ನೈರ್ಮಲ್ಯ ಪಾಲನೆ ಎಲ್ಲರ ಕರ್ತವ್ಯವಾಲಿ

ಹುತಾತ್ಮರ ದಿನದ ಅಂಗವಾಗಿ ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ  ಸ್ವಚ್ಛತಾ ಕಾರ್ಯಕ್ರಮ ಮತ್ತು ಹೈನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಸ್ವಚ್ಛತೆ ಮಾಡುವ ಮೂಲಕ ನ್ಯಾಯಾಧೀಶೆ  ಹೇಮಾವತಿ ಉದ್ಘಾಟಿಸಿದರು. ಕೆ.ಎಂ.ಪುಟ್ಟಸ್ವಾಮಿ, ಡಾ.ಆರ್.ವಿ.ಕೊಟ್ಟೂರ, ಆರ್. ಪ್ರಸನ್ನ, ಜೈಲರ್ ಅನಿಲ್, ಡಾ.ಅಂಬುಜಾ ಮತ್ತು ಜೈಲು ಸಿಬ್ಬಂದಿ ಇದ್ದರು.
ಹುತಾತ್ಮರ ದಿನದ ಅಂಗವಾಗಿ ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮ ಮತ್ತು ಹೈನುಗಾರಿಕೆ ತರಬೇತಿ ಕಾರ್ಯಕ್ರಮವನ್ನು ಸ್ವಚ್ಛತೆ ಮಾಡುವ ಮೂಲಕ ನ್ಯಾಯಾಧೀಶೆ ಹೇಮಾವತಿ ಉದ್ಘಾಟಿಸಿದರು. ಕೆ.ಎಂ.ಪುಟ್ಟಸ್ವಾಮಿ, ಡಾ.ಆರ್.ವಿ.ಕೊಟ್ಟೂರ, ಆರ್. ಪ್ರಸನ್ನ, ಜೈಲರ್ ಅನಿಲ್, ಡಾ.ಅಂಬುಜಾ ಮತ್ತು ಜೈಲು ಸಿಬ್ಬಂದಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನೈರ್ಮಲ್ಯ ಪಾಲನೆ ಎಲ್ಲರ ಕರ್ತವ್ಯವಾಲಿ
  • ನ್ಯಾಯಾಧೀಶರಾದ ಹೇಮಾವತಿ ಸಲಹೆ
ಹಾಸನ: ಸ್ವಚ್ಛತಾ ಸೇವೆ ಮಾಡುವ ಮೂಲಕ ನೈರ್ಮಲ್ಯವನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಬೇಕು ಎಂದು ನ್ಯಾಯಾಧೀಶರಾದ ಹೇಮಾವತಿ ಹೇಳಿದರು.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹುತಾತ್ಮರಾದ ದಿನದ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರಾಗೃಹ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಕಾರಾಗೃಹದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯ, ಬಂಧಿವಾಸಿಗಳಿಗೆ ಆಧುನಿಕ ಹೈನುಗಾರಿಕೆ ಮತ್ತು ಮೇವು ಅಭಿವೃದ್ಧಿ ಕುರಿತು ತರಬೇತಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬ ನಾಗರಿಕರೂ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕರ್ತವ್ಯಗಳನ್ನು ಪಾಲಿಸಬೇಕು. ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದಲ್ಲಿ ಉತ್ತಮ ಪರಿಸರ ನಮ್ಮದಾಗಬೇಕು ಎಂದರು.
ನಮ್ಮ ಕಾರ್ಯವು ಸದಾ ಇತರರನ್ನು ಪ್ರೇರೇಪಿಸಿ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವಂತೆ ಇರಬೇಕು. ಈ ನಿಟ್ಟಿನಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ಇದೆ ಎಂದರು.
ಕೇವಲ ಪಾಲಿಕೆಗಳು, ಪೌರಾಡಳಿತ ಇಲಾಖೆಗಳು ಮಾತ್ರವೇ ದಿನವೂ ಸ್ವಚ್ಛತಾ ಕಾರ್ಯ ಮಾಡಬೇಕು ಎಂದು ಕೆಲವರು ಭಾವಿಸಿದ್ದಾರೆ. ಶುದ್ಧತೆ ಪಾಲನೆ ಎಂಬುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ನಾವು ಯಾರೊಬ್ಬರ ನೆರವನ್ನೂ ಕಾಯದೆ ನಮ್ಮ ನಮ್ಮ ಸುತ್ತಲಿನ ಪರಿಸರವನ್ನು ನಾವೇ ಶುಭ್ರವಾಗಿ ಇರಿಸಿಕೊಳ್ಳುವತ್ತ ಗಮನ ಹರಿಸಿ ಸೇವೆ ಎಂಬ ರೂಪದಲ್ಲಿ ಮಾಡಬೇಕು. ಈ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಬೇಕು ಎಂದರು.
ಮನೆ, ಪರಿಸರ, ಊರು, ದೇಶವನ್ನು ಸುಂದರವಾಗಿ ಇಟ್ಟುಕೊಂಡರೆ ಹುತಾತ್ಮರಿಗೆ ಹಾಗೂ ದೇಶಕ್ಕೆ ನಾವು ಗೌರವವನ್ನು ಸಮರ್ಪಿಸಿದಂತಾಗುತ್ತದೆ. ನಮ್ಮ ಸಂವಿಧಾನಿಕ ಕರ್ತವ್ಯಗಳನ್ನು ಪಾಲನೆ ಮಾಡಿದಂತಾಗುತ್ತದೆ ಎಂದು ಅವರು ಹೇಳಿದರು.
ಕಾರಾಗೃಹದಲ್ಲಿ ಇರುವವರು ಆಧುನಿಕ ಹೈನುಗಾರಿಕೆಯ ತರಬೇತಿ ಪಡೆಯುವ ಮೂಲಕ ಬಿಡುಗಡೆಯ ನಂತರದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎಂ.ಪುಟ್ಟಸ್ವಾಮಿ ಮಾತನಾಡಿ, ಬಂಧಿವಾಸಿಗಳ ಕ್ರಿಯಾಶೀಲತೆ ಹೆಚ್ಚಿಸಲು ಹಲವು ಸುಧಾರಣಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಜೈಲು ಎಂಬುದು ಶಿಕ್ಷಾ ಕೇಂದ್ರಗಳಾಗದೆ ಬದುಕನ್ನು ಸುಧಾರಣೆ ಮಾಡುವ ಕೇಂದ್ರಗಳಾಗಬೇಕು ಎಂದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಆರ್.ವಿ.ಕೊಟ್ಟೂರ ಮಾತನಾಡಿ, ಆಧುನಿಕ ಹೈನುಗಾರಿಕೆಯನ್ನು ಅನುಸರಿಸಿದರೆ ಸ್ವಾವಲಂಬಿಗಳಾಗಿ ಬದುಕಬಹುದು ಎಂದರು. ಆರ್ಥಿಕ ಪ್ರಗತಿ ಸಾಧನೆಗೆ ಈ ವೃತ್ತಿ ಪೂರಕವಾಗಲಿದೆ ಎಂದರು. ಜಿಲ್ಲಾ ಕಾರಾಗೃಹ ಅಧೀಕ್ಷಕ ಆರ್. ಪ್ರಸನ್ನ, ಜೈಲರ್ ಅನಿಲ್, ಪಶುವೈದ್ಯರಾದ ಡಾ.ಅಂಬುಜಾ ಹಾಗೂ ಕಾರಾಗೃಹ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net