ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕ ಆಡಳಿತ ಅವಶ್ಯ

 ಹಾಸನದ ಎಂ.ಜಿ.ರಸ್ತೆ ರವೀಂದ್ರನಗರದಲ್ಲಿರುವ ಜಿಲ್ಲಾ ಕುರುಹಿನಶೆಟ್ಟಿ ಭವನದಲ್ಲಿ ನೇಕಾರ ಕುರುಹಿನಶೆಟ್ಟಿ ಪತ್ತಿನ ಸಹಕಾರ ಸಂಘದ 13ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನ ಹಾಗೂ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಬೆಳ್ಳಿಚುಕ್ಕಿ ವೀರೇಂದ್ರ, ಕೆ.ಸಿ.ಕೃಷ್ಣಶೆಟ್ಟಿ ಇತರರಿದ್ದರು.
ಹಾಸನದ ಎಂ.ಜಿ.ರಸ್ತೆ ರವೀಂದ್ರನಗರದಲ್ಲಿರುವ ಜಿಲ್ಲಾ ಕುರುಹಿನಶೆಟ್ಟಿ ಭವನದಲ್ಲಿ ನೇಕಾರ ಕುರುಹಿನಶೆಟ್ಟಿ ಪತ್ತಿನ ಸಹಕಾರ ಸಂಘದ 13ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನ ಹಾಗೂ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಬೆಳ್ಳಿಚುಕ್ಕಿ ವೀರೇಂದ್ರ, ಕೆ.ಸಿ.ಕೃಷ್ಣಶೆಟ್ಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಸಹಕಾರಿ ಬೆಳ್ಳಿಚುಕ್ಕಿ ವೀರೇಂದ್ರ ಅಭಿಪ್ರಾಯ
  • ಸದಸ್ಯರ ವಾರ್ಷಿಕ ಮಹಾಸಭೆ
ಹಾಸನ: ಸಹಕಾರ ಕ್ಷೇತ್ರದಲ್ಲಿ ಪ್ರಾಮಾಣಿಕ ಆಡಳಿತ, ಸದಸ್ಯರ ವಿಶ್ವಾಸ ಮತ್ತು ಪಾರದರ್ಶಕ ಸೇವೆಯೇ ಸಂಸ್ಥೆಯ ಯಶಸ್ಸಿನ ಮೂಲಾಧಾರವಾಗಿದೆ ಎಂದು ಹಿರಿಯ ಸಹಕಾರಿ ಬೆಳ್ಳಿಚುಕ್ಕಿ ವೀರೇಂದ್ರ ಹೇಳಿದರು.
ನಗರದ ಎಂ.ಜಿ.ರಸ್ತೆ ರವೀಂದ್ರನಗರದಲ್ಲಿರುವ ಜಿಲ್ಲಾ ಕುರುಹಿನಶೆಟ್ಟಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ನೇಕಾರ ಕುರುಹಿನಶೆಟ್ಟಿ ಪತ್ತಿನ ಸಹಕಾರ ಸಂಘದ 13ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನ ಹಾಗೂ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಹಕಾರ ಕ್ಷೇತ್ರವು ಸಾಮಾನ್ಯ ಜನರ ಬದುಕಿನ ಆಧಾರಸ್ತಂಭವಾಗಿದೆ. ಆದರೆ ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಹಲವು ಸಹಕಾರ ಬ್ಯಾಂಕ್‌ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಾಗಿಲು ಮುಚ್ಚಿವೆ. ಕಳೆದ ವರ್ಷ ಬೆಂಗಳೂರಿನಲ್ಲೇ ಸುಮಾರು 18 ಸಹಕಾರ ಬ್ಯಾಂಕ್‌ಗಳು ಮುಚ್ಚಿದ ಪರಿಣಾಮ ಸಾವಿರಾರು ಠೇವಣಿದಾರರು ಸಂಕಷ್ಟ ಅನುಭವಿಸಿದ್ದಾರೆ. ಬಸವನಗುಡಿ ಸಹಕಾರ ಬ್ಯಾಂಕ್‌ನಲ್ಲಿ ಜೀವಮಾನದ ಉಳಿತಾಯ ಕಳೆದುಕೊಂಡು ಕೆಲವರು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆಗಳು ಸಹಕಾರ ಕ್ಷೇತ್ರಕ್ಕೆ ದೊಡ್ಡ ಪಾಠವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂತಹ ಸಂದರ್ಭದಲ್ಲಿ ಹಾಸನದ ನೇಕಾರ ಕುರುಹಿನಶೆಟ್ಟಿ ಪತ್ತಿನ ಸಹಕಾರ ಸಂಘ ಸದಸ್ಯರ ವಿಶ್ವಾಸ ಉಳಿಸಿಕೊಂಡು ಲಾಭದಾಯಕವಾಗಿ ಮುನ್ನಡೆಯುತ್ತಿರುವುದು ಶ್ಲಾಘನೀಯ. ಇದು ಆಡಳಿತ ಮಂಡಳಿಯ ದಕ್ಷತೆ ಮತ್ತು ಬದ್ಧತೆ ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಸಿ.ಕೃಷ್ಣಶೆಟ್ಟಿ ವಹಿಸಿದ್ದರು. ಕಳೆದ ಸಾಲಿನ ಆದಾಯ-ವೆಚ್ಚ, ಲಾಭಾಂಶ ಹಂಚಿಕೆ ಹಾಗೂ ಮುಂದಿನ ಲೆಕ್ಕಪರಿಶೋಧಕರ ನೇಮಕ ಸೇರಿ ವಿವಿಧ ವಿಷಯಗಳು ಚರ್ಚೆಯಾದವು. ಕಾರ್ಯಕ್ರಮದಲ್ಲಿ 2025-26ರಲ್ಲಿ ಸಾಧನೆ ಮಾಡಿದ 27 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇಂಡಿಯಾನಾ ಆಸ್ಪತ್ರೆ ಸಹಯೋಗದಲ್ಲಿ ನಡೆದ ಆರೋಗ್ಯ ಉಚಿತ ಶಿಬಿರದಲ್ಲಿ ನೂರಾರು ಜನ ತಪಾಸಣೆ ಮಾಡಿಸಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net