ಸ್ವಾಭಿಮಾನದ ಬದುಕಿಗೆ ಶಿಕ್ಷಣವೇ ಶಕ್ತಿ

ಚನ್ನರಾಯಪಟ್ಟಣದ ನಾಗೇಶ್ ಸಮೂಹ ಸಂಸ್ಥೆಯ ಜ್ಞಾನಸಾಗರ ಪಿಯು ಕಾಲೇಜಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರತಿಭಾನ್ವೇಷಣ ಪರೀಕ್ಷೆ ಹಾಗೂ ವೃತ್ತಿ ಸಮಾಲೋಚನ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಡಾ.ಕೆ.ನಾಗೇಶ್ ಉದ್ಘಾಟಿಸಿದರು. ರಘುಪತಿ, ಡಾ.ಭಾರತೀ ನಾಗೇಶ್, ಸುಜಾ ಫಿಲಿಪ್, ನವೀನ್ ಆರಾಧ್ಯ ಇದ್ದರು.
ಚನ್ನರಾಯಪಟ್ಟಣದ ನಾಗೇಶ್ ಸಮೂಹ ಸಂಸ್ಥೆಯ ಜ್ಞಾನಸಾಗರ ಪಿಯು ಕಾಲೇಜಿನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರತಿಭಾನ್ವೇಷಣ ಪರೀಕ್ಷೆ ಹಾಗೂ ವೃತ್ತಿ ಸಮಾಲೋಚನ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಡಾ.ಕೆ.ನಾಗೇಶ್ ಉದ್ಘಾಟಿಸಿದರು. ರಘುಪತಿ, ಡಾ.ಭಾರತೀ ನಾಗೇಶ್, ಸುಜಾ ಫಿಲಿಪ್, ನವೀನ್ ಆರಾಧ್ಯ ಇದ್ದರು.
Published on
ಚನ್ನರಾಯಪಟ್ಟಣ: ಸ್ವಾಭಿಮಾನದ ಬದುಕಿಗೆ ಶಿಕ್ಷಣವೇ ಶಕ್ತಿಯಾಗಿದ್ದು, ಇದರಿಂದ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಕೆ ನಾಗೇಶ್ ತಿಳಿಸಿದರು.
ಪಟ್ಟಣದ ನಾಗೇಶ ಸಮೂಹ ಶಿಕ್ಷಣ ಸಂಸ್ಥೆಯ ಜ್ಞಾನಸಾಗರ ಪಿಯು ಕಾಲೇಜಿನ ವತಿಯಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರತಿಭಾನ್ವೇಷಣೆ ಪರೀಕ್ಷೆ ಹಾಗೂ ವೃತ್ತಿ ಸಮಾಲೋಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಓದಿನ ಹಸಿವಿರಬೇಕು, ಗುರಿಯನ್ನಿಟ್ಟುಕೊಂಡು ವ್ಯಾಸಂಗ ಮಾಡಬೇಕು. ಮನಸ್ಸಿಟ್ಟು ಅಭ್ಯಾಸ ನಡೆಸಿದಲ್ಲಿ ಎಲ್ಲವೂ ಕರಗತವಾಗಲಿದೆ. ಓದಿನ ಜತೆಗೆ ಕ್ರೀಡೆ, ಸಾಂಸ್ಕೃತಿಕ, ಸೇವಾ ಚಟುವಟಿಕೆಗಳು ಬುದ್ಧಿ ವಿಕಸನಕ್ಕೆ ಪೂರಕವಾಗಲಿದೆ ಎಂದು ಹೇಳಿದರು.
ಅದೃಷ್ಟದ ಮೇಲೆ ನಂಬಿಕೆ ಇಡಬೇಡಿ. ಮೌಢ್ಯಗಳಿಂದ ದೂರವಿರಬೇಕು. ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಕನಸಿನೊಳಗೆ ಕನಸು ಕಾಣಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ತಿಳಿದುಕೊಳ್ಳುವ ಕುತೂಹಲದ ತುಡಿತವಿರಬೇಕು. ನಿಮ್ಮ ಸಾಧನೆ ಇತರರಿಗೆ ಸ್ಫೂರ್ತಿಯಾಗುವಂತಿರಬೇಕು. ನಿಮಗೆ ಶಿಕ್ಷಣವೇ ಮೊದಲ ಗುರಿಯಾಗಿರಬೇಕು ಎಂದರು.
ರಘು ಪ್ರಸಾದ್ ಅವರು ಹತ್ತನೇ ತರಗತಿ ನಂತರ ಇರುವ ವಿವಿಧ ಕೋರ್ಸ್‌ಗಳು, ಅವುಗಳ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಭಾರತೀ ನಾಗೇಶ್, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಮೂಲಕ ಉತ್ತಮ ಶಿಕ್ಷಣ ನೀಡಲು ನಮ್ಮ ಸಂಸ್ಥೆ ಬದ್ಧವಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಅವಕಾಶ ನೀಡುತ್ತೇವೆ ಎಂದು ಹೇಳಿದರು.
ಸಂಸ್ಥೆಯ ಡೀನ್ ಡಾ.ಸುಜಾ ಫಿಲಿಪ್ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳಿಗೆ ಪ್ರತಿಭಾನ್ವೇಷಣಾ ಪರೀಕ್ಷೆ ನಡೆಸಲಾಯಿತು. ಸುಮಾರು 600 ವಿದ್ಯಾರ್ಥಿಗಳು ಹಾಜರಿದ್ದರು. ಉಪ ಪ್ರಾಂಶುಪಾಲ ಡಾ.ನವೀನ್ ಆರಾಧ್ಯ, ಸಂಸ್ಥೆಯ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net