ಯುವಜನರು ದೇಶದ ಪರಂಪರೆಯ ವಾರಸುದಾರರಾಗಲಿ

ಹಾಸನ ನಗರದ ಶ್ರೀಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಾಲಯದ ವಿಶ್ವಕರ್ಮ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಥಮ ವಿಶ್ವಕರ್ಮ ವಧು-ವರರ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು. ಎಚ್.ವಿ. ಹರೀಶ್, ಎನ್. ಪ್ರವೀಣ್ ಕುಮಾರ್, ಎ.ಸಿ.ನಾರಾಯಣ್, ಕೆ. ರಾಘವೇಂದ್ರಕುಮಾರ್, ಕೆ.ಎಸ್. ಜಗದೀಶ್ ಇತರರು ಇದ್ದರು.
ಹಾಸನ ನಗರದ ಶ್ರೀಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಾಲಯದ ವಿಶ್ವಕರ್ಮ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಥಮ ವಿಶ್ವಕರ್ಮ ವಧು-ವರರ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು. ಎಚ್.ವಿ. ಹರೀಶ್, ಎನ್. ಪ್ರವೀಣ್ ಕುಮಾರ್, ಎ.ಸಿ.ನಾರಾಯಣ್, ಕೆ. ರಾಘವೇಂದ್ರಕುಮಾರ್, ಕೆ.ಎಸ್. ಜಗದೀಶ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯುವಜನರು ದೇಶದ ಪರಂಪರೆಯ ವಾರಸುದಾರರಾಗಲಿ
  • ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಚ್.ವಿ.ಹರೀಶ್ ಸಲಹೆ
  • ಪ್ರಥಮ ವಿಶ್ವಕರ್ಮ ವಧು-ವರರ ಸಮಾವೇಶ
  • ಸನ್ನಡತೆ ರೂಪಿಸಿಕೊಂಡು ಯುವಜನರು ಗೌರವದ ಬದುಕು ಸಾಗಿಸಲಿ
ಹಾಸನ: ಉತ್ತಮ ಧಾರ್ಮಿಕ ಸಂಸ್ಕಾರ ಮತ್ತು ಸನ್ನಡತೆ ರೂಪಿಸಿಕೊಂಡು ಯುವಜನರು ಗೌರವದ ಬದುಕು ಸಾಗಿಸಬೇಕೆಂದು ಹಾಸನ ಜಿಲ್ಲಾ ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಚ್.ವಿ.ಹರೀಶ್ ಸಲಹೆ ನೀಡಿದರು.
ನಗರದ ಶ್ರೀ ಕ್ಷೇತ್ರ ಕಾಳಿಕಾಂಬ ಕಮಠೇಶ್ವರ ದೇವಾಲಯದ ವಿಶ್ವಕರ್ಮ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರಥಮ ವಿಶ್ವಕರ್ಮ ವಧು-ವರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವಕರ್ಮ ಜನಾಂಗಕ್ಕೆ ಅನುವಂಶೀಯವಾಗಿ ಬಂದಿರುವ ಕೌಶಲವನ್ನು ವೃತ್ತಿಯಾಗಿಸಿಕೊಂಡು ಸರ್ವ ಜನಾಂಗದ ಬೆನ್ನೆಲುಬಾಗಿ ಕೀರ್ತಿವಂತರಾಗಬೇಕು. ದೇಶದ ಪರಂಪರೆ ಸಂಸ್ಕೃತಿಯ ವಾರಸುದಾರರಾಗಬೇಕು. ಗುರು, ಹಿರಿಯರನ್ನು ಗೌರವಿಸುತ್ತ ಧಾರ್ಮಿಕ ತಳಹದಿಯ ಮೇಲೆ ಸಮಾಜವನ್ನು ಮುನ್ನಡೆಸಬೇಕು. ವಿದ್ಯಾವಂತರು ನಗರ ಜೀವನಕ್ಕೆ ಮಾರು ಹೋಗದೆ ಕೃಷಿಯನ್ನು ಅವಲಂಬಿಸಿ ಆರೋಗ್ಯಪೂರ್ಣವಾದ ನೆಮ್ಮದಿಯ ಜೀವನ ಸಾಗಿಸುತ್ತಿರುವ ಹಳ್ಳಿಗರನ್ನು ತಮ್ಮ ಬಾಳಸಂಗಾತಿಯನ್ನಾಗಿ ಆರಿಸಿಕೊಂಡು ಉತ್ತಮ ವೈವಾಹಿಕ ಬದುಕನ್ನು ಸಾಗಿಸಲು ಸಲಹೆ ನೀಡಿದರು.
ಸಮಾರಂಭದಲ್ಲಿ ಪುರೋಹಿತ್ ಎನ್. ಪ್ರವೀಣ್‌ಕುಮಾರ್, ಬ್ರಹ್ಮಾನಂದ ಮತ್ತು ನಾಗರಾಜು ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಎ.ಸಿ.ನಾರಾಯಣ್, ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರಕುಮಾರ್, ಖಜಾಂಚಿ ಕೆ.ಎಸ್. ಜಗದೀಶ್, ನಿರ್ದೇಶಕ ಜಿ.ಎಸ್.ಜಯರಾಜ, ಕೆ.ಟಿ.ನಾಗೇಶ್, ಅನಿಲ ಪದ್ಮನಾಭ, ಛಾಯಾ ಲೋಕೇಶ್, ಕೆ.ಟಿ.ಯೋಗೇಶ್, ಕಾಳಿಕಾಂಬ ದೇವಾಲಯದ ಪೂಜಾ ಸಮಿತಿ ಅಧ್ಯಕ್ಷ ಎಚ್.ಕೆ.ಆನಂದ್, ತಾಲೂಕು ವಿಶ್ವಕರ್ಮ ಸಮಾಜದ ಉಪಾಧ್ಯಕ್ಷ ಎ.ಬ್ಯಾಟರಂಗಾಚಾರ್, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಆನಂದ್, ಸಹ ಕಾರ್ಯದರ್ಶಿ ಎಂ.ಟಿ. ಸುರೇಶ್, ಬಿ.ಲೋಕೇಶ್, ಜಿ.ಆರ್.ತಿಮ್ಮಚಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net