ಬೆಲೆ ಇಳಿಕೆಯಿಂದ ಗ್ರಾಹಕರು ಬುಟ್ಟಿ ತುಂಬಾ ಕೊಂಡೊಯ್ಯುತ್ತಿದ್ದರೆ, ಬೆಳೆಗಾರರು ಬಂಡವಾಳವೂ ಕೈಗೆ ಸಿಗದೆ ಕಂಗಾಲಾಗಿದ್ದಾರೆ. ಏಕಕಾಲಕ್ಕೆ ಎಲ್ಲ ತಳಿ ನೀಲಂ, ಬಾದಾಮಿ, ರಸಪೂರಿ, ಮಲಗೋಬಾ, ಸಿಂಧೂರ ಸೇರಿದಂತೆ ಎಲ್ಲ ತಳಿಗಳು ಒಟ್ಟಿಗೆ ಮಾರುಕಟ್ಟೆಗೆ ಬಂದಿವೆ. ಹಾಸನ ಎಪಿಎಂಸಿ ಸೇರಿದಂತೆ ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ, ಗೂಡ್ಸ್ ವಾಹನಗಳಲ್ಲಿ ಮಾವಿನ ರಾಶಿ ಕಾಣಸಿಗುತ್ತಿದೆ. ಜಿಲ್ಲೆಯ ಅರಸೀಕೆರೆ, ಚನ್ನರಾಯಪಟ್ಟಣ ಹಾಗೂ ಹಾಸನ ತಾಲೂಕಿನಲ್ಲಿ 2500 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಈ ಬಾರಿ ಉತ್ತಮ ಇಳುವರಿ ಬಂದಿದೆ. ಜತೆಗೆ ಕೋಲಾರ, ರಾಮನಗರ, ತಿಪಟೂರಿನಿಂದ ನಿತ್ಯ 20-25 ಲೋಡ್ ಮಾವು ಹಾಸನಕ್ಕೆ ಬರುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.