ಪರರಪೀಡನೆ ಪಾಪವೆಂಬ ಅರಿವು ಅಗತ್ಯ

ಹಾಸನದ ಶ್ರೀ ಆದಿಚುಂಚನಗಿರಿ ಶಾಖಾ ಮಠದಲ್ಲಿ ಗುರುಪೂರ್ಣಿಮೆ ಹಾಗೂ ಗುರು ತೋರಿದ ದಾರಿ- ತಿಂಗಳ ಮಾಮನ ತೇರು-143ನೇ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಶಂಭುನಾಥ ಸ್ವಾಮೀಜಿ, ಪ್ರೊ.ಎಂ. ಕೃಷ್ಣೇಗೌಡ, ಸಂಗಮೇಶ್ವರ ಸ್ವಾಮೀಜಿ, ಶ್ರೀ ವಿಜಯಕುಮಾರ ಸ್ವಾಮೀಜಿ, ಶ್ರೀ ರಾಮಚಂದ್ರ ಸ್ವಾಮೀಜಿ, ಶ್ರೀ ನಂದೀಶರ‌್ವ ಸ್ವಾಮೀಜಿ, ಸಕಲೇಶಪುರ ಎಂಎಲ್‌ಎ ಸಿಮೆಂಟ್ ಮಂಜು ಇತರರಿದ್ದರು.
ಹಾಸನದ ಶ್ರೀ ಆದಿಚುಂಚನಗಿರಿ ಶಾಖಾ ಮಠದಲ್ಲಿ ಗುರುಪೂರ್ಣಿಮೆ ಹಾಗೂ ಗುರು ತೋರಿದ ದಾರಿ- ತಿಂಗಳ ಮಾಮನ ತೇರು-143ನೇ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಶಂಭುನಾಥ ಸ್ವಾಮೀಜಿ, ಪ್ರೊ.ಎಂ. ಕೃಷ್ಣೇಗೌಡ, ಸಂಗಮೇಶ್ವರ ಸ್ವಾಮೀಜಿ, ಶ್ರೀ ವಿಜಯಕುಮಾರ ಸ್ವಾಮೀಜಿ, ಶ್ರೀ ರಾಮಚಂದ್ರ ಸ್ವಾಮೀಜಿ, ಶ್ರೀ ನಂದೀಶರ‌್ವ ಸ್ವಾಮೀಜಿ, ಸಕಲೇಶಪುರ ಎಂಎಲ್‌ಎ ಸಿಮೆಂಟ್ ಮಂಜು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪರರಪೀಡನೆ ಪಾಪವೆಂಬ ಅರಿವು ಅಗತ್ಯ
  • ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ
  • ಆದಿಚುಂಚನಗಿರಿ ಮಠದಲ್ಲಿ ಗುರುಪೂರ್ಣಿಮೆ

ಹಾಸನ:

ನಗರದ ಶ್ರೀ ಆದಿಚುಂಚನಗಿರಿ ಶಾಖಾ ಮಠದಲ್ಲಿ ಗುರುಪೂರ್ಣಿಮೆ ಹಾಗೂ ಗುರು ತೋರಿದ ದಾರಿ-ತಿಂಗಳ ಮಾಮನ ತೇರು-143ನೇ ಕಾರ್ಯಕ್ರಮವನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಗುರುವಾರ ಆಚರಿಸಲಾಯಿತು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಗುರು ಪೂರ್ಣಿಮೆ ಮತ್ತು ಜ್ಞಾನದ ಮಹತ್ವವನ್ನು ವಿವರಿಸಿ, ಬುದ್ಧನ ಜೀವನದ ಮೂರು ಪ್ರಮುಖ ಘಟ್ಟಗಳಾದ ಜನನ, ಜ್ಞಾನೋದಯ ಹಾಗೂ ಮಹಾಪರಿನಿರ್ವಾಣ ಮೂರೂ ಪೂರ್ಣಿಮೆಯಂದೇ ಸಂಭವಿಸಿದ್ದು ವಿಶೇಷ. ಆತ್ಮಜ್ಞಾನ ಲಭಿಸಿದ ನಂತರವೂ ಜ್ಞಾನಿಗಳು ತಮ್ಮ ಶರೀರವನ್ನು ಕಾಯ್ದುಕೊಳ್ಳುವುದು ಸ್ವಂತಕ್ಕಲ್ಲ, ಬದಲಾಗಿ ಸಮಾಜಕ್ಕೆ ಜ್ಞಾನವನ್ನು ಪಸರಿಸಲು. ಶರೀರವು ಧರ್ಮ ಸಾಧನೆಗೆ ಒಂದು ವಾಹನವಿದ್ದಂತೆ ಎಂದು ಮನುಷ್ಯ ಜೀವನದ ಉದ್ದೇಶವನ್ನು ವಿವರಿಸಿದರು.

ಜ್ಞಾನ ಪರಂಪರೆಯನ್ನು ಅತ್ಯಂತ ವ್ಯವಸ್ಥಿತವಾಗಿ ಮುಂದಿನ ಪೀಳಿಗೆಗೆ ತಲುಪಿಸಿದ ಶ್ರೇಷ್ಠ ಕೆಲಸವನ್ನು ವೇದವ್ಯಾಸ ಮಹರ್ಷಿಗಳು ಮಾಡಿದ್ದಾರೆ. ತಾಯಿಯಾದವಳು ಮಗುವಿಗೆ ಜೀರ್ಣವಾಗುವಂತೆ ಆಹಾರ ನೀಡುವ ಹಾಗೆ, ಮಹರ್ಷಿಗಳು ಅಂದಿನ ಜ್ಞಾನವನ್ನು ನಾಲ್ಕು ವೇದಗಳು (ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ) ಹಾಗೂ 18 ಪುರಾಣಗಳಾಗಿ ವಿಂಗಡಿಸಿದರು. ಮುಂದುವರಿದು ವ್ಯಾಸರ ಶ್ಲೋಕವೊಂದನ್ನು ಉಲ್ಲೇಖಿಸಿದ ಶ್ರೀಗಳು, ಪರೋಪಕಾರಾಯ ಪುಣ್ಯಾಯ, ಪಾಪಾಯ ಪರಪೀಡನಂ - ಅಂದರೆ ಅನ್ಯರಿಗೆ ಸಹಾಯ ಮಾಡುವುದೇ ಪುಣ್ಯ, ಇತರರಿಗೆ ಪೀಡನೆ ಅಥವಾ ತೊಂದರೆ ಕೊಡುವುದೇ ಪಾಪ ಎಂಬ ಸರಳ ಸತ್ಯವನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಆದಿಚುಂಚನಗಿರಿ ಮಠದ ಪರಂಪರೆ ಹಾಗೂ 71ನೇ ಜಗದ್ಗುರುಗಳ ಸೇವೆಯನ್ನು ಸ್ಮರಿಸಿದ ಶ್ರೀಗಳು, ಕೇವಲ ಭೌತಿಕ ಸಂಘಟನೆ ಅಥವಾ ಶಾಲಾ-ಕಾಲೇಜುಗಳ ಮೂಲಕ ಸಿಗುವ ಭೌತಿಕ ಪ್ರಬುದ್ಧತೆ ಮಾತ್ರ ಸಾಲದು. ವ್ಯಕ್ತಿಗೆ ಆಧ್ಯಾತ್ಮಿಕ ವಿಕಾಸ ಮತ್ತು ತನ್ನ ಅರಿವು ಮೂಡದ ಹೊರತು ಆತ ಅಜ್ಞಾನದ ಗುಲಾಮನಾಗಿಯೇ ಉಳಿಯುತ್ತಾನೆ. ಭೌತಿಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ-ಈ ಮೂರೂ ರಂಗಗಳಲ್ಲಿ ಸೇವೆ ಸಲ್ಲಿಸುವುದು ಶ್ರೇಷ್ಠ ಕಾರ್ಯ ಎಂದು ನುಡಿದರು.

ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಉಪನ್ಯಾಸ ನೀಡಿದರು. ಶ್ರೀ ಶಂಭುನಾಥ ಸ್ವಾಮೀಜಿ, ಶ್ರೀ ಸಂಗಮೇಶ್ವರ ಸ್ವಾಮೀಜಿ, ಶ್ರೀ ವಿಜಯಕುಮಾರ ಸ್ವಾಮೀಜಿ, ರಾಮಚಂದ್ರ ಸ್ವಾಮೀಜಿ, ನಂದೀಶರ‌್ವರ ಸ್ವಾಮೀಜಿ, ಸಕಲೇಶಪುರ ಎಂಎಲ್‌ಎ ಸಿಮೆಂಟ್ ಮಂಜು ಹಾಗೂ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಗುರವಂದನೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net