ಹಾಸನ ಜಿಲ್ಲೆ ರಾಜ್ಯದ ಕೃಷಿ ಪ್ರಧಾನ ಜಿಲ್ಲೆಗಳಲ್ಲಿ ಒಂದಾಗಿದ್ದು, 4 ಕೃಷಿ ವಲಯಗಳನ್ನೊಳಗೊಂಡಿದೆ. ಜಿಲ್ಲೆಯು 6,66,602 ಹೆ. ಭೌಗೋಳಿಕ ವಿಸ್ತೀರ್ಣ ಹೊಂದಿದ್ದು, ಶೇ.70 ರಷ್ಟು ಜನರು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಒಟ್ಟು 4,16,402 ಹೆಕ್ಟೇರ್ ಸಾಗುವಳಿ ಪ್ರದೇಶದಲ್ಲಿ 1,80,976 ಹೆಕ್ಟೇರ್ ವಿಸ್ತೀರ್ಣವು ತೋಟಗಾರಿಕೆ ಬೆಳೆಗಳಿಂದ ಆವರಿಸಿದೆ. ಹಾಸನವು ರಾಜ್ಯದಲ್ಲಿ 2ನೇ ತೆಂಗು ಬೆಳೆಯುವ ಜಿಲ್ಲೆಯಾಗಿದ್ದು, ಆಲೂಗಡ್ಡೆ, ಟೊಮ್ಯಾಟೊ, ಬಾಳೆ, ಕಾಫಿ, ಅಡಕೆ, ಕಾಳುಮೆಣಸು ಮತ್ತು ಸಾಂಬಾರು ಬೆಳೆಗಳನ್ನು ಇಲ್ಲಿ ಪ್ರಮುಖವಾಗಿ ಬೆಳೆಯಲಾಗುತ್ತಿದೆ.