ದೈವ ಚಿಂತನೆಯ ಅಧೀನದಲ್ಲಿದೆ ಮನುಷ್ಯ ಜೀವನ

ಹಾಸನ ನಗರದ ಸಂಸ್ಕೃತಂ ಸುರಭಾರತೀ ಸಭಾಂಗಣದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತಿನಿಂದ ಆಯೋಜಿಸಿದ್ದ ಭಾರತೀ ದರ್ಶನ ಉಪನ್ಯಾಸ ಮಾಲಿಕೆಯ 35ನೇ ಮಾಸಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ.ಜಿ.ಎನ್.ಅನಸೂಯಾ ಮಾತನಾಡಿದರು. ನಾಗರತ್ನ ಶ್ರೀಕಂಠಯ್ಯ, ಗಮಕಲಾಶ್ರೀ ರುಕ್ಮಿಣಿ ನಾಗೇಂದ್ರ ಇತರರಿದ್ದರು.
ಹಾಸನ ನಗರದ ಸಂಸ್ಕೃತಂ ಸುರಭಾರತೀ ಸಭಾಂಗಣದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತಿನಿಂದ ಆಯೋಜಿಸಿದ್ದ ಭಾರತೀ ದರ್ಶನ ಉಪನ್ಯಾಸ ಮಾಲಿಕೆಯ 35ನೇ ಮಾಸಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರೊ.ಜಿ.ಎನ್.ಅನಸೂಯಾ ಮಾತನಾಡಿದರು. ನಾಗರತ್ನ ಶ್ರೀಕಂಠಯ್ಯ, ಗಮಕಲಾಶ್ರೀ ರುಕ್ಮಿಣಿ ನಾಗೇಂದ್ರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೈವ ಚಿಂತನೆಯ ಅಧೀನದಲ್ಲಿದೆ ಮನುಷ್ಯ ಜೀವನ
  • ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಅನಸೂಯಾ ಅಭಿಪ್ರಾಯ
  • 35ನೇ ಭಾರತೀ ದರ್ಶನ ಉಪನ್ಯಾಸ ಮಾಲಿಕೆ
ಹಾಸನ: ಮನುಷ್ಯ ಎಷ್ಟೇ ಯೋಜನೆ ರೂಪಿಸಿಕೊಂಡರೂ ಅಂತಿಮವಾಗಿ ದೈವ ಸಂಕಲ್ಪವೇ ಮೇಲುಗೈ ಸಾಧಿಸುತ್ತದೆ. ಮನುಷ್ಯನ ಜೀವನದಲ್ಲಿ ನಡೆಯುವ ಅನೇಕ ಘಟನೆಗಳು ದೈವಚಿಂತನೆಯ ಅಧೀನದಲ್ಲಿದ್ದು, ಆಯುಷ್ಯವಂತನಿಗೆ ವಿಧಿಯೂ ಮರಣ ನೀಡಲು ಸಾಧ್ಯವಾಗುವುದಿಲ್ಲ ಎಂದು ಗೊರೂರು ಎ.ಎನ್.ವಿ. ಪ್ರಥಮ ದರ್ಜೆ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಜಿ.ಎನ್.ಅನಸೂಯಾ ಅಭಿಪ್ರಾಯಪಟ್ಟರು.
ನಗರದ ಸಂಸ್ಕೃತಂ ಸುರಭಾರತೀ ಸಭಾಂಗಣದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತಿನ ಹಾಸನ ಜಿಲ್ಲಾ ಘಟಕ ಹಾಗೂ ಸಂಸ್ಕೃತ ಸಂಘದ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ಇತ್ತೀಚೆಗೆ ಆಯೋಜಿಸಿದ್ದ ಭಾರತೀ ದರ್ಶನ ಉಪನ್ಯಾಸ ಮಾಲಿಕೆಯ 35ನೇ ಮಾಸಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾಕವಿ ವಿರಚಿತ ಕನ್ನಡ ಜೈಮಿನಿ ಭಾರತದಿಂದ ಆಯ್ದ ‘ಭಕ್ತ ಚಂದ್ರಹಾಸ’ ಕಾವ್ಯ ಭಾಗದ ಕುರಿತು ಗಮಕ ವ್ಯಾಖ್ಯಾನ ನೀಡಿದ ಅವರು, ಚಂದ್ರಹಾಸನ ಜೀವನ ಕತೆಯ ಮೂಲಕ ದೈವ ಸಂಕಲ್ಪದ ಮಹತ್ವವನ್ನು ವಿವರಿಸಿದರು. ಬಾಲ್ಯದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡ ಚಂದ್ರಹಾಸನು ದಾದಿಯೊಬ್ಬಳ ಆಶ್ರಯದಲ್ಲಿ ಬೆಳೆಯುತ್ತಾನೆ. ನಂತರ ಆಕೆಯೂ ವಿಧಿವಶಳಾದಾಗ ಅವನು ಅನಾಥನಾಗಿ ಬೀದಿ ಮಕ್ಕಳೊಂದಿಗೆ ಜೀವನ ಸಾಗಿಸುವ ಪರಿಸ್ಥಿತಿ ಎದುರಾಗುತ್ತದೆ. ಆದರೆ, ಆ ಸಮಯದಲ್ಲಿ ಅವನಿಗೆ ಸಿಕ್ಕ ಸಾಲಿಗ್ರಾಮ ಶಿಲೆಯ ಪ್ರಭಾವದಿಂದ ಅವನ ಜೀವನವೇ ಬದಲಾಗುತ್ತದೆ. ಮುಂದೆ ಕುಂತಳ ದೇಶದ ರಾಜನಾಗುವ ಭಾಗ್ಯ ಅವನಿಗೆ ಒಲಿಯುತ್ತದೆ ಎಂಬುದನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುನಾದ ಸಂಗೀತ ಮತ್ತು ಗಮಕ ಶಾಲೆಯ ಶಿಕ್ಷಕಿ ವಿದುಷಿ ರಾಗಭಾವ ಮತ್ತು ಪದಭಾವಗಳ ಸಮನ್ವಯದೊಂದಿಗೆ ಕಾವ್ಯ ಭಾಗವನ್ನು ಗಾಯನ ಮಾಡಿ ಸಭಿಕರ ಮೆಚ್ಚುಗೆ ಪಡೆದರು.
ಸಂಸ್ಕೃತ ಸಂಘದ ಪರಮೇಶ್ವರ ಭಟ್, ನಾಗರತ್ನ ಶ್ರೀಕಂಠಯ್ಯ, ಗಮಕಲಾಶ್ರೀ ರುಕ್ಮಿಣಿ ನಾಗೇಂದ್ರ, ಎನ್.ಆರ್. ರಮೇಶ್, ರಮೇಶ್ ಮೂಲಿಮನಿ, ರಾಜೇಂದ್ರ, ಸುಬ್ರಹ್ಮಣ್ಯ, ಲತಾ ವೆಂಕಟಸುಬ್ಬಯ್ಯ, ವಿದುಷಿ ಸೌಮ್ಯಾ ಶ್ರೀಕಂಠ, ಮಂಜುನಾಥ್, ಎನ್.ಆರ್. ಲಲಿತಾಂಬಾ, ಕಲಾಶ್ರೀ, ಎಸ್.ಭುವನಾ, ಉಮಾ ನಾಗರಾಜ್, ಎ.ಆರ್. ಪ್ರೇಮಲತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net