ಪರಿಸರ ಉಳಿಸುವ ಕಾಯಕಕ್ಕೆ ಕೈಜೋಡಿಸಿ

ಹಸಿರು ಭೂಮಿ ಪ್ರತಿಷ್ಠಾನ ಹಾಗೂ ಹಾಸನದ ಚನ್ನಪಟ್ಟಣ ಬಡಾವಣೆಯ ಗುಡ್ ಸಿಟಿಜನ್ ಕಾಲೇಜಿನ ಆಶ್ರಯದಲ್ಲಿ ಬಡಾವಣೆಯ ಉದ್ಯಾನವನದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಆರ್.ಪಿ.ವೆಂಕಟೇಶ್ ಮೂರ್ತಿ, ಆರ್‌ಎಫ್‌ಒ ಕೃಷ್ಣೇಗೌಡ, ನಳಿನಾ, ಸಂಗೀತಾ, ಕವಿತಾ, ಅಭಿ, ಪುರುಷೋತ್ತಮ್, ಅಪ್ಪಾಜಿಗೌಡ, ಮಂಜುನಾಥ್ ಇತರರಿದ್ದರು.
ಹಸಿರು ಭೂಮಿ ಪ್ರತಿಷ್ಠಾನ ಹಾಗೂ ಹಾಸನದ ಚನ್ನಪಟ್ಟಣ ಬಡಾವಣೆಯ ಗುಡ್ ಸಿಟಿಜನ್ ಕಾಲೇಜಿನ ಆಶ್ರಯದಲ್ಲಿ ಬಡಾವಣೆಯ ಉದ್ಯಾನವನದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಆರ್.ಪಿ.ವೆಂಕಟೇಶ್ ಮೂರ್ತಿ, ಆರ್‌ಎಫ್‌ಒ ಕೃಷ್ಣೇಗೌಡ, ನಳಿನಾ, ಸಂಗೀತಾ, ಕವಿತಾ, ಅಭಿ, ಪುರುಷೋತ್ತಮ್, ಅಪ್ಪಾಜಿಗೌಡ, ಮಂಜುನಾಥ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪರಿಸರ ಉಳಿಸುವ ಕಾಯಕಕ್ಕೆ ಕೈಜೋಡಿಸಿ
  • ಹಸಿರು ಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ್ ಮೂರ್ತಿ ಮನವಿ
ಹಾಸನ: ಪರಿಸರ ಸಂರಕ್ಷಣೆ ಮತ್ತು ಹಸಿರು ವಾತಾವರಣ ನಿರ್ಮಾಣ ಉದ್ದೇಶದಿಂದ ಹಸಿರು ಭೂಮಿ ಪ್ರತಿಷ್ಠಾನ ಹಾಗೂ ಚನ್ನಪಟ್ಟಣ ಬಡಾವಣೆಯ ಗುಡ್ ಸಿಟಿಜನ್ ಕಾಲೇಜಿನ ಆಶ್ರಯದಲ್ಲಿ ಬಡಾವಣೆಯ ಉದ್ಯಾನವನದಲ್ಲಿ 200ಕ್ಕೂ ಹೆಚ್ಚು ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.
ಹಸಿರು ಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಆರ್. ಪಿ. ವೆಂಕಟೇಶ್ ಮೂರ್ತಿ ಮಾತನಾಡಿ, ಪರಿಸರ ಉಳಿವಿಗೆ ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕು. ಅಭಿವೃದ್ಧಿಯ ಭರಾಟೆಯಲ್ಲಿ ಹಸಿರು ಸಂಪತ್ತು ಕ್ಷೀಣಿಸುತ್ತಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಲು ಇಂತಹ ಕಾರ್ಯಕ್ರಮ ಅತ್ಯಗತ್ಯ ಎಂದರು.
ಮಹಾನಗರ ಪಾಲಿಕೆ ಕಾರ್ಯಕ್ಕೆ ಸಹಕಾರ ನೀಡಿ, ನೆಡಲಾದ ಗಿಡಗಳಿಗೆ ನೀರುಣಿಸಿ ನಿರ್ವಹಣೆಗೆ ಕೈಜೋಡಿಸಿದೆ. ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗವೂ ಪರಿಸರ ಕಾಳಜಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ವಕೀಲೆ ಗಿರಿಜಾಂಬಿಕಾ ಹಾಗೂ ಗುಡ್ ಸಿಟಿಜನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹೇಮಂತ್ ಕುಮಾರ್ ಮಾತನಾಡಿದರು.
ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದ ಆರ್‌ಎಫ್‌ಒ ಕೃಷ್ಣೇಗೌಡ, ಬಡಾವಣೆಯ ನಿವಾಸಿಗಳಾದ ನಳಿನಾ, ಸಂಗೀತಾ, ಕವಿತಾ, ಅಭಿ, ಹಸಿರು ಭೂಮಿ ಪ್ರತಿಷ್ಠಾನದ ಉಪಾಧ್ಯಕ್ಷ ಪುರುಷೋತ್ತಮ್, ಅಪ್ಪಾಜಿಗೌಡ, ಮಂಜುನಾಥ್, ಆಡಿಟರ್ ದಿನೇಶ್ ಕುಮಾರ್, ವೇಣುಗೋಪಾಲ್, ರಾಮೇಗೌಡ, ಮಮತಾ ಪಾಟೀಲ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net