ಸ್ಪರ್ಧಾತ್ಮಕ ಜಗತ್ತಿನಲ್ಲಿ ಆಧ್ಯಾತ್ಮದತ್ತ ಒಲವು ಕ್ಷೀಣ

ಆಲೂರು ತಾಲೂಕು ಪಾಳ್ಯ ಹೋಬಳಿ ಕಾರ್ಜುವಳ್ಳಿಯಲ್ಲಿರುವ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠದಲ್ಲಿ ಹಮ್ಮಿಕೊಂಡಿದ್ದ ಧರ್ಮ ಸದ್ಭಾವನಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸುತ್ತಿರುವುದು. ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲ ಸ್ವಾಮೀಜಿ, ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಶ್ರೀ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಾಂತವೀರ ಮಲ್ಲಿಕಾರ್ಜುನ ಸ್ವಾಮೀಜಿ ಇದ್ದರು.
ಆಲೂರು ತಾಲೂಕು ಪಾಳ್ಯ ಹೋಬಳಿ ಕಾರ್ಜುವಳ್ಳಿಯಲ್ಲಿರುವ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠದಲ್ಲಿ ಹಮ್ಮಿಕೊಂಡಿದ್ದ ಧರ್ಮ ಸದ್ಭಾವನಾ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸುತ್ತಿರುವುದು. ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲ ಸ್ವಾಮೀಜಿ, ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಶ್ರೀ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಶಾಂತವೀರ ಮಲ್ಲಿಕಾರ್ಜುನ ಸ್ವಾಮೀಜಿ ಇದ್ದರು.
Published on
ಸತೀಶ್ ಚಿಕ್ಕಕಣಗಾಲು ಆಲೂರು: ಗುರು-ಶಿಷ್ಯರ ಪರಂಪರೆ ಅನನ್ಯವಾದದ್ದು. ಉತ್ತಮ ಸಂಬಂಧ, ಒಡನಾಟ ಇಟ್ಟುಕೊಂಡರೆ ಆಶ್ರಮ ಮತ್ತು ಮಠಗಳು ಅಭಿವೃದ್ಧಿ ಹೊಂದಿ ಭಕ್ತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕವನ ವಾಚನದ ಮೂಲಕ ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿಯಲ್ಲಿರುವ ಶ್ರೀಮದ್ ರಂಭಾಪುರಿ ವೀರ ಸಿಂಹಾಸನ ಶಾಖಾ ಶ್ರೀ ಸಂಸ್ಥಾನ ಹಿರೇಮಠದಲ್ಲಿ ಲಿಂಗೈಕ್ಯ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಅವರ 47ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಪ್ರಸ್ತುತ ಶ್ರೀಗಳ ಪಟ್ಟಾಧಿಕಾರದ ಐದನೇ ವಾರ್ಷಿಕೋತ್ಸವ, ಜನ್ಮ ವರ್ಧಂತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮ ಸದ್ಭಾವನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಪ್ರತಿಯೊಬ್ಬ ಭಕ್ತರು ಮಠದ ಏಳ್ಗೆಗಾಗಿ ಶ್ರಮಿಸಬೇಕು. ಆ ದೇವರು ಎಂದಿಗೂ ಕೈ ಬಿಡುವುದಿಲ್ಲ. ಯಾವುದಾದರೂ ರೂಪದಲ್ಲಿ ದೇವರು ಫಲ ಕೊಡುತ್ತಾನೆ. ಇದನ್ನು ಎಲ್ಲರೂ ಅರಿತುಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಒತ್ತಡದ ಬದುಕಿನಲ್ಲಿಯೇ ಜೀವನ ನಡೆಸುತ್ತಿರುವ ಪರಿಣಾಮ ಅವರ ಬಳಿ ಆಧ್ಯಾತ್ಮದತ್ತ ಒಲವು ಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ನುಡಿದರು.
ಸಾಹಿತಿ ಪರಮೇಶ್ ಮಡಬಲು ಮಾತನಾಡಿ, ಮಠ ಮಾನ್ಯಗಳಿಂದ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಅತ್ಯುತ್ತಮ ಸಂಸ್ಕಾರ ಕೂಡ ಜೀವನದಲ್ಲಿ ದೊರೆಯುತ್ತದೆ ಎಂಬುದನ್ನು ಯಾರು ಕೂಡ ಮರೆಯಬಾರದು. ಪಾಲಕರು ತಮ್ಮ ಮಕ್ಕಳಿಗೆ ಆಧ್ಯಾತ್ಮಕತೆ ಬಗ್ಗೆ ತಿಳಿಯಪಡಿಸಬೇಕಿದೆ. ಹೀಗಾಗಿ ಅವರಲ್ಲಿ ಕೂಡ ಧಾರ್ಮಿಕತೆ ಬೆಳೆಯಲು ಸಾಧ್ಯವಾಗುತ್ತದೆ. ಅದಕ್ಕಾಗಿ ನಿಷ್ಕಾಳಜಿ ವಹಿಸಬಾರದು ಎಂದು ತಿಳಿಸಿದರು.
------------
ಗುರುವಿನ ಕರುಣೆ ಬಹಳ ದೊಡ್ಡದು
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕಾರ್ಜುವಳ್ಳಿ ಹಿರೇಮಠದ ಪೀಠಾಧ್ಯಕ್ಷರಾದ ಷ.ಬ್ರ.ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಗುರು ತನ್ನ ಜತೆಗೆ ಇದ್ದಾನೆ ಎಂಬ ಭಾವನೆಯೇ ಭಕ್ತನಿಗೆ ಆನೆ ಬಲ ತುಂಬುತ್ತದೆ. ಜೀವನವನ್ನು ಪ್ರೀತಿಸುವ, ಎದುರಿಸುವ ಧೈರ್ಯ, ಶಕ್ತಿಯನ್ನು ವೃದ್ಧಿಸುತ್ತದೆ. ಗುರುಬಲವು ಕ್ಷಾತ್ರತೇಜಕ್ಕೆ ಬೆಂಬಲವಾಗಿ ನಿಂತು ಮುನ್ನಡೆಸಿದ ಅದೆಷ್ಟೋ ನಿದರ್ಶನಗಳು ನಮ್ಮ ಇತಿಹಾಸದಲ್ಲಿವೆ ಎಂದರು.
ಭಾರತೀಯ ಪರಂಪರೆಯಲ್ಲಿ ಗುರುವಿಗೆ ಮಹೋನ್ನತ ಸ್ಥಾನ ನೀಡಲಾಗಿದೆ. ಹರ ಮುನಿದರೆ ನಮ್ಮ ಗುರುವು ಕಾಯುವನು ಗುರು ಮುನಿದರೆ ಕಾಯುವವರು ಯಾರಿನ್ನು. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಮಾತು ಗುರುವಿನ ಮಹತಿಯನ್ನು ಸಾರುತ್ತದೆ. ಹಾಗಂತ ಗುರು ವಿನಾಕಾರಣ ಕೋಪ ಮಾಡಿಕೊಳ್ಳುವವನಲ್ಲ. ಅವನು ಕರುಣಾ ಸಾಗರ, ಮಮತೆಯ ಮಡಿಲು. ಗುರುವಿನಲ್ಲಿ ತ್ರಿಮೂರ್ತಿಗಳನ್ನು ಕಾಣುವುದು ವಿಶೇಷ. ಹಾಗೆಂದು ಈ ಗೌರವ ಭಾವನೆ ಸುಮ್ಮನೆ ಬಂದಿಲ್ಲ. ನಿರಂತರ ಅನುಷ್ಠಾನ, ತಪೋಬಲದ ಮೂಲಕ ಇಂತಹ ಸಿದ್ಧಿಯನ್ನು ಗುರು ಗಳಿಸುತ್ತಾನೆ ಎಂದು ತಿಳಿಸಿದರು.
ಧರ್ಮ ಸೇವಾ ಕೌಸ್ತುಭ ಪ್ರಶಸ್ತಿ ಪ್ರದಾನ
ವೇದಿಕೆಯ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಮಠದಲ್ಲಿ ಗಂಗಾಪೂಜೆ, ಗೋಪೂಜೆ, ಕಂಕಣಧಾರಣೆ, ಮಹಾಸಂಕಲ್ಪ, ಪುಣ್ಯಾಹ ಸ್ವಸ್ತಿವಾಚನ, ನವಗ್ರಹಯುಕ್ತ ಪ್ರಮುಖ ಕಲಶಾರಾಧನೆಗಳು, ಶ್ರೀ ಜಗದ್ಗುದು ರೇಣುಕಾಚಾರ್ಯರ ಸನ್ನಿಧಿಯಲ್ಲಿ ಮಹಾರುದ್ರಾಭಿಷೇಕ, ನವನೀತ (ಬೆಣ್ಣೆ) ಅಲಂಕಾರ, ಪುಷ್ಪಾರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ, ಶ್ರೀ ವನದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ಮಠದ ಹಿರಿಯ ಶ್ರೀಗಳವರ ಸನ್ನಿಧಿಯಲ್ಲಿ ಶ್ರೀ ಇಷ್ಟನಾಗ-ಸಿದ್ಧಿನಾಗ-ಮುಕ್ತಿನಾಗ ದೇವರ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ, ಅಷ್ಟೋತ್ತರ ಅರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ ನಡೆದವು.
ಶ್ರೀ ಮಠದಿಂದ ನೀಡುವ ಧರ್ಮ ಸೇವಾ ಕೌಸ್ತುಭ ಪ್ರಶಸ್ತಿಯನ್ನು ತಿಪ್ಪಾಪುರದ ಕಾಫಿ ಬೆಳಗಾರರಾದ ಗುರುಶಾಂತ ಅವರಿಗೆ ನೀಡಿ ಗೌರವಿಸಲಾಯಿತು. ನಂತರ ಶ್ರೀಗಳಿಂದ ನೀಡುವ ಗೌರವ ಗುರುರಕ್ಷೆಯನ್ನು ಕೆ.ವಿ.ಯೋಗೇಶ್, ಕಾರ್ಜುವಳ್ಳಿ, ಮರಿಸ್ವಾಮಿ ಕೆರೆಹಳ್ಳಿ, ಬಸವಣ್ಣ ಬೆಳಮೆ, ರಕ್ಷಿತ್ ನಾಕಲಗೂಡು, ವಿರೂಪಾಕ್ಷ ಮಡಬಲು, ಎಚ್.ಪಿ.ಹೊನ್ನಪ್ಪ ಹೊಲ್ಲಹಳ್ಳಿ ಪಡೆದರು.
ಕೊಡಗಿನ ಮುದ್ದಿನಕಟ್ಟೆ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಗೋವಿನಕೋವಿ ಮಠದ ಶ್ರೀ ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಹಾಲ ಸ್ವಾಮೀಜಿ, ಕೊಡಗು ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿ, ಯಸಳೂರು ತೆಂಕಲಗೂಡು ಬೃಹನ್ಮಠದ ಶ್ರೀ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಂಕ್ಲಾಪುರ ಮಠದ ಶ್ರೀ ಶಾಂತವೀರ ಮಲ್ಲಿಕಾರ್ಜುನ ಸ್ವಾಮೀಜಿ, ಆಲೂರು ವೀರಶೈವ ಲಿಂಗಾಯತ ಸಂಘದ ಉಪಾಧ್ಯಕ್ಷ ಡಿ.ಎಸ್.ಜಯಣ್ಣ, ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಅಜಿತ್ ಚಿಕ್ಕಕಣಗಾಲು, ವೀರಶೈವ ಮುಖಂಡರಾದ ಕಟ್ಟೆಗದ್ದೆ ನಾಗರಾಜ್, ವಿನೋದ್ ಕುಮಾರ್ ಮರಸು, ಜಗದೀಶ್ ಶಾಸ್ತ್ರಿ ಮಾವನೂರು, ಶಶಿಕುಮಾರ್ ಶಾಸ್ತ್ರಿ ವಿರುಪಾಪುರ, ಶಿವಪ್ರಸಾದ ಶಾಸ್ತ್ರಿ ದೊಡ್ಡಪುರ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net