ಮನಸ್ಸಿನ ನೆಮ್ಮದಿಗೆ ಸಂಗೀತೋತ್ಸವ ಸಹಕಾರಿ

 ರಾಮನಾಥಪುರ ಶ್ರೀ ಪಟ್ಟಾಭಿರಾಮ ದೇವಾಲಯದಲ್ಲಿ ನಡೆದ 2ನೇ ದಿನದ ರಾಮನವಮಿ ಸಂಗಿತೋತ್ಸವ ಕಾರ್ಯಕ್ರಮದಲ್ಲಿ  ವಿದ್ಯಾನ್ ಬಾಲಕೃಷ್ಣ ವಿ.ವಂಶಿಧರ್ ವೀಣಾವಾದನ ನಡೆಸಿಕೊಟ್ಟರು.
ರಾಮನಾಥಪುರ ಶ್ರೀ ಪಟ್ಟಾಭಿರಾಮ ದೇವಾಲಯದಲ್ಲಿ ನಡೆದ 2ನೇ ದಿನದ ರಾಮನವಮಿ ಸಂಗಿತೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾನ್ ಬಾಲಕೃಷ್ಣ ವಿ.ವಂಶಿಧರ್ ವೀಣಾವಾದನ ನಡೆಸಿಕೊಟ್ಟರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಪಟ್ಟಾಭಿರಾಮ ಸೇವಾ ಸಮಿತಿ ಕಾರ್ಯದರ್ಶಿ ಅರ್.ಅರ್.ಶ್ರೀನಿವಾಸ್ ಅಭಿಪ್ರಾಯ
ಅರಕಲಗೂಡು: ಸಂಗೀತ ಒಂದು ಅಮರ ಕಲೆ. ಜೀವನದ ಕತ್ತಲೆಯಲ್ಲಿ ದಾರಿ ತೋರುವ ಬೆಳದಿಂಗಳು. ಇಂತಹ ಸಂಗೀತೋತ್ಸವ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಶ್ರೀ ಪಟ್ಟಾಭಿರಾಮ ಸೇವಾ ಸಮಿತಿ ಕಾರ್ಯದರ್ಶಿ ಅರ್.ಅರ್.ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ 2ನೇ ದಿನದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿನ ಯುವಪೀಳಿಗೆ ಕರ್ನಾಟಕದ ಸಂಗೀತ ಪರಂಪರೆಯ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುತ್ತಿಲ್ಲ. ಮುಂದೆಯಾದರೂ ಸಂಗೀತ, ಸಾಹಿತ್ಯ, ಸಾಧನೆ ನಮ್ಮ ಸಂಸ್ಕೃತಿ, ನಮ್ಮ ಪರಂಪರೆಯನ್ನು ಅಳವಡಿಸಿಕೊಂಡು ನಡೆಯಬೇಕು ಎಂದು ಕಿವಿಮಾತು ಹೇಳಿದರು.
ಸೇವಾ ಸಮಿತಿಯ ಅಧ್ಯಕ್ಷ ಬದರಿನಾಥ್, ಸದಸ್ಯರಾದ ಅರ್.ಎಸ್.ನರಸಿಂಹಮೂರ್ತಿ, ಅರ್.ಎಸ್. ತಿರುಮಲಚಾರ್, ಎಸ್.ಶ್ರೀನಿವಾಸ್, ಶ್ರೀನಿಧಿ, ರಾ.ಸು.ನಾಗರಾಜ್, ಸತೀಶ್, ಮೋಹನ್, ದಿಲೀಪ್, ವತ್ಸಲಾ ಇತರರು ಇದ್ದರು.
ಕಾರ್ಯಕ್ರಮ ಮುಗಿದ ನಂತರ ಮಹಾಮಂಗಳಾರತಿ ಹಾಗೂ ಬಂದಂತಹ ಕಲಾಭಿಮಾನಿಗಳಿಗೆ ಹಾಗೂ ಭಕ್ತಗಳಿಗೆ ಸಮಿತಿ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net