ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಾಗೇಶ್ ಮಾತನಾಡಿ, ಶಾಸಕ ಶಿವಲಿಂಗೇಗೌಡ ಅವರ ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯಿತಿಯ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನನಗೆ ಸಿಕ್ಕಿರುವ ಈ ಅವಕಾಶದಲ್ಲಿ ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ನೂತನ ಅಧ್ಯಕ್ಷರನ್ನು ನಿಕಟಪೂರ್ವ ಅಧ್ಯಕ್ಷರಾದ ಮೋಕ್ಷ, ಶಂಭುಲಿಂಗೇಗೌಡ, ಪ್ರಕಾಶ್, ಸದಸ್ಯರಾದ ಮೋಹನ್ ನಾಯ್ಕ, ಲಕ್ಷ್ಮೀಬಾಯಿ, ಮುಖಂಡರಾದ ಜಯಣ್ಣ, ಶಿವಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಅಭಿನಂದಿಸಿದರು.