ಸದಸ್ಯ ಜಾಜೂರು ಸಿದ್ದೇಶ್ ಮಾತನಾಡಿ, ಬೆಂಗಳೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಒಳಗೊಂಡಂತೆ ವಿವಿಧೆಡೆಗಳಿಂದ ಬರುವ ಪ್ರಯಾಣಿಕರಿಗೆ ರೈಲ್ವೆ ನಿಲ್ದಾಣಕ್ಕೆ ಹೋಗುವುದು ಸವಾಲಿನ ಕೆಲಸವಾಗಿದೆ. ಬಸ್ ಕಂಡಕ್ಟರ್‌ಗಳು ಹಳೆಯ ಬಸ್ ನಿಲ್ದಾಣ ಸಮೀಪಿಸಿದಾಗ ಮಾಹಿತಿ ನೀಡಿದರೆ ಹೆಚ್ಚು ಅನುಕೂಲವಾಗಲಿದೆ. ನಗರದ ವಾಣಿಜ್ಯ ಸಂಕೀರ್ಣದ ಬಳಿ ಸಿಬ್ಬಂದಿ ನಿಯೋಜಿಸಿ ಕಿರಿಕಿರಿ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.