ದಾಸ ಶ್ರೇಷ್ಠರಾದ ತ್ಯಾಗರಾಜರು, ಪುರಂದರ ದಾಸರು, ಕನಕದಾಸರು ಹಾಗೂ ಬೇಲೂರು ವೈಕುಂಠದಾಸರ ಆರಾಧನ ಮಹೋತ್ಸವದ ಅಂಗವಾಗಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ನರಸಿಂಹಸ್ವಾಮಿ, ಸೌಮ್ಯಾ ಆನಂದ್, ಸುಧೀಂದ್ರ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
Listening to Psalms
ಬೇಲೂರು: ದಾಸ ಶ್ರೇಷ್ಠರ ಕೀರ್ತನೆಗಳನ್ನು ಕೇಳುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದಲ್ಲದೇ ಸಂಸ್ಕಾರವೂ ಲಭಿಸುತ್ತದೆ ಎಂದು ಶ್ರೀಲಕ್ಷ್ಮೀ ಮಂಗಳವಾದ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್ ಅಧ್ಯಕ್ಷ ನರಸಿಂಹಸ್ವಾಮಿ ಹೇಳಿದರು.
ದಾಸ ಶ್ರೇಷ್ಠರಾದ ತ್ಯಾಗರಾಜರು, ಪುರಂದರದಾಸರು, ಕನಕದಾಸರು ಹಾಗೂ ಬೇಲೂರು ವೈಕುಂಠದಾಸರ ಆರಾಧನ ಮಹೋತ್ಸವದ ಅಂಗವಾಗಿ ಪಟ್ಟಣದ ಶ್ರೀರಾಘವೇಂದ್ರಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗೆ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿವರ್ಷದಂತೆ ಈ ವರ್ಷವೂ ದಾಸ ಶ್ರೇಷ್ಠರ ಆರಾಧನಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ದಾಸ ಶ್ರೇಷ್ಠರು ರಚಿಸಿದ ಕೀರ್ತನೆಗಳನ್ನು, ದೇವರ ನಾಮಗಳನ್ನು ಕೇಳುವುದರಿಂದ ಒಂದು ರೀತಿಯಲ್ಲಿ ಸಮಾಧಾನ, ಶಾಂತಿ, ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ. ಅಲ್ಲದೆ ಮನುಷ್ಯನಲ್ಲಿನ ಎಲ್ಲ ನೋವುಗಳನ್ನು ಕ್ಷಣ ಕಾಲವಾದರೂ ಮರೆಸುತ್ತದೆ. ಇಂತಹ ದಾಸರ ಕೀರ್ತನೆಗಳು ಮತ್ತು ದೇವರ ನಾಮಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಹಾಗೂ ತಾಲೂಕಿನಲ್ಲಿರುವ ಹಲವಾರು ಪ್ರತಿಭೆಗಳನ್ನು ಪ್ರೋತ್ಸಾಹಿಸಲು ವೇದಿಕೆಗಳು ಸಿಗಬೇಕು ಎಂದರು.
ಜಿಲ್ಲಾ ಕೆಡಿಪಿ ಸದಸ್ಯೆ ಸೌಮ್ಯಾ ಆನಂದ್ ಮಾತನಾಡಿ, ನಮ್ಮ ತಂದೆಯವರ ಕಾಲದಿಂದಲೂ ಇಂತಹ ಕಾರ್ಯಕ್ರಮಗಳಿಗೆ ಉತ್ತೇಜನ ನೀಡುತ್ತಾ ಬಂದಿದೆ ಎಂದರು.
ಶ್ರೀರಾಘವೇಂದ್ರಸ್ವಾಮಿ ಮಠದ ವ್ಯವಸ್ಥಾಪಕರಾದ ಸುಧೀಂದ್ರ ಮಾತನಾಡಿದರು. ತಾಲೂಕಿನ ಕಲಾವಿದರಾದ ಹರೀಶ್, ಗಾಯಿತ್ರಿ ಅವರನ್ನು ಅಭಿನಂದಿಸಲಾಯಿತು
ಶ್ರೀ ಲಕ್ಷ್ಮೀಮಂಗಳವಾದ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್ ನಿರ್ದೇಶಕ ವಿಷ್ಣು ಪ್ರಸಾದ್, ಸವಿತಾ ಸಮಾಜದ ಚಂದ್ರು, ನಟರಾಜ್, ಕಲಾವಿದರಾದ ಚೂಡಾಮಣಿ, ಸಂಜೀವ, ಶ್ರೇಯಾ, ನಂದೀಶ ಸೇರಿದಂತೆ ಇತರರಿದ್ದರು.