ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ

ಮಹಾನಗರ ಪಾಲಿಕೆಯ 2020-21ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ನೂತನವಾಗಿ ಖರೀದಿಸಿದ್ದ ಜೆಸಿಬಿ ಹಾಗೂ ಕಸ ತುಂಬುವ ಟಿಪ್ಪರ್ ಲಾರಿಗಳನ್ನು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಾರ್ವಜನಿಕ ಸೇವೆಗೆ ಹಸ್ತಾಂತರಿಸಿದರು. ನಗರಪಾಲಿಕೆ ಸದಸ್ಯ ಎಸ್.ಎಚ್.ವಾಸುದೇವ್, ಇಂಜಿನಿಯರ್ ಕೆ.ಆರ್ ಕವಿತಾ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಮಹಾನಗರ ಪಾಲಿಕೆಯ 2020-21ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ನೂತನವಾಗಿ ಖರೀದಿಸಿದ್ದ ಜೆಸಿಬಿ ಹಾಗೂ ಕಸ ತುಂಬುವ ಟಿಪ್ಪರ್ ಲಾರಿಗಳನ್ನು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಾರ್ವಜನಿಕ ಸೇವೆಗೆ ಹಸ್ತಾಂತರಿಸಿದರು. ನಗರಪಾಲಿಕೆ ಸದಸ್ಯ ಎಸ್.ಎಚ್.ವಾಸುದೇವ್, ಇಂಜಿನಿಯರ್ ಕೆ.ಆರ್ ಕವಿತಾ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸ್ವಚ್ಛತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ
  • ಶಾಸಕ ಎಚ್.ಪಿ.ಸ್ವರೂಪ ಪ್ರಕಾಶ್ ಹೇಳಿಕೆ
  • ಜೆಸಿಬಿ, ಟಿಪ್ಪರ್ ಲಾರಿ ಹಸ್ತಾಂತರ
ಹಾಸನ: ಮಹಾನಗರ ಪಾಲಿಕೆಯ 2020-21ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ನೂತನವಾಗಿ ಖರೀದಿಸಿದ್ದ ಜೆಸಿಬಿ ಹಾಗೂ ಕಸ ತುಂಬುವ ಟಿಪ್ಪರ್ ಲಾರಿಗಳನ್ನು ಶಾಸಕ ಎಚ್.ಪಿ.ಸ್ವರೂಪ ಪ್ರಕಾಶ್ ಇತ್ತೀಚೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಾರ್ವಜನಿಕ ಸೇವೆಗೆ ಸಮರ್ಪಣೆ ಮಾಡಿದರು.
ಸುಮಾರು ಎರಡು ಕೋಟಿ ರೂ. ವೆಚ್ಚದಲ್ಲಿ ಎರಡು ಟಿಪ್ಪರ್ ಲಾರಿಗಳು, ಎರಡು ಜೆಸಿಬಿ, ಒಂದು ಸ್ವೀಪಿಂಗ್ ಮಿಶನ್ ಇನ್ನಿತರ ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸಿ, ತಾವೇ ಚಾಲನೆ ಮಾಡುವ ಮೂಲಕ ಹಾಸನ ನಗರದ ಜನತೆಯ ಸೇವೆ ಮತ್ತು ಸ್ವಚ್ಛತೆಗಾಗಿ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಅವರು, ಹಾಸನ ನಗರಸಭೆ ಈಗಾಗಲೇ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದೆ. ಇಂತಹ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡುವುದು ನಗರದ ಪ್ರತಿಯೊಬ್ಬರ ಆದ್ಯ ಕರ್ತವ್ಯ. ದಿನ ನಿತ್ಯ ಉತ್ಪಾದನೆ ಆಗುವ ಕಸವನ್ನು ಎಲ್ಲೆಂದರಲ್ಲಿ ಬಿಸಾಡದೆ, ಮಹಾನಗರ ಪಾಲಿಕೆಯ ಕಸದ ವಾಹನಗಳಲ್ಲೇ ಹಾಕುವ ಮೂಲಕ ನಗರ ಪಾಲಿಕೆಯ ಸ್ವಚ್ಛತೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ನಗರ ಪಾಲಿಕೆ ಆಯುಕ್ತರು, ಇಂಜಿನಿಯರ್, ಅಧಿಕಾರಿಗಳು ಸೇರಿ 15ನೇ ಹಣಕಾಸು ಯೋಜನೆಯಡಿ ನಾಗರಿಕರ ಸೇವೆಗೆ ಉಪಯುಕ್ತ ಮತ್ತು ಅತ್ಯಮೂಲ್ಯವಾಗಿರುವ ಯಂತ್ರೋಪಕರಣ ಖರೀದಿ ಮಾಡಿದ್ದಾರೆ. 2 ಟಿಪ್ಪರ್, 2 ಜೆಸಿಬಿ, ಬೀದಿ ಬದಿಯ ಕ್ಲೀನ್ ಸ್ವೀಪಿಂಗ್ ಮಿಶನ್ ನಗರ ಪಾಲಿಕೆಗೆ ಸೇರ್ಪಡೆಯಾಗಿದ್ದು, ಇದರ ಸದ್ಬಳಕೆ ಆಗಬೇಕು, ದುರುಪಯೋಗ ಆಗಬಾರದು ಎಂದು ಮನವಿ ಮಾಡಿದರು.
ಹಿಂದಿಗಿಂತ ಇಂದು ವಿವಿಧ ಕಸದ ನಿರ್ವಹಣೆ ಮಾಡುವ ಮೂಲಕ ನಗರದ ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ವಿನಂತಿಸಿದರು. ನಾವೆಲ್ಲರೂ ಸೇರಿ ನಗರದ ಜನರಿಗೆ ಅಗತ್ಯ ಇರುವ ಕೆಲಸ ಕಾರ್ಯ ಮಾಡೋಣ, ಇದಕ್ಕೆ ಸಾರ್ವಜನಿಕರೂ ಸಹಕಾರ ನೀಡಬೇಕು.
ನಗರದ ಅನೇಕ ಕಡೆಗಳಲ್ಲಿ ಕಸ ಹಾಕಲೆಂದೇ ಬ್ಲಾಕ್ ಸ್ಪಾಟ್ ಗುರುತಿಸಲಾಗಿದೆ. ಅಲ್ಲಿಗೆ ಪಾಲಿಕೆಯ ವಾಹನಗಳು ಬರಲಿವೆ. ಆ ಸ್ಥಳಕ್ಕೆ ಕಸ ಸುರಿಯದೇ ಪಾಲಿಕೆ ವಾಹನಗಳಲ್ಲೇ ಕಸ ಸುರಿಯಬೇಕು ಎಂದು ಶಾಸಕರು ಮನವಿ ಮಾಡಿದರು.
ಆದರೂ ಯಾರು ತಪ್ಪು ಮಾಡುತ್ತಾರೋ ಎಂಬುದನ್ನು ಕಂಡು ಹಿಡಿಯಲು ಸಿಸಿ ಕ್ಯಾಮರಾ ಅಳವಡಿಸಿ, ಅಲ್ಲಿ ಪತ್ತೆಯಾದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯ ಎಸ್.ಎಚ್.ವಾಸುದೇವ್, ಇಂಜಿನಿಯರ್ ಕೆ.ಆರ್ ಕವಿತಾ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net