್, ಕರ್ನಾಟಕ ಮೆಡಿಸಿನಲ್ ಪ್ಲಾನ್ಟ್ ಹಾಗೂ ಆಕ್ರೂಡ್ ಸಂಸ್ಥೆ ಸಹಯೋಗದಲ್ಲಿ ಹಿಮ್ಸ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಪ್ರಹ್ಲಾದ್ ರಾವ್, ಡಾ. ಬಿ.ರಾಜಣ್ಣ, ಡಾ.ಸಿ.ವಿ.ಕವಿತಾ, ಡಾ.ಎಚ್.ಕೆ. ಪುಷ್ಪಾ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಿಸರ್ಗ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಡಾ.ಪ್ರಹ್ಲಾದ್‌ರಾವ್ ಅಭಿಪ್ರಾಯ
ಪರಿಸರ ದಿನಾಚರಣೆ
ಹಾಸನ: ವಿಶ್ವದ ಅನೇಕ ದೇಶಗಳು ಹವಾಮಾನ ವೈಪರೀತ್ಯದಿಂದಾಗಿ ಸಂಕಷ್ಟ ಅನುಭವಿಸುತ್ತಿವೆ. ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಹಾಗೂ ಪರಿಸರವನ್ನು ಸಂರಕ್ಷಣೆ ಮಾಡುವಲ್ಲಿ ಶ್ರಮವಹಿಸಲೇಬೇಕು ಎಂದು ಅನಂತಪುರ ಜೆಎನ್‌ಯುಟಿ ಮಾಜಿ ನಿರ್ದೇಶಕ ಡಾ.ಪ್ರಹ್ಲಾದ್‌ರಾವ್ ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ, ಇಕೋ ಕ್ಲಬ್, ಹಿಮ್ಸ್, ಕರ್ನಾಟಕ ಮೆಡಿಸಿನಲ್ ಪ್ಲಾನ್ಟ್ ಹಾಗೂ ಆಕ್ರೂಡ್ ಸಂಸ್ಥೆ ಇವರ ಸಹಯೋಗದೊಂದಿಗೆ ಶನಿವಾರ ಹಿಮ್ಸ್ ಸಂಸ್ಥೆಯಲ್ಲಿ ಆಯೋಜಿಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಮ್ಸ್ ಸಂಸ್ಥೆಯ ನಿರ್ದೇಶಕ ಡಾ. ಬಿ.ರಾಜಣ್ಣ ಮಾತನಾಡಿ, ಸಂಸ್ಥೆಯು ಪರಿಸರಕ್ಕೆ ಪೂರಕವಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಈ ಎಲ್ಲ ಹಿನ್ನೆಲೆಯಲ್ಲಿ ಹಿಮ್ಸ್ ಆವರಣ ಹಸಿರು ಮತ್ತು ಸ್ವಚ್ಛ ಸಂಸ್ಥೆಯಾಗಿ ರೂಪುಗೊಂಡಿದೆ ಹಾಗೂ ಆಸ್ಪತ್ರೆಗೆ ಭೇಟಿ ನೀಡುವ ಸಾರ್ವಜನಿಕರು ಹಾಗೂ ರೋಗಿಗಳು ಸ್ವಚ್ಛತೆಯನ್ನು ಕಾಪಾಡಿ, ಪರಿಸರ ಕಾರ್ಯಗಳಿಗೆ ಬೆಂಬಲ ನೀಡಬೇಕು ಎಂದರು.
ಅತಿಥಿಗಳಾದ ಕರ್ನಾಟಕ ಮೆಡಿಸಿನಲ್ ಪ್ಲಾನ್ಟ್ ಬೋರ್ಡ್‌ನ ಹಿರಿಯ ಸಲಹೆಗಾರ ಡಾ.ಎಂ.ಜೆ. ಪ್ರಭು ಮಾತನಾಡಿ, ಪರಿಸರವನ್ನು ನಾವು ರಕ್ಷಿಸಿದರೆ, ನಮ್ಮನ್ನು ಪರಿಸರ ರಕ್ಷಿಸುತ್ತದೆ ಎಂದರು. ಹಿಮ್ಸ್ ಸಂಸ್ಥೆಯ ಪ್ರಾಂಶುಪಾಲೆ ಡಾ.ಸಿ.ವಿ.ಕವಿತಾ ಪರಿಸರ ಸಂರಕ್ಷಣೆಯ ಪ್ರಮಾಣ ವಚನ ಬೋಧಿಸಿದರು. ಡಾ.ಬಿ.ಎಸ್.ಪ್ರಕಾಶ್ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು.
ಮಲೆನಾಡು ಜನಪರ ಹೋರಾಟ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್, ಕೆ.ಎನ್.ಗೋವಿಂದರಾಜು, ಆಕ್ರೂಡ್ ಸಂಸ್ಥೆ ನಿದೇಶಕಿ ಡಾ.ಎಚ್.ಕೆ. ಪುಷ್ಪಾ, ವೈದ್ಯಕೀಯ ಅಧೀಕ್ಷಕ ಡಾ.ರಾಘವೇಂದ್ರ ಪ್ರಸಾದ್ ಇತರರಿದ್ದರು.