ಮಲ್ಲಪ್ಪನಹಳ್ಳಿ ಕೆರೆ ಕೋಡಿಯ ಹಳ್ಳಕ್ಕೆ ಅಡ್ಡಲಾಗಿ ಸುಮಾರು ಹತ್ತು ಅಡಿ ಎತ್ತರವಿರುವ ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆ ಮೇಲೆ ನಿತ್ಯ ನೂರಾರು ಸಾರ್ವಜನಿಕರು, ಎತ್ತಿನ ಗಾಡಿ, ಆಟೋ, ಕಾರು, ಬೈಕು, ಟ್ಯ್ರಾಕ್ಟರ್ ಜತೆಗೆ ಸಾಮಗ್ರಿಗಳನ್ನು ಹೊತ್ತು ಸಾಗುವ ದೊಡ್ಡ ಲಾರಿಗಳು ಸಂಚರಿಸುತ್ತವೆ. ಶಿಥಿಲವಾಗಿರುವ ಸೇತುವೆ ಯಾವುದೇ ಕ್ಷಣದಲ್ಲಾದರೂ ಕುಸಿದು ಬೀಳುವ ಹಂತಕ್ಕೆ ತಲುಪಿದೆ.