ಪೊಲೀಸ್ ಠಾಣೆಯಲ್ಲೇ ವಿವಾಹವಾದ ಪ್ರೇಮಿಗಳು

ಹಾಸನ  ತಾಲೂಕಿನ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರೀತಿಸಿದ ಜೋಡಿಗಳಿಗೆ ವಿವಾಹ ಮಾಡಿಸಲಾಯಿತು.
ಹಾಸನ ತಾಲೂಕಿನ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರೀತಿಸಿದ ಜೋಡಿಗಳಿಗೆ ವಿವಾಹ ಮಾಡಿಸಲಾಯಿತು.
Published on
ಹಾಸನ: ಪ್ರೀತಿಸಿದ ಜೋಡಿಗಳಿಗೆ ಪೊಲೀಸ್ ಠಾಣೆಯಲ್ಲೇ ವಿವಾಹ ಮಾಡಿಸಿದ ಅಪರೂಪದ ಪ್ರಕರಣ ಬುಧವಾರ ತಾಲೂಕಿನ ಗೊರೂರು ಪೊಲೀಸ್ ಠಾಣೆಯಲ್ಲಿ ನಡೆಯಿತು.
ಪೊಲೀಸ್ ಅಧಿಕಾರಿಗಳೇ ಪೌರೋಹಿತ್ಯ ವಹಿಸಿ ಪ್ರೀತಿಸಿದ ಜೋಡಿಗಳನ್ನು ಮದುವೆ ಮಾಡಿಸುವ ಮೂಲಕ ಅವರ ಬಾಳಿನ ಹರ್ಷವನ್ನು ಇಮ್ಮಡಿಗೊಳಿಸಿದರು. ಪೊಲೀಸರ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡು, ಪೊಲೀಸ್ ಠಾಣೆಯಲ್ಲೇ ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟರು.
ನಾಯಕರಹಳ್ಳಿ ಗ್ರಾಮದ ಅಜಯ್ ಹಾಗೂ ಧನಲಕ್ಷ್ಮೀ ಪ್ರೀತಿಸುತ್ತಿದ್ದರು. ಮದುವೆ ಆಗಲು ನಿರ್ಧರಿಸಿದ್ದರು. ಆದರೆ, ಯುವತಿ ಮನೆಯವರ ವಿರೋಧ ಹಿನ್ನೆಲೆಯಲ್ಲಿ ಪ್ರೇಮ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತು. ಪೊಲೀಸರು ಪಾಲಕರಿಗೆ ಕಾನೂನಿನ ಪಾಠ ಮಾಡಿದರು. ಪೊಲೀಸರ ಬುದ್ಧಿ ಮಾತು ಕೇಳಿ ಮದುವೆ ಮಾಡಿಕೊಡಲು ಯುವತಿ ಪಾಲಕರು ಒಪ್ಪಿದರು. ಕಡೆಗೆ ಪಿಎಸ್‌ಐ ಧನರಾಜ್ ಸಮ್ಮುಖದಲ್ಲಿ ವಿವಾಹವಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net