ಚನ್ನರಾಯಪಟ್ಟಣ ತಾಲೂಕು ಸಾರ್ವಜನಿಕ ಆಸ್ಪತ್ರೆಯು ತಾಲೂಕಿನಾದ್ಯಂತ 1.50 ಲಕ್ಷ ಜನರಿಗೆ ವೈದ್ಯಕೀಯ ಸೇವೆ ಒದಗಿಸುತ್ತಿದ್ದು, ಈ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ತಾಲೂಕಿನ ಗಡಿ ಭಾಗದ ಮಂಡ್ಯ, ತುಮಕೂರು ಸುತ್ತಮುತ್ತಲಿನ ಸಾರ್ವಜನಿಕರು ಬರುತ್ತಾರೆ. ಪ್ರತಿನಿತ್ಯ 1000-1200ರವರೆಗೆ ಹೊರರೋಗಿಗಳು ಹಾಗೂ 70 ರಿಂದ 80 ಒಳರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ತಿಂಗಳಿಗೆ ಸರಾಸರಿ 80 ರಿಂದ 90 ಸಾಮಾನ್ಯ ಪ್ರಸೂತಿಗಳು, 20 ರಿಂದ 30 ಶಸ್ತ್ರಚಿಕಿತ್ಸೆ ಮೂಲಕ ಪ್ರಸೂತಿಗಳನ್ನು ನಡೆಸಲಾಗುತ್ತದೆ. ತಾಲೂಕು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು, 93 ಉಪಕೇಂದ್ರಗಳು 25 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 4 ಸಮುದಾಯ ಆರೋಗ್ಯ ಕೇಂದ್ರಗಳಿಗೆ ಒಂದು ತಾಲೂಕು ಸಾರ್ವಜನಿಕ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.