ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು

 ಅರಸೀಕೆರೆಯಲ್ಲಿ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಕೆ.ಎಂ.ಶಿವಲಿಂಗೇಗೌಡ ಮಾತನಾಡಿದರು. ಅನಂತಕುಮಾರ್, ಕಿರಣ್ ಕುಮಾರ್, ಲಕ್ಷ್ಮೀಶ್, ಸಂತೋಷ್ ಇದ್ದರು.
ಅರಸೀಕೆರೆಯಲ್ಲಿ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಕೆ.ಎಂ.ಶಿವಲಿಂಗೇಗೌಡ ಮಾತನಾಡಿದರು. ಅನಂತಕುಮಾರ್, ಕಿರಣ್ ಕುಮಾರ್, ಲಕ್ಷ್ಮೀಶ್, ಸಂತೋಷ್ ಇದ್ದರು.
Published on
ಅರಸೀಕೆರೆ: ಜಗತ್ತಿಗೆ ವಿಶ್ವ ಮಾನವ ಸಂದೇಶ ಸಾರಿದ ಮಹಾನ್ ಚೇತನ ಕವಿ ಕುವೆಂಪು ಎಂದು ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಬಣ್ಣಿಸಿದರು.
ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕವಿ ಕುವೆಂಪು ಜನ್ಮದಿನಾಚರಣೆ ನಿಮಿತ್ತ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಟಕ, ಕಥೆ, ಕಾದಂಬರಿ, ಕವನ ಸಂಕಲನ ರಚನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಕೊಡುಗೆ ನೀಡಿದ ಕವಿಗೆ ಅತ್ಯುನ್ನತ ಗೌರವ ದೊರೆತಿದೆ. ಕನ್ನಡ ನಾಡು, ನುಡಿ, ನೆಲ, ಜಲದ ಬಗೆಗೆ ಕುವೆಂಪು ಹೊಂದಿದ್ದ ಕಾಳಜಿ, ಅಭಿಮಾನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಹಾಕಿಕೊಟ್ಟ ಸರ್ವಜನಾಂಗದ ಶಾಂತಿಯ ತೋಟದ ಮಾರ್ಗದಲ್ಲಿ ನಡೆದರೆ ನೆಮ್ಮದಿಯ ವಾತಾವರಣ ಸೃಷ್ಟಿಸಲು ಸಾಧ್ಯವಿದೆ. ಬದುಕಿನ ಸಮಗ್ರ ಚಿತ್ರಣ ಕುವೆಂಪು ಕೃತಿಗಳಲ್ಲಿ ಕಾಣಬಹುದು. ಕರವೇ ಪದಾಧಿಕಾರಿಗಳು ಮಹನೀಯರು ಜನ್ಮ ದಿನಾಚರಣೆ ಆಯೋಜಿಸಿರುವುದು ಪ್ರಶಂಸನೀಯ ಎಂದು ಬಣ್ಣಿಸಿದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಆರ್.ಅನಂತಕುಮಾರ್ ಮಾತನಾಡಿ, ಕುವೆಂಪು ಅವರ ತತ್ವ, ಚಿಂತನೆ, ಆದರ್ಶಗಳನ್ನು ಪಾಲಿಸೋಣ ಎಂದರು. ತಾಲೂಕು ಕರವೇ ಅಧ್ಯಕ್ಷ ಕಿರಣ್ ಕುಮಾರ್, ನಗರಾಧ್ಯಕ್ಷ ಸಂತೋಷ್, ಬಾಣಾವರ ಲಕ್ಷ್ಮೀಶ್ ಸೇರಿದಂತೆ ಹಲವರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net