ಅರಸೀಕೆರೆ ನಗರದ ಬಸವೇಶ್ವರ ವೃತ್ತದಲ್ಲಿ ಡಾ. ಬಾಲಗಂಗಾಧರನಾಥ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆರ್.ಅನಂತಕುಮಾರ್, ಕೃಷ್ಣಮೂರ್ತಿ, ಕಿರಣ್ ಕುಮಾರ್, ಸಂತೋಷ್, ರಘು, ಲೋಕೇಶ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ಅನಂತ ಕುಮಾರ್ ಅಭಿಪ್ರಾಯ
ಡಾ.ಬಾಲಗಂಗಾಧರನಾಥ ಸ್ವಾಮೀಜಿಯ ಪುಣ್ಯ ಸ್ಮರಣೆ
ಅರಸೀಕೆರೆ: ಸಾಮಾಜಿಕ ಅಸಮಾನತೆ ತೊಡೆದು ಹಾಕಲು ಶ್ರೀ ಕ್ಷೇತ್ರ ಆದಿಚುಂಚನಗಿರಿ ಸೇರಿದಂತೆ ನಾಡಿನ ಎಲ್ಲ ಮಠಗಳು ಹಾಗೂ ಮಠಾಧೀಶರು ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ಅನಂತ ಕುಮಾರ್ ಹೇಳಿದರು.
ನಗರದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಆಯೋಜಿಸಿದ್ದ್ದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 13ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧಾರ್ಮಿಕ, ಸಾಮಾಜಿಕ, ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಸೇರಿದಂತೆ ಹಲವು ರಂಗಗಳಲ್ಲಿ ಆದಿಚುಂಚನಗಿರಿ ಶ್ರೀ ಮಠ ಅವಿರತ ಸೇವೆ ಸಲ್ಲಿಸುತ್ತಿದೆ. ಬಡ ಮಕ್ಕಳ ವ್ಯಾಸಂಗದ ಮಹತ್ವ ಅರಿತು ನಾಡಿನ ಉದ್ದಗಲಕ್ಕೂ ಶಾಲೆ, ಕಾಲೇಜು ಸ್ಥಾಪಿಸುವ ಮೂಲಕ ಅರಿವಿನ ಕಣ್ಣು ತೆರೆಯುವ ಮಹತ್ಕಾರ್ಯ ನಿತ್ಯ ನಿರಂತರವಾಗಿ ನಡೆದಿದೆ. ಈ ನಿಟ್ಟಿನಲ್ಲಿ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕಳಕಳಿ ಎಂದಿಗೂ ಮರೆಯುವಂತಿಲ್ಲ. ಹಿರಿಯ ಜಗದ್ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಸಾಗೋಣ ಎಂದು ತಿಳಿಸಿದರು.
ಪೌರಾಯುಕ್ತ ಕೃಷ್ಣಮೂರ್ತಿ ಮಾತನಾಡಿ, ಅಪೇಕ್ಷಿತರಿಗೆ ಅಕ್ಷರ, ಅರಿವು ಕೊಟ್ಟು ಸಲುಹಿದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಮಗೆಲ್ಲ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ. ಶ್ರೀಗಳ ಚಿಂತನೆ, ತತ್ವ, ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡರೆ ಬದುಕು ಅರ್ಥಪೂರ್ಣವಾಗಲಿದೆ ಎಂದರು.
ನಗರಸಭೆ ಮಾಜಿ ಸದಸ್ಯರಾದ ವೆಂಕಟಮುನಿ, ದರ್ಶನ್, ನವೀನ್ ಕಟ್ಟೆಹಳ್ಳಿ, ಕರವೇ ತಾಲೂಕು ಅಧ್ಯಕ್ಷ ಕಿರಣ್ ಕುಮಾರ್, ನಗರಾಧ್ಯಕ್ಷ ಸಂತೋಷ್, ಸಮಾಜಸೇವಕ ರಮೇಶ್, ಗಣೇಶ್, ಧರ್ಮಣ್ಣ, ಪ್ರಶಾಂತ್, ರಘು, ಲೋಕೇಶ್, ಶೇಖರನಾಯ್ಕ ಸೇರಿದಂತೆ ಹಲವರು ಹಾಜರಿದ್ದರು. ಭೈರವ ಯುವಕ ಸಂಘದ ವತಿಯಿಂದ ಪ್ರಸಾದ ವಿನಿಯೋಗಿಸಲಾಯಿತು.