ಬಳಿಕ ಮಾತನಾಡಿದ ಶಾಸಕರು, ಗುರುವಾರ ಸುರಿದ ಅಕಾಲಿಕ ಮಳೆಯಿಂದ ತಾಲೂಕಿನ ಸಾಕಷ್ಟು ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು, ಮರಗಳು ಮತ್ತು ಬೆಳೆ ನಾಶವಾಗಿದೆ. ಅಡಗೂರು ಭಾಗದಲ್ಲಿ ತೆಂಗಿನ ಮರಗಳು ಬಿದ್ದಿವೆ ಹಾಗೂ ಫಸಲು ಹಾಳಾಗಿದೆ. ಜತೆಗೆ 25ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸಿಹಿ ಕುಂಬಳಕಾಯಿ ನಾಶವಾಗಿದೆ. ಇದರಿಂದ ರೈತರಿಗೆ ಸಾಕಷ್ಟು ನಷ್ಟವಾಗಿದೆ. ಈ ಬಗ್ಗೆ ಕೃಷಿ, ತೋಟಗಾರಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಆದಷ್ಟು ಬೇಗ ಬೆಳೆ ನಷ್ಟ ಸಂಭವಿಸಿದವರಿಗೆ ಇಲಾಖೆಯಿಂದ ಸಿಗುವ ಪರಿಹಾರವನ್ನು ಕೊಡಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ರೈತರು ಸಹ ಮಳೆ ಸಂದರ್ಭ ಜಾಗೃತಿ ವಹಿಸಿದರೆ ಅನುಕೂಲವಾಗುತ್ತದೆ ಎಂದರು.