ಗ್ಯಾರಂಟಿ ಯೋಜನೆಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಎಲ್ಲ ಫಲಾನುಭವಿಗಳಿಗೂ ಸರಿಯಾಗಿ ತಲುಪುತಿಲ್ಲ ಎಂಬ ಆರೋಪ ಕೇಳಿ ಬರುತ್ತಿದ್ದು, ಅಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳಬೇಕಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಸಾಕಷ್ಟು ಜನರಿಗೆ ಹಣ ಸಂದಾಯವಾಗಿಲ್ಲ ಇದಕ್ಕೆ ಏನು ಕಾರಣವೆಂಬುದನ್ನು ಪರಿಶೀಲಿಸಬೇಕು. ಮರಣ ಹೊಂದಿದವರ ಹೆಸರು ಪಡಿತರ ಚೀಟಿಯಲ್ಲಿ ಇದ್ದಲ್ಲಿ ಮಾಹಿತಿ ಪಡೆದು ತಿದ್ದುಪಡಿ ಮಾಡಿಕೊಟ್ಟರೆ ಇತರರಿಗೆ ಅನುಕೂಲವಾಗುತ್ತದೆ. ಜತೆಗೆ ಹಾಸಿಗೆಯಿಂದ ಏಳದವರು, ವಯಸ್ಸಾದವರಿಗೆ ಪಡಿತರ ಪಡೆಯಲು ಅನುಕೂಲ ಕಲ್ಪಿಸಿ, ಆಹಾರ ಇಲಾಖೆಯಲ್ಲಿನ ಜಾಗೃತಿ ಸಮಿತಿಗಳು ಕಾರ್ಯನಿರ್ವಹಿಸುತ್ತಿವೆಯೋ ಇಲ್ಲವೋ ತಿಳಿಯುತ್ತಿಲ್ಲ. ನನ್ನ ಗಮನಕ್ಕೆ ಬಂದಂತೆ ಹಳೇಬೀಡಿನಲ್ಲಿ ಒಬ್ಬರು ಗೃಹಲಕ್ಷ್ಮಿ ಹಣ ಬೇಡ ಎಂದಿದ್ದಾರೆ. ಆದರೆ ತಾಲೂಕಿನಲ್ಲಿ 156 ಜನರು ಗೃಹಲಕ್ಷ್ಮಿ ಹಣ ಬೇಡ ಎಂದಿದ್ದಾರೆ ಎಂದರೆ ಈ ಬಗ್ಗೆ ಮಾಹಿತಿ ಕೊಡಿ ಎಂದರು.