ನೂರಾರು ಈಡುಗಾಯಿ ಒಡೆದ ಕಾರ್ಯಕರ್ತರು

ಹಾಸನ ನಗರದ ಎನ್.ಆರ್ ವೃತ್ತದಲ್ಲಿ ಮಾಜಿ ಪ್ರಧಾನಿ ದೇವೇಗೌಡರ 30ಅಡಿ ಎತ್ತರದ ಕಟೌಟ್‌ಗೆ ಸ್ವರೂಪ್ ಪ್ರಕಾಶ್, ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್ ಲಿಂಗೇಶ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಬೃಹತ್ ಕ್ರೇನ್ ಸಹಾಯದಿಂದ ಕ್ಷೀರಾಭಿಷೇಕ, ಪುಷ್ಪಾಭಿಷೇಕ ಸಮರ್ಪಿಸಿದರು.
ಹಾಸನ ನಗರದ ಎನ್.ಆರ್ ವೃತ್ತದಲ್ಲಿ ಮಾಜಿ ಪ್ರಧಾನಿ ದೇವೇಗೌಡರ 30ಅಡಿ ಎತ್ತರದ ಕಟೌಟ್‌ಗೆ ಸ್ವರೂಪ್ ಪ್ರಕಾಶ್, ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್ ಲಿಂಗೇಶ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಬೃಹತ್ ಕ್ರೇನ್ ಸಹಾಯದಿಂದ ಕ್ಷೀರಾಭಿಷೇಕ, ಪುಷ್ಪಾಭಿಷೇಕ ಸಮರ್ಪಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ನೂರಾರು ಈಡುಗಾಯಿ ಒಡೆದ ಕಾರ್ಯಕರ್ತರು
  • ಹಾಸನದಲ್ಲಿ ಎಚ್.ಡಿ.ದೇವೇಗೌಡರ ಜನ್ಮದಿನಾಚರಣೆ
  • ಬೃಹತ್ ಕಟೌಟ್‌ಗೆ ಪುಷ್ಪಾರ್ಚನೆ
ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ 94ನೇ ಜನ್ಮದಿನವನ್ನು ನಗರ ಹಾಗೂ ಜಿಲ್ಲೆಯ ವಿವಿಧೆಡೆ ವಿನೂತನ ರೀತಿಯಲ್ಲಿ ಆಚರಿಸಲಾಯಿತು.
ಜನಾನುರಾಗಿ, ದೇಶಕಂಡ ಅಪ್ರತಿಮ ರಾಜಕಾರಣಿ, ಮಣ್ಣಿನಮಗ ನೂರು ಕಾಲ ಬಾಳಲಿ ಎಂದು ನೀರುಬಾಗಿಲು ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಸ್ಥಳೀಯ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ನೇತೃತ್ವದಲ್ಲಿ ಅರ್ಚನೆ ಹಾಗೂ ವಿಶೇಷ ಪೂಜೆ ಮಾಡಿಸಲಾಯಿತು. ಈ ವೇಳೆ ನೂರಾರು ಈಡುಗಾಯಿ ಒಡೆದ
ಕಾರ್ಯಕರ್ತರು, ದೇವೇಗೌಡರ ಪರ ಜಯಘೋಷ ಮೊಳಗಿಸಿ, ಸಿಹಿಹಂಚಿ ಸಂಭ್ರಮಿಸಿದರು.
ಕ್ರೇನ್ ಸಹಾಯದಿಂದ ಕ್ಷೀರಾಭಿಷೇಕ:
ಜೆಡಿಎಸ್ ಮುಖಂಡರು, ಕಾರ್ಯಕರ್ತರು ಆಜಾದ್ ರಸ್ತೆಯಲ್ಲಿರುವ ಹಜರತ್ ಗುಜರಾತಿ ಬಾದ್ ಷಾ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಗರದ ಎನ್.ಆರ್ ವೃತ್ತದಲ್ಲಿ ದೇವೇಗೌಡರ 30ಅಡಿ ಎತ್ತರದ ಕಟೌಟ್‌ಗೆ ಸ್ವರೂಪ್ ಪ್ರಕಾಶ್, ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್ ಲಿಂಗೇಶ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಬೃಹತ್ ಕ್ರೇನ್ ಸಹಾಯದಿಂದ ಕ್ಷೀರಾಭಿಷೇಕ, ಪುಷ್ಪಾಭಿಷೇಕ ನೆರವೇರಿಸಿದರು. ಪುಷ್ಪಾರ್ಚನೆ, ಸಿಹಿ ವಿತರಣೆ ಹಾಗೂ ಪಟಾಕಿ ಸಿಡಿಸಲಾಯಿತು.
ಬಳಿಕ ನಗರದ ಗವೇನಹಳ್ಳಿ ಬಳಿ ಇರುವ ಕಾಮಧೇನು ಸಹಕಾರಿ ವಿದ್ಯಾಶ್ರಮಕ್ಕೆ ತೆರಳಿ ಕೇಕ್ ಕತ್ತರಿಸಿ ವೃದ್ಧಾಶ್ರಮದಲ್ಲಿದ್ದ ಹಿರಿಯರಿಗೆ ಹಣ್ಣು ವಿತರಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕರು, ಜಿಲ್ಲೆಯಲ್ಲಿ ಹುಟ್ಟಿ ಭಾರತ ದೇಶದ ಪ್ರಧಾನ ಮಂತ್ರಿ ಪಟ್ಟಕ್ಕೆ ಏರುವ ಮೂಲಕ ತಮ್ಮ ರಾಜಕೀಯ ಜೀವನದಲ್ಲಿ ಅತಿ ಎತ್ತರಕ್ಕೆ ಏರಿದ ಎಚ್.ಡಿ ದೇವೇಗೌಡ ಈ ನಾಡಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ರಾಜಕೀಯದಲ್ಲಿ ಸರಳತೆ, ಸೌಜನ್ಯ ಹಾಗೂ ಪ್ರಾಮಾಣಿಕತೆ ಉಳಿಸಿಕೊಂಡ ಕೆಲವೇ ನಾಯಕರಲ್ಲಿ ದೇವೇಗೌಡರೂ ಒಬ್ಬರು. ಎಲ್ಲ ವರ್ಗದ ಜನರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಅವರು ಸದಾ ಕಾರ್ಯನಿರ್ವಹಿಸಿದ್ದಾರೆ.
ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ, ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ಎಚ್.ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ಮುಖಂಡರಾದ ಸತ್ಯನಾರಾಯಣ, ಬೂವನಹಳ್ಳಿ ಸ್ವಾಮಿಗೌಡ, ಸಿ.ಆರ್.ಶಂಕರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net