900 ಕೋಟಿ ರೂ.ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣ

ಕಲ್ಕೆರೆ ಗ್ರಾಮದಲ್ಲಿ ನೂತನ ಡೇರಿ ಕಟ್ಟಡವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ದೊರೆಸ್ವಾಮಿ, ಸುರೇಶ್, ಮಂಜುಳಾ ತಿಮ್ಮೇಗೌಡ, ಸಾವಿತ್ರಮ್ಮ ರಮೇಶ್, ವಾಸು, ಅಶೋಕ್, ನಾಗೇಗೌಡ, ಬೈರೇಗೌಡ, ದೇವರಾಜ್, ಯೋಗೇಶ್ ಇದ್ದರು.
ಕಲ್ಕೆರೆ ಗ್ರಾಮದಲ್ಲಿ ನೂತನ ಡೇರಿ ಕಟ್ಟಡವನ್ನು ಶಾಸಕ ಸಿ.ಎನ್.ಬಾಲಕೃಷ್ಣ ಉದ್ಘಾಟಿಸಿದರು. ದೊರೆಸ್ವಾಮಿ, ಸುರೇಶ್, ಮಂಜುಳಾ ತಿಮ್ಮೇಗೌಡ, ಸಾವಿತ್ರಮ್ಮ ರಮೇಶ್, ವಾಸು, ಅಶೋಕ್, ನಾಗೇಗೌಡ, ಬೈರೇಗೌಡ, ದೇವರಾಜ್, ಯೋಗೇಶ್ ಇದ್ದರು.
Published on
ನುಗ್ಗೇಹಳ್ಳಿ: ಜಿಲ್ಲೆಯಲ್ಲಿ ಡೇರಿ ಉದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಹಾಸನದ ಕೌಶಿಕ ಬಳಿ 900 ಕೋಟಿ ರೂ.ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣವಾಗುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಹೋಬಳಿಯ ಕಲ್ಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಿಂದ ನಿರ್ಮಿಸಿರುವ ನೂತನ ಡೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಮಾಜಿ ಪ್ರಧಾನಿ ಎಚ್‌ಡಿ.ದೇವೇಗೌಡರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಡಿ.ರೇವಣ್ಣ ಅವರ ಪರಿಶ್ರಮದಿಂದ ಜಿಲ್ಲಾ ಕೇಂದ್ರದ ಕೌಶಿಕ ಬಳಿ ಸುಮಾರು 900 ಕೋಟಿ ರೂ.ವೆಚ್ಚದಲ್ಲಿ ಕೇಂದ್ರ ಸರ್ಕಾರದ ಹೆಚ್ಚಿನ ನೆರವಿನೊಂದಿಗೆ ಮೆಗಾ ಡೇರಿ ನಿರ್ಮಾಣವಾಗುತ್ತಿದೆ ಎಂದರು.
ಸುಮಾರು 12 ಲಕ್ಷ ರೂ.ವೆಚ್ಚದಲ್ಲಿ ನೂತನ ಡೇರಿ ನಿರ್ಮಾಣ ಮಾಡಲಾಗಿದೆ. ನಿತ್ಯ 850 ಲೀಟರ್ ಹಾಲು ಖರೀದಿಸಲಾಗುತ್ತಿದೆ. ಪ್ರತಿ ಮಾಸಿಕ 10 ಲಕ್ಷ ರೂ. ವಹಿವಾಟು ನಡೆಯುತ್ತಿದೆ. 3 ವರ್ಷಗಳಲ್ಲಿ ತಾಲೂಕಿನ ರೈತರಿಗೆ ಡೇರಿಗಳ ಮೂಲಕ ಸುಮಾರು 5 ಕೋಟಿ ರೂ.ವೆಚ್ಚದಲ್ಲಿ ಮ್ಯಾಟ್‌ಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗಿದೆ. ಮತ್ತೆ ಮೂರು ಸಾವಿರ ನೀಡಲಾಗುವುದು ಎಂದು ಭರವಸೆ ನೀಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ಕಲ್ಕೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೇವಿಗೆರೆ ಸುರೇಶ್, ಉಪಾಧ್ಯಕ್ಷ ಪ್ರಭಾಕರ್, ಸಂಘದ ಅಧ್ಯಕ್ಷೆ ಮಂಜುಳಾ ತಿಮ್ಮೇಗೌಡ, ಕೃಷಿ ಪತ್ತಿನ ನಿರ್ದೇಶಕರಾದ ಕಲ್ಕೆರೆ ಅಶೋಕ್, ದೇವರಾಜ್, ಮುಖಂಡರಾದ ನಾಗೇಗೌಡ, ಬೈರೇಗೌಡ, ಎಚ್.ಬಿ.ರಂಗಸ್ವಾಮಿ, ಕಲ್ಕೆರೆ ಲಕ್ಕಪ್ಪಗೌಡ, ವಾಸು, ರಂಗನಾಥ್, ಧರ್ಮಲಿಂಗೇಗೌಡ, ನಾರಾಯಣಸ್ವಾಮಿ, ರಂಗೇಗೌಡ, ಈ ಶಿವಣ್ಣ, ಚೌಡೇನಹಳ್ಳಿ ಜ್ಞಾನೇಂದ್ರ, ಎಲ್ಐಸಿ ಮಂಜೇಗೌಡ, ಹುಲಿಕೆರೆ ಸಂಪತ್ ಕುಮಾರ್, ವಿದ್ಯುತ್ ಗುತ್ತಿಗೆದಾರ ಯೋಗೇಶ್, ಸಂಘದ ಕಾರ್ಯದರ್ಶಿ ಸಾವಿತ್ರಮ್ಮ ರಮೇಶ್, ನಿರ್ದೇಶಕರಾದ ನಾಗಮ್ಮ ಶಿವೇಗೌಡ, ಲಕ್ಷ್ಮಮ್ಮ ರಂಗಯ್ಯ, ಕವಿತಾ ಚಂದ್ರೇಗೌಡ, ಲಕ್ಷ್ಮಮ್ಮ ಶಿವೇಗೌಡ, ತಿಮ್ಮಮ್ಮ ರಂಗೇಗೌಡ, ಸುಶೀಲಾ ಸುರೇಶ್, ಆರತಿ ಕುಮಾರ್, ಶೋಭಾ ಹರೀಶ್, ಅನಿತಾ ರಾಮಚಂದ್ರ, ಶಾರದಮ್ಮ ಮಂಜೇಗೌಡ, ಸಂಘದ ಹಾಲು ಪರೀಕ್ಷಕಿ ಕಾಳಮ್ಮ, ಸದಸ್ಯರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net