

ಮೂರ‌್ನಾಲ್ಕು ವರ್ಷಗಳಿಂದ ತೋಟದ ಕಾಫಿ ಹಣ್ಣು ಕೊಯ್ಲಿನಿಂದ ಹಿಡಿದು ಮರಗಸಿ, ಸ್ಪಿಂಕ್ಲರ್, ಔಷಧ ಸಿಂಪಡಣೆ, ಗೊಬ್ಬರ ಹಾಕುವುದು, ಗಿಡಕಸಿ ಸೇರಿದಂತೆ ಇತರೆ ಎಲ್ಲ ತೋಟ, ಗದ್ದೆಗಳ ಕೆಲಸ ಕಾರ್ಯಗಳು ಕಾರ್ಮಿಕರ ಕೊರತೆ ಇಲ್ಲದೆ ಉತ್ತಮವಾಗಿ ನಡೆಯುತ್ತಿತ್ತು. ಆದರೀಗ ಅಸ್ಸಾಂ ರಾಜ್ಯದ ವಲಸಿಗ ಕಾರ್ಮಿಕರು ಚುನಾವಣೆ ಹಿನ್ನೆಲೆಯಲ್ಲಿ ತಮ್ಮೂರಿಗೆ ತೆರಳುತ್ತಿರುವುದರಿಂದ ಸಕಾಲದಲ್ಲಿ ಆಗಬೇಕಾದ ಕೆಲಸಗಳು ವಿಳಂಬವಾಗುತ್ತಿದೆ. ಹೊರ ರಾಜ್ಯಗಳ ಕಾರ್ಮಿಕರು ಬರುವವರೆಗೂ ಕಾಯಬೇಕಿದೆ. ಶಾರಿಬ್ ಫರ್ಹಾನ್, ಅಧ್ಯಕ್ಷ, ಅರೇಹಳ್ಳಿ ಕಾಫಿ ಬೆಳೆಗಾರರ ಸಂಘ