ಅಂಧ ಮಕ್ಕಳಿಗೆ ನೆರವು ನೀಡುವುದು ಪ್ರತಿಯೊಬ್ಬರ ಕರ್ತವ್ಯ

ಹಾಸನ ನಗರದ ಎಂ.ಕೃಷ್ಣ ಅಂಧ ಮಕ್ಕಳ ಶಾಲೆ ಆವರಣದಲ್ಲಿ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ರೋಟ್ರಾಕ್ಟ್ ವತಿಯಿಂದ ಅಂಧ ಮಕ್ಕಳಿಗೆ ಸೇವಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೋಟರಿ ಕ್ಲಬ್ ಅಧ್ಯಕ್ಷ ಡಿ.ಆರ್. ಮಹೇಶ್, ತಮ್ಮಯ್ಯ, ಕಟ್ಟಾಯ ಶಿವಕುಮಾರ್,  ಲೇಖನ, ದೇವಿ ಚರಣ್ ರೆಡ್ಡಿ ಇತರರಿದ್ದರು.
ಹಾಸನ ನಗರದ ಎಂ.ಕೃಷ್ಣ ಅಂಧ ಮಕ್ಕಳ ಶಾಲೆ ಆವರಣದಲ್ಲಿ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ರೋಟ್ರಾಕ್ಟ್ ವತಿಯಿಂದ ಅಂಧ ಮಕ್ಕಳಿಗೆ ಸೇವಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೋಟರಿ ಕ್ಲಬ್ ಅಧ್ಯಕ್ಷ ಡಿ.ಆರ್. ಮಹೇಶ್, ತಮ್ಮಯ್ಯ, ಕಟ್ಟಾಯ ಶಿವಕುಮಾರ್, ಲೇಖನ, ದೇವಿ ಚರಣ್ ರೆಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಂಧ ಮಕ್ಕಳಿಗೆ ನೆರವು ನೀಡುವುದು ಪ್ರತಿಯೊಬ್ಬರ ಕರ್ತವ್ಯ
  • ರೋಟರಿ ಕ್ಲಬ್ ಅಧ್ಯಕ್ಷ ಡಿ.ಆರ್.ಮಹೇಶ್ ಅಭಿಪ್ರಾಯ
ಹಾಸನ: ಅಂಧ ಮಕ್ಕಳಿಗೆ ನೆರವು ನೀಡುವುದು ಕೇವಲ ಸೇವೆ ಅಲ್ಲ. ಅದು ಸಮಾಜದ ಪ್ರತಿಯೊಬ್ಬರ ಕರ್ತವ್ಯ. ಅವರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಬೆಂಬಲ ನೀಡುವ ಮನೋಭಾವ ನಮ್ಮಲ್ಲಿರಬೇಕು ಎಂದು ರೋಟರಿ ಕ್ಲಬ್ ಅಧ್ಯಕ್ಷ ಡಿ.ಆರ್. ಮಹೇಶ್ ಹೇಳಿದರು.
ನಗರದ ಎಂ.ಕೃಷ್ಣ ಅಂಧ ಮಕ್ಕಳ ಶಾಲೆ ಆವರಣದಲ್ಲಿ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ರೋಟರ‌್ಯಾಕ್ಟ್ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಅಂಧ ಮಕ್ಕಳಿಗೆ ಸೇವಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅವರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಬೆಂಬಲ ನೀಡುವ ಮನೋಭಾವ ನಮ್ಮಲ್ಲಿರಬೇಕು. ಶಾಲೆ 1985ರಿಂದ ಕಾರ್ಯನಿರ್ವಹಿಸುತ್ತಿದ್ದು, ಅನೇಕ ವಿದ್ಯಾರ್ಥಿಗಳಿಗೆ ಆಶಾದೀಪವಾಗಿದೆ. ಪ್ರಸ್ತುತ ಕಟ್ಟಡದ ಅಭಿವೃದ್ಧಿಗೆ ಶಾಸಕರು, ಸಂಸದರು, ಜಿಲ್ಲಾಡಳಿತ ಹಾಗೂ ದಾನಿಗಳ ಸಹಕಾರ ಅಗತ್ಯವಿದೆ. ಎಲ್ಲರ ನೆರವಿನಿಂದ ಶೀಘ್ರದಲ್ಲೇ ಹೊಸ ಹಾಸ್ಟೆಲ್ ಕಟ್ಟಡ ನಿರ್ಮಾಣ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಮಾಜಿ ಸಹ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್ ಮಾತನಾಡಿ, ಅಂಧ ಮಕ್ಕಳಿಗೆ ಅನೇಕ ದಾನಿಗಳು ಊಟ, ಬಟ್ಟೆ, ಅವಶ್ಯಕ ಸಾಮಗ್ರಿಗಳ ಮೂಲಕ ಬೆಂಬಲ ನೀಡುತ್ತಿದ್ದಾರೆ. ಈಗ ಅತ್ಯಂತ ಅಗತ್ಯವಾದದ್ದು ಹೊಸ ಕಟ್ಟಡ. ನೂತನ ಅಧ್ಯಕ್ಷ ಬಿ.ಕೆ.ಮಂಜುನಾಥ್ ಅವರು ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದರಿಂದ ಎಲ್ಲರಿಂದ ಸಹಕಾರ ಬೇಕಾಗಿದೆ ಎಂದು ಹೇಳಿದರು.
ಅಂಧ ಮಕ್ಕಳ ಶಾಲೆ ಕಾರ್ಯದರ್ಶಿ ತಮ್ಮಯ್ಯ ಮಾತನಾಡಿದರು. ರೋಟರ‌್ಯಾಕ್ಟ್ ಸದಸ್ಯರು ಅಂಧ ವಿದ್ಯಾರ್ಥಿಗಳಿಗಾಗಿ ಮನೋರಂಜನಾ ಆಟಗಳನ್ನು ಆಯೋಜಿಸಿ, ಮಧ್ಯಾಹ್ನ್ನದ ಊಟವನ್ನು ವಿತರಿಸಿದರು.
ರೋಟರ‌್ಯಾಕ್ಟ್ ಅಧ್ಯಕ್ಷರಾದ ಲೇಖನ, ಕಾರ್ಯದರ್ಶಿ ದೇವಿ ಚರಣ್ ರೆಡ್ಡಿ, ರೋಟರಿ ಕ್ಲಬ್ ಅಧ್ಯಕ್ಷ ಡಿ.ಆರ್. ಮಹೇಶ್, ಕಾರ್ಯದರ್ಶಿ ಜೀವನ್ ಕೆ.ಗೌಡ, ಸದಸ್ಯರಾದ ನಿರ್ಮಲ್ ಕುಮಾರ್ ಜೈನ್, ಮದನ್ ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net