ಹಾಸನ ಲೀಡ್ ಬ್ಯಾಂಕ್‌ನಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಕ್ಕು ಪಡೆಯದೆ ಇರುವ ಠೇವಣಿಗಳ ನಿವಾರಣೆ ಮತ್ತು ತೀರ್ಮಾನ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ನಿರ್ದೇಶಕಿ ಕಾಯಾ ತ್ರಿಪಾಠಿ, ಪಿ.ಅರುಣ್ ಕುಮಾರ್, ಲತಾ ಸರಸ್ವತಿ, ಅರುಳ್ ಸೆಲ್ವಿ, ಚಂದ್ರಮೌಳಿ ಇತರರು ಇದ್ದರು.
ಹಾಸನ: ಹಕ್ಕು ಪಡೆಯದ ಠೇವಣಿಗಳನ್ನು ಸರಿಯಾದ ದಾಖಲೆಗಳ ಮೂಲಕ ಸುಲಭವಾಗಿ ವಾಪಸ್ ಪಡೆಯಲು ಸಾರ್ವಜನಿಕರು ಅನುಸರಿಸಬೇಕಾದ ವಿಧಾನಗಳ ಕುರಿತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ನಿರ್ದೇಶಕಿ ಕಾಯಾ ತ್ರಿಪಾಠಿ ಮಾಹಿತಿ ನೀಡಿದರು.
ಲೀಡ್ ಬ್ಯಾಂಕ್ ಹಾಸನದಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಹಕ್ಕು ಪಡೆಯದೆ ಇರುವ ಠೇವಣಿಗಳ ನಿವಾರಣೆ ಮತ್ತು ತೀರ್ಮಾನ ಶಿಬಿರದಲ್ಲಿ ಮಾತನಾಡಿದರು.
ಈಗಾಗಲೇ ಸೂಕ್ತ ದಾಖಲೆಗಳನ್ನು ನೀಡಿ ಕ್ಲೈಮ್ ಮಾಡಿದ ಠೇವಣಿಗಳನ್ನು, ಖಾತೆಗಳಿಗೆ ವರ್ಗಾಯಿಸಿದ ದಾಖಲೆಗಳನ್ನು ಫಲಾನುಭವಿಗಳಿಗೆ ನೀಡಲಾಯಿತು. ಹಲವು ಗ್ರಾಹಕರು ಹಣವನ್ನು ಕ್ಲೈಮ್ ಮಾಡಲು ಅಗತ್ಯ ಅರ್ಜಿಗಳನ್ನು ಈ ಶಿಬಿರದ ಮೂಲಕ ಬ್ಯಾಂಕ್‌ಗಳಿಗೆ ಸಲ್ಲಿಸಿದರು.
ಬೆಂಗಳೂರಿನ ಆರ್‌ಬಿಐ ಸಹಾಯಕ ಮಹಾ ಪ್ರಬಂಧಕ ಪಿ.ಅರುಣ್ ಕುಮಾರ್, ಲೀಡ್ ಬ್ಯಾಂಕ್‌ನ ಜಿಲ್ಲಾ ಅಗ್ರಣಿ ವ್ಯವಸ್ಥಾಪಕರಾದ ಲತಾ ಸರಸ್ವತಿ, ಹಾಸನದ ಲೈಫ್ ಇನ್ಶೂರೆನ್ಸ್ ಕಾರ್ಪೋರೇಷನ್ ಆಫ್ ಇಂಡಿಯಾದ ಹಿರಿಯ ವ್ಯವಸ್ಥಾಪಕರಾದ ಅರುಳ್ ಸೆಲ್ವಿ, ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕ ಚಂದ್ರಮೌಳಿ ಇತರರು ಇದ್ದರು.