ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆ ಮಾಹಿತಿಯ ಕರಪತ್ರ , ರೈತರ ಬೆಳೆ ಸಮೀಕ್ಷೆಯ ಆ್ಯಪ್ ಕುರಿತಾದ ಕರಪತ್ರ, ಬೆಳೆ ವಿಮಾ ಯೋಜನೆಯ ಪೋಸ್ಟರನ್ನು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು. ಲತಾ ಕುಮಾರಿ, ರಮೇಶ್, ಯೋಗೇಶ್, ಹುಲ್ಲುಮನಿ ತಿಮ್ಮಣ್ಣ, ಮೂರ್ತಿ, ಮಂಜುನಾಥ್ ಇತರರಿದ್ದರು.
ಹಾಸನ:ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಮದು ಜಿಲ್ಲಾಧಿಕಾರಿ ಲತಾಕುಮಾರಿ ತಿಳಿಸಿದರು.
ಕೃಷಿ ಇಲಾಖೆ ವತಿಯಿಂದ ಸಿದ್ಧಪಡಿಸಿರುವ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಮಾಹಿತಿಯ ಕರಪತ್ರ , ರೈತರ ಬೆಳೆ ಸಮೀಕ್ಷೆಯ ಆ್ಯಪ್ ಕುರಿತಾದ ಕರಪತ್ರ, ಬೆಳೆ ವಿಮಾ ಯೋಜನೆಯ ಪೋಸ್ಟರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಂಟಿ ಕೃಷಿ ನಿರ್ದೇಶಕ ರಮೇಶ್, ತೋಟಗಾರಿಕೆ ಜಂಟಿ ನಿರ್ದೇಶಕ ಯೋಗೇಶ್, ಸಕಲೇಶಪುರ ಉಪ ವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಹಾಗೂ ರೈತ ಮುಖಂಡರಾದ ಕಣಗಾಲ್ ಮೂರ್ತಿ, ಮಂಜುನಾಥ್ ಇತರರಿದ್ದರು.