ಕದಾಳು ಗ್ರಾಮದಲ್ಲಿ ಚಿರತೆ ಸೆರೆ

 ಚಿರತೆ ಸೆರೆ
ಚಿರತೆ ಸೆರೆ
Published on

ಆಲೂರು:

ಹಲವು ದಿನಗಳಿಂದ ತಾಲೂಕಿನ ಕದಾಳು, ಕಬ್ಬಿನಹಳ್ಳಿ ಬಿಲುಗುಂದ, ಮುಳುಗಡೆ ಗೊದ್ದನಕೊಪ್ಪಲು ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಶುಕ್ರವಾರ ಕೊನೆಗೂ ಬೋನಿಗೆ ಬಿದ್ದಿದೆ. ಆತಂಕದಲ್ಲಿ ಕಾಲ ಕಳೆಯುತ್ತಿದ್ದ ಜನರು ನಿರಾಳರಾಗಿದ್ದಾರೆ.

ತಾಲೂಕಿನ ಕಸಬಾ ಹೋಬಳಿಗೆ ಸೇರಿದ ಕದಾಳು ಹಾಗೂ ಬಿಲುಗುಂದ ಗ್ರಾಮಗಳ ನಡುವೆ ಇರುವ ಹಲವು ಗ್ರಾಮಗಳ ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಕಳೆದ ಎರಡು ದಿನಗಳ ಹಿಂದೆ ಎರಡು-ಮೂರು ಕಡೆಗಳಲ್ಲಿ ಬೋನು ಅಳವಡಿಸಿದ್ದರು. ಆದರೂ ಚಿರತೆ ಸೆರೆಯಾಗಿರಲಿಲ್ಲ. ಶುಕ್ರವಾರ ರಾತ್ರಿ ಕದಾಳು ಗ್ರಾಮದ ಸಮೀಪದಲ್ಲಿರುವ ಯಗಚಿ ನದಿಯ ದಡದಲ್ಲಿರುವ ಜಮೀನಿನಲ್ಲಿ ಅಳವಡಿಸಿದ್ದ ಬೋನಿಗೆ ಚಿರತೆ ಬಿದ್ದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net