ಕೆ.ಎಂ.ನಾಗರಾಜುಗೆ ಕರ್ನಾಟಕ ಗುರುರತ್ನ ಪ್ರಶಸ್ತಿ

 ಹಾಸನ ನಗರದ ಹೇಮಾವತಿ ನಗರದ ಎಲೈಟ್ ಸ್ಕೂಲ್‌ನ ಆಡಳಿತಾಧಿಕಾರಿ ಕೆ.ಎಂ. ನಾಗರಾಜು ಅವರಿಗೆ  ಗುರುರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ಜೆ ರಾಮಚಂದ್ರನ್, ಡಾ. ರಾಜಶೇಖರ್, ಸಂಗೀತಾ ಇದ್ದರು.
ಹಾಸನ ನಗರದ ಹೇಮಾವತಿ ನಗರದ ಎಲೈಟ್ ಸ್ಕೂಲ್‌ನ ಆಡಳಿತಾಧಿಕಾರಿ ಕೆ.ಎಂ. ನಾಗರಾಜು ಅವರಿಗೆ ಗುರುರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ಜೆ ರಾಮಚಂದ್ರನ್, ಡಾ. ರಾಜಶೇಖರ್, ಸಂಗೀತಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆ.ಎಂ.ನಾಗರಾಜುಗೆ ಕರ್ನಾಟಕ ಗುರುರತ್ನ ಪ್ರಶಸ್ತಿ
  • ಎಲೈಟ್ ಸ್ಕೂಲ್‌ನ ಆಡಳಿತಾಧಿಕಾರಿ ಕೆ.ಎಂ. ನಾಗರಾಜು
ಹಾಸನ: ನಗರದ ಹೇಮಾವತಿ ನಗರದ ಎಲೈಟ್ ಸ್ಕೂಲ್‌ನ ಆಡಳಿತಾಧಿಕಾರಿ ಕೆ.ಎಂ. ನಾಗರಾಜು ಅವರು ಚೆನ್ನೈ ಮೂಲದ ಎಎಂಇಟಿ ವಿಶ್ವವಿದ್ಯಾಲಯ ಕೊಡಮಾಡುವ ಕರ್ನಾಟಕ ಗುರುರತ್ನ ಪ್ರಶಸ್ತಿ-2025ಕ್ಕೆ ಭಾಜನರಾಗಿದ್ದಾರೆ.
ಕೆ.ಎಂ.ನಾಗರಾಜು ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ 25 ವರ್ಷಗಳ ನಿರಂತರ ಶೈಕ್ಷಣಿಕ ಸಾಧನೆಗಳು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ನಾವೀನ್ಯತೆ ಹಾಗೂ ಶೈಕ್ಷಣಿಕ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಿಗೆ ಸುಲಭ ಹಾಗೂ ಪರಿಣಾಮಕಾರಿಯಾಗಿ ಬೋಧಿಸುವ ವಿವಿಧ ಕಲಿಕಾ ವಿಧಾನಗಳನ್ನು ಬಳಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು 25 ವರ್ಷಗಳಿಂದ ಅವಿರತವಾಗಿ ಶ್ರಮಿಸಿದ್ದಾರೆ. ಇವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಸುಮಾರು 700 ಜನರಲ್ಲಿ ಇವರು ಮೊದಲಿಗರಾಗಿ ಆಯ್ಕೆಗೊಂಡು ಅವಾರ್ಡ್ ಆಫ್ ಎಕ್ಸಲೆನ್ಸ್ ವಿಭಾಗದಲ್ಲಿ 2025ರ ಕರ್ನಾಟಕ ಗುರುರತ್ನ ಪ್ರಶಸ್ತಿ ನೀಡಿ ಇತ್ತೀಚೆಗೆ ಗೌರವಿಸಲಾಯಿತು.
ಎಲೈಟ್ ಶಾಲೆಯ ಆಡಳಿತಮಂಡಳಿ, ಬೋಧಕ ವರ್ಗ ಹಾಗೂ ಬೋಧಕೇತರ ವರ್ಗ, ಪಾಲಕರು, ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ರಾಜಶೇಖರ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net